ಉತ್ತರಾಖಂಡದಲ್ಲಿ ಗುಡ್ಡ ಕುಸಿತ.. ಭಯಾನಕ ವಿಡಿಯೋ ನೀವೂ ಒಮ್ಮೆ ನೋಡಿ - ಉತ್ತರಾಖಂಡ ಗುಡ್ಡ ಕುಸಿತ
🎬 Watch Now: Feature Video
ಉತ್ತರಾಖಂಡ: ಭಾರಿ ಮಳೆಯಿಂದಾಗಿ ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಲ್ಲಿ ಗುಡ್ಡ ಕುಸಿತ ಕಂಡಿದೆ. ಪರಿಣಾಮ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಮಾರ್ಗ ಸಂಪೂರ್ಣ ಹಾಳಾಗಿದೆ. ಹಾಗಾಗಿ, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಇಂದು ಬೆಳಗ್ಗೆ 6.30ರ ಸುಮಾರಿಗೆ ಕಭಾಡ್ ಭಯೋಲ್ ಬಳಿ ಇದ್ದಕ್ಕಿದ್ದಂತೆ ಗುಡ್ಡ ಕುಸಿಯಲು ಪ್ರಾರಂಭಿಸಿದ್ದು, ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಗುಡ್ಡ ಕುಸಿತದ ದೃಶ್ಯ ಸೆರೆಹಿಡಿದಿದ್ದಾರೆ.
Last Updated : Feb 3, 2023, 8:27 PM IST