ಕೊರೊನಾ ಲಸಿಕೆ ಉತ್ಪಾದನೆಯ ವೇಗ ಹೆಚ್ಚಿಸಿದ ಚೀನಾ - coroan vaccine
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10201174-thumbnail-3x2-chuina.jpg)
ಚೀನಾದಲ್ಲಿ ಕೊರೊನಾ ಲಸಿಕೆಯ ಪ್ರಯೋಗ ಭರದಿಂದ ಸಾಗಿದೆ. ಈಗಾಗಲೇ ಲಸಿಕೆ ವಿತರಣೆ ಕಾರ್ಯ ನಡೆಯುತ್ತಿದ್ದು, ಈ ನಡುವೆ ಇನ್ನಷ್ಟು ಲಸಿಕೆ ಉತ್ಪಾದನೆಗೆ ಚೀನಾ ಮುಂದಾಗಿದೆ. ಈ ಹಿನ್ನೆಲೆ ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸಲು ಚೀನಾ ಸರ್ಕಾರ 5 ತಾಂತ್ರಿಕ ವಿಧಾನ ಅಳವಡಿಸಿಕೊಂಡಿದೆ. ಲಸಿಕೆ ತಯಾರಿಕಾ ಕಂಪನಿ ಸಿನೋಫಾರ್ಮ್ 2020ರ ಜನವರಿಯಲ್ಲಿ ಲಸಿಕೆ ಸಂಶೋಧನೆಯನ್ನು ಪ್ರಾರಂಭಿಸಿದೆ. ಅಲ್ಲದೆ ಬೀಜಿಂಗ್ನ ಜೈವಿಕ ಉತ್ಪಾದನಾ ಸಂಸ್ಥೆ ಮತ್ತು ಸಿನೊಫಾರ್ಮ್ ಅಡಿಯಲ್ಲಿ ವುಹಾನ್ ಇನ್ಸ್ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ಪ್ರಾಡಕ್ಟ್ಸ್ ಜಂಟಿಯಾಗಿ ಲಸಿಕೆ ತಯಾರಿಕೆಯಲ್ಲಿ ತೊಡಗಿದ್ದು, ಲಸಿಕೆ ತಯಾರಿಕಾ ವೇಗ ಹೆಚ್ಚಿಸಿವೆ. ಈ ನಡುವೆ ಚೀನಾ ನ್ಯಾಷನಲ್ ಬಯೋಟೆಕ್ ಗ್ರೂಪ್ ಅಧ್ಯಕ್ಷ ಯಂಗ್ ಕ್ಸಿಯಾಮಿಂಗ್ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದಾರೆ.