ಧಗ ಧಗ ಉರಿದ ನಡು ರಸ್ತೆಯಲ್ಲಿಯೇ ನಿಂತಿದ್ದ ಬಸ್.. ವಿಡಿಯೋ - ಆನಂದಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ
🎬 Watch Now: Feature Video
ಶಿವಮೊಗ್ಗ: ನಡು ರಸ್ತೆಯಲ್ಲಿಯೇ ನಿಂತಿದ್ದ ಖಾಸಗಿ ಬಸ್ವೊಂದು ಧಗ ಧಗನೆ ಉರಿದಿರುವ ಘಟನೆ ಸಾಗರ ತಾಲೂಕು ಹೊಸೂರು ಗ್ರಾಮದ ಬಳಿ ನಡೆದಿದೆ. ಶಿವಮೊಗ್ಗದಿಂದ ಸಾಗರಕ್ಕೆ ಸಂಚಾರ ಮಾಡುವ ಗಜಾನನ ಕಂಪನಿಯ ಬಸ್ ಕಳೆದ ಎರಡು ದಿನಗಳಿಂದ ರಿಪೇರಿಗೆ ಎಂದು ಹೊಸೂರು ಗ್ರಾಮದ ಬಳಿಯೇ ನಿಂತಿತ್ತು. ಇಂದು ಬೆಳಗ್ಗೆ ಬಸ್ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದರಿಂದ ಸುಟ್ಟು ಭಸ್ಮ ಆಗಿದೆ.
ಕಳೆದ ಎರಡು ದಿನಗಳಿಂದ ಬಸ್ ಹೊಸೂರು ಗ್ರಾಮದ ಬಳಿಯೇ ಇತ್ತು. ಬಸ್ನ ಚಾಲಕ ಹಾಗೂ ನಿರ್ವಾಹಕ ಅದೇ ಬಸ್ನಲ್ಲಿದ್ದರು. ಬಸ್ಗೆ ಬೆಂಕಿ ಬೀಳುವ ಕೆಲ ನಿಮಿಷಗಳ ಮುಂಚೆ ಸಮೀಪದ ಕ್ಯಾಂಟಿನ್ಗೆ ಟೀ ಕುಡಿಯಲು ಬಂದಿದ್ದರು ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಬಸ್ ಸಂಪೂರ್ಣವಾಗಿ ಉರಿದು ಹೋಗಿದೆ. ಒಂದು ವೇಳೆ, ರಾತ್ರಿಯಲ್ಲಿ ಬಸ್ಗೆ ಬೆಂಕಿ ಬಿದ್ದಿದ್ದರೆ, ಚಾಲಕ ಹಾಗೂ ನಿರ್ವಾಹಕ ಇಬ್ಬರೂ ಸಾವನ್ನಪ್ಪುವ ಸಾಧ್ಯತೆಗಳಿತ್ತು. ಬಸ್ಗೆ ಯಾಕೆ ಏಕಾಏಕಿ ಬೆಂಕಿ ಬಿದ್ದಿದೆ ಎಂಬುದು ಮಾತ್ರ ಇದುವರೆಗೂ ತಿಳಿದು ಬಂದಿಲ್ಲ. ಈ ಕುರಿತು ಆನಂದಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Vande Bharat Train: ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ; ಪ್ರಯಾಣಿಕರು ಸುರಕ್ಷಿತ