ಮತ ಕೇಳಲು ಬಂದ ಶಾಸಕ ಮಹೇಶ್ಗೆ ಜನರ ತರಾಟೆ: ಪ್ರತಿಮೆಗೆ ಹಾರ ಹಾಕಲು ಅವಕಾಶ ನೀಡದ ಜನ
🎬 Watch Now: Feature Video
ಚಾಮರಾಜನಗರ: ಕೊಳ್ಳೆಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಮಹೇಶ್ ಮತ ಕೇಳಲು ತೆರಳಿದ್ದ ವೇಳೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗದುಕೊಂಡಿರುವ ಘಟನೆ ನಡೆದಿದೆ. ಚುನಾವಣಾ ಪ್ರಚಾರಕ್ಕೆಂದು ಶಾನಕರು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಸಣಾಪುರ ಗ್ರಾಮಕ್ಕೆ ತೆರಳಿದ್ದ ವೇಳೆ ಗ್ರಾಮಸ್ಥರು 4 ಬಾರಿ ಅರ್ಜಿ ಕೊಟ್ಟರೂ ಕೆಲಸ ಆಗಲಿಲ್ಲ, ನಮ್ಮ ಪಂಚಾಯಿತಿ ಕಡೆ ನೀವು ಒಂದು ಸಾರಿಯೂ ಬಂದೇ ಇಲ್ಲಾ. 4 ಬಾರಿ ನಿಮಗೆ ಮತ ಹಾಕಿದ್ದೇವೆ ಎಂದು ಗ್ರಾಮದ ಉಪ್ಪಾರ ಸಮುದಾಯದ ಕೆಲವರು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಮದ ಭಗೀರಥ ಮಹರ್ಷಿ ಪ್ರತಿಮೆಗೆ ಹೂವಿನ ಹಾರ ಹಾಕಲು ಅವಕಾಶ ಮಾಡಿಕೊಡದೇ ನಾವೇ ಹಾರ ಹಾಕಿಕೊಳ್ಳುತ್ತೇವೆ, ನೀವು ಹೋಗಿ ಎಂದು ಆಕ್ರೋಶ ಹೊರಹಾಕಿ ವಾಪಸ್ ಕಳುಹಿಸಿದ್ದಾರೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಏರ್ಪಟ್ಟಿದ್ದು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಇದೆ.
ಇದನ್ನೂ ಓದಿ : ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡ, ತುಳಸಿ ಗೌಡರಿಂದ ಆಶೀರ್ವಾದ ಪಡೆದ ಪ್ರಧಾನಿ ಮೋದಿ