Karwar Rain: ಕರಾವಳಿಯಲ್ಲಿ ಮುಂದುವರೆದ ಮಳೆಯಾರ್ಭಟ: ಕೆರೆಯಂತಾದ ಕಾರವಾರ ಬಸ್ ಡಿಪೋ! - ಕಾರವಾರದ ಬಸ್ ಡಿಪೋ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/05-07-2023/640-480-18917899-thumbnail-16x9-news.jpg)
ಕಾರವಾರ (ಉತ್ತರ ಕನ್ನಡ): ಜಿಲ್ಲೆಯ ಕರಾವಳಿಯಾದ್ಯಂತ ಎಡಬಿಡದೆ ಭಾರಿ ಮಳೆಯಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಕಾರವಾರದ ಬಸ್ ಡಿಪೋದಲ್ಲೂ ನೀರು ಆವರಿಸಿದ್ದು, ಪರದಾಡುವ ಪರಿಸ್ಥಿತಿ ಕಂಡುಬಂತು.
ಕಾರವಾರ ಹಬ್ಬುವಾಡ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಿದ್ದು, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಪಕ್ಕದ ಬಸ್ ಡಿಪೋಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿದೆ. ಡಿಪೋದಲ್ಲಿನ ಬ್ಯಾಟರಿ, ದಾಖಲೆಗಳಿಗೆ ಹಾನಿಯಾಗಿದೆ. ಡೀಸೆಲ್ ಬಂಕ್ ಕೂಡ ನೀರಿನಲ್ಲಿ ಮುಳುಗಡೆಯಾಗಿದೆ. ಮುಂಜಾನೆ ವಿವಿಧ ಪ್ರದೇಶಗಳಿಗೆ ತೆರಳಬೇಕಿದ್ದ ಬಸ್ಗಳನ್ನು ಸ್ಟಾರ್ಟ್ ಮಾಡಲಾಗದೆ ಚಾಲಕರು ಸಂಕಷ್ಟ ಅನುಭವಿಸಿದರು.
ಮಂಗಳವಾರ ಸಂಜೆ ಬಳಿಕ ಪ್ರಾರಂಭವಾದ ಮಳೆ ಆರ್ಭಟ ಜೋರಾಗಿದೆ. ತಡರಾತ್ರಿಯಿಂದ ಹಳ್ಳ-ಕೊಳ್ಳ, ನಗರ ಪ್ರದೇಶಗಳಲ್ಲಿ ಚರಂಡಿಗಳು ತುಂಬಿ ಹರಿದಿವೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೂ ನೀರು ನುಗ್ಗಿದೆ. ಹೀಗಾಗಿ ನಗರದ ಸೋನಾರವಾಡ, ಪದ್ಮನಾಭ ನಗರಗಳಲ್ಲಿನ ಜನರು ತೊಂದರೆ ಅನುಭವಿಸಿದರು.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಇಂದಿನಿಂದ ಜುಲೈ 07ರವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರಿ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಕೂಡ ಜೋರಾಗಿದೆ. ಮೀನುಗಾರರುು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Kodagu Rain: ಕೊಡಗಿನಲ್ಲಿ ಭಾರಿ ಮಳೆ, ಹೆದ್ದಾರಿ ಕುಸಿಯುವ ಭೀತಿ: ಯೆಲ್ಲೋ ಅಲರ್ಟ್ ಘೋಷಣೆ