ಮಹಿಳೆ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಮಾನತು - ಆಲ್ಫ್ರೆಡೋ ರಾಮಿರೆಜ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7870322-thumbnail-3x2-mng.jpg)
ಮಿಯಾಮಿ (ಫ್ಲೋರಿಡಾ): ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಘಟನೆಯ ವಿಡಿಯೋ ಪೊಲೀಸ್ ಅಧಿಕಾರಿಯ ಬಾಡಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ದಕ್ಷಿಣ ಫ್ಲೋರಿಡಾದ ಫಿಲಂ ಮೇಕರ್ ಬಿಲ್ಲಿ ಕಾರ್ಬೆನ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಫೇಸ್ ಮಾಸ್ಕ್ ಧರಿಸದ ಮಹಿಳೆ ಮೇಲೆ ಕೋಪಗೊಂಡ ಅಧಿಕಾರಿ ತಿಳಿ ಹೇಳಿದ್ದಾರೆ. ಆದರೆ ಆಕೆ 'ನೀವು ಕಪ್ಪು ವರ್ಣೀಯರು. ಆದರೆ, ಬಿಳಿಯರಂತೆ ವರ್ತಿಸುತ್ತೀರಿ. ನೀವು ಏನು ಮಾಡಲು ಬಯಸುತ್ತೀರಿ' ಎಂದು ಅಧಿಕಾರಿಗೆ ಅವಾಜ್ ಹಾಕಿದ್ದಾಳೆ. ಇದರಿಂದ ಆಕ್ರೋಶಿತರಾದ ಪೊಲೀಸ್ ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಮಿಯಾಮಿ - ಡೇಡ್ ಪೊಲೀಸ್ ನಿರ್ದೇಶಕ ಆಲ್ಫ್ರೆಡೋ ರಾಮಿರೆಜ್ ಅವರು, ಹಲ್ಲೆ ನಡೆಸಿದ ಪೊಲೀಸ್ ಸ್ಟೇಟ್ ಅಟಾರ್ನಿ ಕ್ಯಾಥರೀನ್ ಫರ್ನಾಂಡೀಸ್ ರುಂಡಲ್ ಅವರನ್ನು ತನಿಖೆಗೆ ಒಳಪಡಸುವಂತೆ ಸೂಚಿಸಿದ್ದಾರೆ.