ಚಲಿಸುತ್ತಿದ್ದ ರೈಲಿಗೆ ಸಿಲುಕಿ ತಂದೆ, ಮಗಳು ದಾರುಣ ಸಾವು: ಸಿಸಿಟಿವಿ ದೃಶ್ಯ - ಅಬು ರೋಡ್ ರೈಲು ನಿಲ್ದಾಣ
🎬 Watch Now: Feature Video
ಸಿರೋಹಿ (ರಾಜಸ್ಥಾನ): ಇಲ್ಲಿನ ಅಬು ರೋಡ್ ನಿಲ್ದಾಣದಿಂದ ಚಲಿಸುತ್ತಿದ್ದ ರೈಲಿಗೆ ಹತ್ತುವ ಭರದಲ್ಲಿ ತಂದೆ ಹಾಗು ಪುಟ್ಟ ಮಗಳು ಸಾವನ್ನಪ್ಪಿದ್ದಾರೆ. ಭಾನುವಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ದೊರೆತಿದೆ. ಅಹೋರ್ ತಹಸಿಲ್‌ನ ಭೈಸವಾಡ ನಿವಾಸಿ ಭೀಮರಾಮ್ ಎಂಬವರು ತಮ್ಮ ಕುಟುಂಬದೊಂದಿಗೆ ಮನೆಗೆ ತೆರಳಲು ಜವಾಯಿ ನಿಲ್ದಾಣಕ್ಕೆ ಟಿಕೆಟ್ ತೆಗೆದುಕೊಂಡಿದ್ದರು. ಹೀಗಾಗಿ ಅವರ ಕುಟುಂಬ ಅಬು ರೋಡ್ ರೈಲು ನಿಲ್ದಾಣಕ್ಕೆ ತೆರಳಿತ್ತು. ಅಲ್ಲಿಗೆ ತಲುಪುವಷ್ಟರಲ್ಲಿ ಸಬರಮತಿ-ಜೋಧ್ಪುರ ರೈಲು ನಿಲ್ದಾಣದಿಂದ ಚಲಿಸಲು ಪ್ರಾರಂಭಿಸಿತ್ತು.
ಹೀಗಾಗಿ ತರಾತುರಿಯಲ್ಲಿ ತಂದೆ ತನ್ನ ಮಗಳನ್ನು ಎತ್ತಿಕೊಂಡು ರೈಲು ಹತ್ತಿಸುತ್ತಿದ್ದರು. ಮಗಳನ್ನು ಕೈಯಲ್ಲಿ ಹಿಡಿದು ಓಡಿ ರೈಲು ಹತ್ತುವ ಸಂದರ್ಭದಲ್ಲಿ ರೈಲು ಮತ್ತು ಪ್ಲಾಟ್‌ಫಾರ್ಮ್ ಮಧ್ಯದಲ್ಲಿ ಇಬ್ಬರೂ ಸಿಲುಕಿಕೊಂಡರು. ಘಟನೆ ನೋಡಿದ ಪತ್ನಿ ಫ್ಲಾಟ್‌ಫಾರಂನಲ್ಲೇ ಆಘಾತದಿಂದ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದರು. ತಕ್ಷಣವೇ ರೈಲು ನಿಲ್ಲಿಸಿದ್ದು, ಜನರು ಸ್ಥಳಕ್ಕಾಗಮಿಸಿ ಇಬ್ಬರನ್ನೂ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಸಾವನ್ನಪ್ಪಿದರು.
ಇದನ್ನೂ ಓದಿ: ಯುವತಿಯ ಮೊಬೈಲ್ ಕಸಿದು ಪರಾರಿಯಾದ ದುಷ್ಕರ್ಮಿಗಳು.. ವಿಡಿಯೋ