ಮರಳಲ್ಲರಳಿದ ವಿರಾಟ್ ಕೊಹ್ಲಿ: ಇದು ಕಲಾವಿದ ಸುದರ್ಶನ್ ಪಟ್ನಾಯಕ್ ಕೈಚಳಕ- ವಿಡಿಯೋ - ಮರಳು ಕಲಾಕೃತಿ ರಚಿಸಿ ಶುಭ ಕೋರಿದ ಸುದರ್ಶನ್ ಪಟ್ನಾಯಕ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/05-11-2023/640-480-19947400-thumbnail-16x9-lek.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Nov 5, 2023, 1:00 PM IST
ಪುರಿ (ಒಡಿಶಾ): ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಬೀಚ್‌ನಲ್ಲಿ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ 35ನೇ ಹುಟ್ಟುಹಬ್ಬಕ್ಕೆ ಮರಳು ಶಿಲ್ಪ ಕಲಾಕೃತಿ ರಚಿಸುವ ಮೂಲಕ ವಿಶೇಷವಾಗಿ ಶುಭ ಕೋರಿದ್ದಾರೆ.
ಇಂದು ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ 35ನೇ ಹುಟ್ಟುಹಬ್ಬ. ನೆಚ್ಚಿನ ಆಟಗಾರನ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದು, ವಿಶಿಷ್ಟ ರೀತಿಯಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ. ಇದೇ ವೇಳೆ ಖ್ಯಾತ ಮರಳು ಕಲಾವಿದ ಹಾಗೂ ಪದ್ಮಶ್ರೀ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಅವರು ವಿರಾಟ್ ಅವರ ಜನ್ಮದಿನಕ್ಕೆ ಸುಂದರವಾದ ಮರಳು ಕಲಾಕೃತಿ ರಚಿಸುವ ಮೂಲಕ ಶುಭ ಹಾರೈಸಿದ್ದಾರೆ.
ಪುರಿಯ ನೀಲಾದ್ರಿ ಬೀಚ್‌ನಲ್ಲಿ ಮರಳಿನಲ್ಲಿ ಕೊಹ್ಲಿ ಅವರ ಪ್ರತಿಕೃತಿ ರಚಿಸಿದ್ದಾರೆ. ಮರಳಿನಲ್ಲಿ ಕ್ರೀಡಾಂಗಣ ರಚಿಸಿ ಅದರಲ್ಲಿ ಚೆಂಡು, ಬ್ಯಾಟ್‌ಗಳನ್ನು ಬಿಡಿಸಿದ್ದಾರೆ. ಇದರ ಜೊತೆಗೆ, ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿರುವ ಇಡೀ ಭಾರತೀಯ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಹ್ಯಾಪಿ ಬರ್ತ್‌ಡೇ ಕೊಹ್ಲಿ! ಇಂದಿನ ಪಂದ್ಯದಲ್ಲಿ ಸಚಿನ್ ದಾಖಲೆ ಸರಿಗಟ್ಟುವರೇ 'ರನ್ ಮಷಿನ್'?