ಕನ್ವರ್ ಯಾತ್ರೆ: ನಂದಿಯನ್ನು ಹೋಲುವ ಬೈಕ್ನಲ್ಲಿ ಶಿವ ವೇಷಧಾರಿಯ ಪ್ರಯಾಣ - etv bharat kannada
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15941255-thumbnail-3x2-news.jpg)
ಉತ್ತರಪ್ರದೇಶ: ಶ್ರಾವಣ ಮಾಸದ ಹಿನ್ನೆಲೆ ಹರಿದ್ವಾರದಲ್ಲಿ ಕನ್ವರ್ ಯಾತ್ರೆ ನಡೆಯುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಶಿವಭಕ್ತರು ತಮ್ಮ ಆರಾಧ್ಯ ದೇವರು ಶಿವನನ್ನು ಮೆಚ್ಚಿಸಲು ಕನ್ವರ್ ಯಾತ್ರೆಯ ಜೊತೆಗೆ ಗಂಗಾಜಲವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಯಾತ್ರಿಕರು ಬರಿಗಾಲಿನಲ್ಲಿ ನಡೆಯುತ್ತಾರೆ, ಕೆಲವರು ಸಾರಿಗೆಯನ್ನು ಬಳಸುತ್ತಾರೆ. ಆದರೆ ಇಲ್ಲೋರ್ವ ಯಾತ್ರಿಕ ಶಿವನ ವೇಷ ಧರಿಸಿ, ನಂದಿಯನ್ನು ಹೋಲುವ ಬೈಕ್ನಲ್ಲಿ ಸಂಚರಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. 15 ಸಾವಿರ ರೂ. ಖರ್ಚು ಮಾಡಿ ನಂದಿಯ ರೂಪವನ್ನು ಬೈಕ್‌ಗೆ ನೀಡಿರುವುದು ಗಮನಾರ್ಹ. ಈ ಬೈಕ್ ಸಂಚಾರ ನಡೆಸುತ್ತಿದ್ದಂತೆ ಎಲ್ಲರ ಗಮನ ಬೈಕ್ ಮೇಲೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ವರದಿಗಳ ಪ್ರಕಾರ, ಈ ಭಕ್ತನನ್ನು ವಾರಣಾಸಿಯ ಅನೈ ಬಜಾರ್‌ನ ನಿವಾಸಿ ಸುನಿಲ್ ಗುಪ್ತಾ ಎಂದು ಗುರುತಿಸಲಾಗಿದೆ.
Last Updated : Feb 3, 2023, 8:25 PM IST