ರಾಮನಗರ: ಕೋರ್ಟ್‌ ಮುಂಭಾಗದ ಮೆಡಿಕಲ್ಸ್ ಶಾಪ್​ನಲ್ಲಿ ಕಳ್ಳತನ- ಸಿಸಿಟಿವಿ ವಿಡಿಯೋ - ವಿಡಿಯೋ

🎬 Watch Now: Feature Video

thumbnail

By ETV Bharat Karnataka Team

Published : Oct 19, 2023, 9:30 PM IST

ರಾಮನಗರ: ಕಳ್ಳರ ಗುಂಪೊಂದು ನ್ಯಾಯಾಲಯದ ಮುಂಭಾಗದಲ್ಲಿದ್ದ ಮೆಡಿಕಲ್​ ಶಾಪ್​ನಲ್ಲಿ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುರುವಾರ ಮುಂಜಾನೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದ 4 ಜನರ ಗುಂಪು ಚನ್ನಪಟ್ಟಣ ನಗರದ ನ್ಯಾಯಾಲಯದ ಮುಂಭಾಗದ ಭಾಸ್ಕರ್ ಮೆಡಿಕಲ್ಸ್ ಶಾಪ್​ ಬೀಗ ಒಡೆದು ಅಂಗಡಿ ತೆರೆದಿದ್ದಾರೆ. ಬಳಿಕ ಅಂಗಡಿಯಲ್ಲಿದ್ದ ಹಣ ಹಾಗೂ ಕೆಲ ವಸ್ತುಗಳನ್ನು ದೋಚಿದ್ದಾರೆ. ರೆಕಾರ್ಡ್​ ಆಗಿರುವ ಸಿಸಿಟಿವಿ ವಿಡಿಯೋದಲ್ಲಿ ಇಬ್ಬರು ಅಂಗಡಿ ಒಳಗೆ ನುಗ್ಗಿ ದೋಚಿದರೆ, ಮತ್ತಿಬ್ಬರು ಹೊರಗಡೆ ನಿಂತಿರುವುದನ್ನು ಗಮನಿಸಬಹುದು.

ಕಳ್ಳತನ ಮಾಡುವಾಗ ಯುವಕರು ನಡೆಸಿರುವ ಸಂಭಾಷಣೆಯೂ ಲಭ್ಯವಾಗಿದ್ದು, ಪೊಲೀಸ್ ಇಲಾಖೆಗೆ ನಿಂದಿಸುವ ಹಾಗೂ ಪರಸ್ಪರ ಅಶ್ಲೀಲವಾಗಿ ಬೈಯ್ದಾಡುವುದೂ ಸಹ ರೆಕಾರ್ಡ್​ ಆಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ಆರೋಪಿಗಳನ್ನು ಸೆರೆ ಹಿಡಿಯುವುದಾಗಿ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದರು.

ಇದನ್ನೂ ಓದಿ: ಚಾಮರಾಜನಗರ: ಬ್ಯಾಂಕ್ ಸಿಬ್ಬಂದಿಯಂತೆ ಬಂದು ಕ್ಯಾಶ್‌ ಕೌಂಟರ್‌ನಿಂದ ₹5 ಲಕ್ಷ ದೋಚಿದ ಕಳ್ಳ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.