ಅಮಾವಾಸ್ಯೆ ಎಫೆಕ್ಟ್​.. ಗಜಪಡೆ ತಾಲೀಮಿಗೆ ಬ್ರೇಕ್ - Etv Bharat Kannada

🎬 Watch Now: Feature Video

thumbnail

By

Published : Aug 27, 2022, 5:32 PM IST

Updated : Feb 3, 2023, 8:27 PM IST

ಮೈಸೂರು: ಕ್ಯಾಪ್ಟನ್ ಅಭಿಮನ್ಯು ತಂಡದ ಗಜಪಡೆಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ತಾಲೀಮಿಗೆ ಬ್ರೇಕ್ ನೀಡಲಾಯಿತು. ಅಮಾವಾಸ್ಯೆ ಹಿನ್ನೆಲೆ ಅರಮನೆಯಿಂದ ಆಚೆ ಹೋದರೆ ಅಪಾಯ ಎದುರಾಗಲಿದೆ ಎಂಬ ಮಾವುತರ ಹಾಗೂ ಕಾವಾಡಿಗಳ ನಂಬಿಕೆ ಹಿನ್ನೆಲೆ ಆನೆಗಳ ತಾಲೀಮಿಗೆ ಇಂದು ಬ್ರೇಕ್​ ಹಾಕಲಾಯಿತು. ಕಳೆದ ವಾರದಿಂದ ಅಭಿಮನ್ಯು, ಅರ್ಜುನ, ಶ್ರೀರಾಮ, ಚೈತ್ರ, ಕಾವೇರಿ, ಗೋಪಿ, ವಿಕ್ರಂ, ಧನಂಜಯ, ಲಕ್ಷ್ಮೀ ಆನೆಗಳಿಗೆ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ತಾಲೀಮು ಮಾಡಿಸಲಾಗುತ್ತಿದೆ. ಅಮಾವಾಸ್ಯೆ ಹಿನ್ನೆಲೆ ಅಭಿಮನ್ಯು ಹಾಗೂ ಧನಂಜಯ ಆನೆಗಳಿಗೆ ಅರಮನೆಯ ಆವರಣದಲ್ಲಿ ಸ್ನಾನ ಮಾಡಿಸಲಾಯಿತು.
Last Updated : Feb 3, 2023, 8:27 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.