ಬೆಳಗಾವಿ: ದೇವರಿಗೆ ನಮಿಸಿ ಶ್ರೀರಾಮಲಿಂಗೇಶ್ವರ ದೇಗುಲದ ಹುಂಡಿ ದೋಚಿದ ಖದೀಮರು - belagavi shree ramalingreshwara temple
🎬 Watch Now: Feature Video
ಚಿಕ್ಕೋಡಿ (ಬೆಳಗಾವಿ): ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಹುಂಡಿಯನ್ನು ಖದೀಮರು ದೋಚಿದ್ದಾರೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೇವಸ್ಥಾನದೊಳಗೆ ನುಸುಳಿದ ಮೂವರು ಮೊದಲು ದೇವರಿಗೆ ನಮಿಸಿದ್ದಾರೆ. ಆ ನಂತರ ಸಾವಿರಾರು ರೂಪಾಯಿ ನಗದು ತೆಗೆದುಕೊಂಡು ಹುಂಡಿಯನ್ನು ಜಮೀನೊಂದರಲ್ಲಿ ಎಸೆದಿದ್ದಾರೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ.
Last Updated : Feb 3, 2023, 8:23 PM IST