ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡಿದ್ದ ಕಡವೆ: ಚಿಕಿತ್ಸೆ ಬಳಿಕ ಹೃದಯಾಘಾತದಿಂದ ಸಾವು! - ETv Bharat kannada news

🎬 Watch Now: Feature Video

thumbnail

By

Published : Jan 18, 2023, 2:46 PM IST

Updated : Feb 3, 2023, 8:39 PM IST

ಕಾರವಾರ (ಉತ್ತರ ಕನ್ನಡ): ಆಕಸ್ಮಿಕವಾಗಿ ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡಿದ್ದ ಕಡವೆಯೊಂದು ಚಿಕಿತ್ಸೆ ನೀಡಿದ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ. ನಗರ ವ್ಯಾಪ್ತಿಯ ಬಿಣಗಾದಲ್ಲಿರುವ ಗ್ರಾಸಿಂ ಇಂಡಸ್ಟ್ರೀಸ್ ಆವರಣದೊಳಗೆ ಇತ್ತೀಚೆಗೆ ಕಡವೆಯೊಂದು ಪ್ರತ್ಯಕ್ಷವಾಗಿತ್ತು. ಸಮೀಪದಲ್ಲಿಯೇ ಕಾಡು ಇರುವುದರಿಂದ ಅಲ್ಲಿಂದ ಈ ಕಡವೆ ಬಂದಿದೆ ಎನ್ನಲಾಗಿದೆ.

ಈ ವೇಳೆ, ಕಡವೆ ಜನರ ಭಯಕ್ಕೋ ಅಥವಾ ನಾಯಿಗಳ ದಾಳಿಗೋ ಹೆದರಿ ಓಡುವ ಸಂದರ್ಭದಲ್ಲಿ ಕಾಲುವೆಯೊಂದರಲ್ಲಿ ಬಿದ್ದು ಕಾಲು ಮುರಿದಿತ್ತು. 
ಇದನ್ನು ಗಮನಿಸಿದ ಕಂಪನಿಯ ಕಾರ್ಮಿಕರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಮಾಹಿತಿ ತಿಳಿಯುತ್ತಿದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಪಶು ವೈದ್ಯರು ಪರೀಕ್ಷಿಸಿದಾಗ ಕಡವೆಯ ಹಿಂಬದಿಯ ಬಲಗಾಲಿನ ಎಲುಬು ಮುರಿದು ಎದ್ದು ನಿಲ್ಲದ ಸ್ಥಿತಿಯಲ್ಲಿತ್ತು.

ಈ ಕಡವೆ ಸುಮಾರು 3 ವರ್ಷ ಪ್ರಾಯದ ಗಂಡು ಕಡವೆಯಾಗಿದ್ದು, ತಕ್ಷಣ ಕಾಲಿಗೆ ಪ್ಲಾಸ್ಟರ್ ಮಾಡಿಸಿ ಬಳಿಕ ವಾಹನದ ಮೂಲಕ ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ದಿದ್ದರು. ಆದರೆ‌, ಕಡವೆ ಹೃದಯಾಘಾತದಿಂದ ಮೃತಪಟ್ಟಿದೆ. ಕಡವೆಯು ಸೂಕ್ಷ್ಮ ಪ್ರಾಣಿಯಾಗಿರುವುದರಿಂದ ಅತಿಯಾಗಿ ಉಂಟಾದ ಭಯದಿಂದಾಗಿ ಹೃದಯಾಘಾತಗೊಂಡು ಕಡವೆ ಮೃತಪಟ್ಟಿರಬಹುದು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.