1971ರ ವಿಜಯೋತ್ಸವ ನೆನಪಿಗೆ ಮರಾಠಿ ದಳದಿಂದ ದಕ್ಷಿಣ ತಾರೆಗಳ ವಿಜಯದ ಓಟ ಆಯೋಜನೆ - ವಿಜಯೋತ್ಸವ
🎬 Watch Now: Feature Video
Published : Dec 16, 2023, 5:03 PM IST
|Updated : Dec 16, 2023, 10:31 PM IST
ಬೆಳಗಾವಿ: 1971ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತ ದಿಗ್ವಿಜಯ ಸಾಧಿಸಿದ ಸವಿನೆನಪಿಗಾಗಿ ಶನಿವಾರ ಬೆಳಗಾವಿಯ ಮರಾಠಿ ಲಘು ಪದಾತಿ ದಳದ ಮೈದಾನದಲ್ಲಿ ಹಮ್ಮಿಕೊಂಡಿದ್ದ ದಕ್ಷಿಣ ತಾರೆಗಳ ವಿಜಯದ ಓಟ ಗಮನ ಸೆಳೆಯಿತು.
ಬ್ರಿಗೇಡಿಯರ್ ಕಮಾಂಡರ್ ಜೊಯದೀಪ್ ಮುಖರ್ಜಿ ಓಟಕ್ಕೆ ಚಾಲನೆ ನೀಡಿದರು. 1926 ಓಟಗಾರರು ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ 1356 ಸೇನೆಯ ಸೇವಾ ನಿರತರು, 20 ಅಥ್ಲೇಟಿಕ್ಸ್ ಅನುಭವಿಗಳು, 200 ಸಾರ್ವಜನಿಕರು, 350 ಮಕ್ಕಳು ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವೀರಯೋಧರು ತ್ಯಾಗ, ಬಲಿದಾನ ನೆನಪಿಸುವ ಈ ಕಾರ್ಯಕ್ರಮ ಯುವ ಜನರಿಗೆ ಸ್ಪೂರ್ತಿ ನೀಡಿತು. ಭಾರತೀಯ ಸೇನೆಯಿಂದ ದೈಹಿಕ ಸಾಮರ್ಥ್ಯ, ಸಾಹಸಗಳನ್ನು ಪ್ರದರ್ಶಿಸಲಾಯಿತು. ಭಾರತೀಯ ಸ್ವಾತಂತ್ರ್ಯದ ಮೌಲ್ಯ ಮತ್ತು ದೇಶದ ಏಕತೆಯ ಮಹತ್ವದ ಸಂದೇಶವನ್ನು ಈ ವೇಳೆ ಬಿತ್ತರಿಸಲಾಯಿತು. ಅದೇ ರೀತಿ, ದೇಶದ ನಾಗರಿಕರು ಮತ್ತು ಸೇನೆಯ ನಡುವಿನ ಒಳ್ಳೆಯ ಬಾಂಧವ್ಯ ಎಷ್ಟಿದೆ ಎಂಬುದನ್ನು ಈ ಕಾರ್ಯಕ್ರಮ ಸಾಬೀತುಪಡಿಸಿತು.
1971ರ ವಿಜಯೋತ್ಸವ ಸವಿ ನೆನಪಿಗೆ ವಿವಿಧ ಕಾರ್ಯಕ್ರಮ: ಬ್ರಿಗೇಡಿಯರ್ ಕಮಾಂಡರ್ ಜೊಯದೀಪ್ ಮುಖರ್ಜಿ ಮಾತನಾಡಿ, ನಮ್ಮ ವೀರ ಯೋಧರ ತ್ಯಾಗ ಬಲಿದಾನ ಸ್ಮರಣೆಗಾಗಿ ಮತ್ತು ಯುವಜನರಲ್ಲಿ ಪ್ರೇರಣೆ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. 1971ರ ವಿಜಯೋತ್ಸವ ನಿಮಿತ್ತ ಇಂದು ದೇಶದ ತುಂಬ ಕಾರ್ಯಕ್ರಮ ನಡೆಯುತ್ತಿದೆ. ಬಹಳ ಉತ್ಸಾಹದಿಂದ ನಾಗರಿಕರು, ಮಕ್ಕಳು ಓಟದಲ್ಲಿ ಭಾಗಿಯಾಗಿದ್ದು, ನನಗೆ ಖುಷಿ ತಂದಿದೆ. ವಿವಿಧ ವಿಭಾಗದಲ್ಲಿ ವಿಜಯದ ಓಟವನ್ನು ಏರ್ಪಡಿಸಿ, ವಿಜೇತರಿಗೆ ಆಕರ್ಷಕ ಬಹುಮಾನ ವಿತರಿಸಲಾಯಿತು ಎಂದು ಮಾಧ್ಯಮದವರಿಗೆ ತಿಳಿಸಿದರು.
ಇದನ್ನೂಓದಿ:ಮಲ್ಟಿ ಬ್ರ್ಯಾಂಡ್ ಕೃಷಿ ಉತ್ಪನ್ನಗಳ ಮಾರಾಟ ಮಳಿಗೆಗೆ ಸಚಿವ ಚಲುವರಾಯಸ್ವಾಮಿ ಚಾಲನೆ