ಶತಾಯುಷಿ ಶಿವಮ್ಮ ಸರಗಣಾಚಾರಿಗೆ ಜನ್ಮದಿನದ ಸಂಭ್ರಮ - ವಿಡಿಯೋ - ಅಜ್ಜಿಯ ಹುಟ್ಟು ಹಬ್ಬ ಆಚರಣೆ

🎬 Watch Now: Feature Video

thumbnail

By ETV Bharat Karnataka Team

Published : Jan 13, 2024, 9:09 PM IST

ಕೊಪ್ಪಳ: ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಶಿವಮ್ಮ ಸರಗಣಾಚಾರಿಗೆ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರ ಕುಟುಂಬದವರು ಸೇರಿಕೊಂಡು ಶುಕ್ರವಾರ ಸಂಜೆ ಅದ್ಧೂರಿಯಾಗಿ ಜನ್ಮದಿನ ಆಚರಿಸಿದರು.

ಹತ್ತು ಮಕ್ಕಳಿಗೆ ಜನ್ಮ ನೀಡಿರುವ ಶಿವಮ್ಮ ಅವರ ಮಕ್ಕಳಲ್ಲಿ ಆರು ಜನ ನಿಧನರಾಗಿದ್ದಾರೆ. ಉಳಿದ ನಾಲ್ಕು ಜ‌ನರಲ್ಲಿ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಸೇರಿ ಒಟ್ಟು 30 ಮೊಮ್ಮಕ್ಕಳಿದ್ದಾರೆ. 10 ಮರಿ ಮೊಮ್ಮಕ್ಕಳು, 5 ಗಿರಿ ಮೊಮ್ಮಕ್ಕಳನ್ನು ಕಂಡಿರುವ ಈ ಅಜ್ಜಿ, ಐದು ತಲೆಮಾರುಗಳನ್ನು ಕಂಡಿದ್ದಾಳೆ. ಅವರ ಪತಿ ಮಹಾಂತಯ್ಯ ನಿಧನದ ನಂತರ, ಅಜ್ಜಿ ತಮ್ಮ ಮಕ್ಕಳನ್ನು ಪೋಷಿಸಿದ್ದಾರೆ. ನಿತ್ಯ ಬೆಳಗಿನ ಜಾವ ನಾಲ್ಕು ಗಂಟೆಗೆ ಎಳುತ್ತಾರೆ. ಸಿರಿಧಾನ್ಯ ಊಟ ಮಾಡುವ ಅಜ್ಜಿ, ಕೃಷಿಯಲ್ಲಿ ತೃಪ್ತಿ ಕಂಡಿದ್ದಾರೆ. ಒತ್ತಡದ ಬದುಕಿನಲ್ಲಿಯೂ ನೂರು ವರ್ಷ ಪೂರೈಸಿದ ಅಜ್ಜಿಯ ಸಾಧನೆ ಇನ್ನುಳಿದವರಿಗೆ ಪ್ರೇರಣೆಯಾಗಿದೆ.

ತಾಯಿಯ ಆಶೀರ್ವಾದ ನಮಗೆ ಶ್ರೀರಕ್ಷೆ: ನಮ್ಮ ತಾಯಿ ಬಡತದಲ್ಲಿ ನಮ್ಮನ್ನೆಲ್ಲ ದುಡಿದು ಸಾಕಿ ದೊಡ್ಡವರನ್ನಾಗಿ ಮಾಡಿದ್ದಾರೆ. ಆಕೆಯ ಆರೋಗ್ಯಪೂರ್ಣ ಬದುಕಿಗೆ ಆಹಾರ ಪದ್ಧತಿಯೇ ಕಾರಣ. ನಮಗೂ ಕೂಡಾ ಅದೇ ರೀತಿಯ ಆಹಾರ ಉಣಿಸಿ ನಾವು ಇವತ್ತಿಗೂ ಹೊಲದಲ್ಲಿ ದುಡಿದು ತಿನ್ನುವ ತಾಕತ್ತು ಬೆಳೆಸಿದ್ದಾರೆ. ಆಕೆಯ ಖುಣ ತೀರಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ. ಆಕೆಯಂತೆಯೇ ನಾವು ಕೂಡ ನೂರಾರು ವರ್ಷ ಬದಕಬೇಕು. ಇಂದಿನ ಆಹಾರ ಪದ್ಧತಿಯಿಂದಾಗಿ ನಮಗೆ ರೋಗ ರುಜಿನಗಳು ಹೆಚ್ಚಿವೆ. ಸೂರ್ಯೋದಯಕ್ಕೂ ಮುಂಚೆ ಎದ್ದು ಕೆಲಸ ಮಾಡುವುದರಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು. ನಮ್ಮ ತಾಯಿ ತಾನು ನೂರು ವರ್ಷಗಳ ಕಾಲ ಬದುಕಿ ಬಾಳುತ್ತಿರುವುದು ಇತರರಿಗೆ ಮಾದರಿಯಾಗಿದೆ. ನಮ್ಮ ತಾಯಿ ಇನ್ನು ಹಲವು ವರ್ಷಗಳವರೆಗೆ ನಮ್ಮ ಜೊತೆಗಿರಲಿ ಎಂದು ನಾವು ಬಯಸುತ್ತೇವೆ ಎಂದು ಶಿವಮ್ಮನ ಸುಪುತ್ರ ಬಸವರಾಜ ಅನಿಸಿಕೆ ಹಂಚಿಕೊಂಡರು.

ಇದನ್ನೂ ಓದಿ: 16 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕನಿಗೆ ವಿದ್ಯಾರ್ಥಿಗಳು, ಗ್ರಾಮಸ್ಥರಿಂದ ಬೈಕ್ ಗಿಫ್ಟ್​

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.