Watch Video: ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡ ರಿಷಬ್ ಶೆಟ್ಟಿ - pragati Shetty
🎬 Watch Now: Feature Video
ಬೆಂಗಳೂರು: ಬೆಂಗಳೂರಿನ ಮೈಸೂರು ರಸ್ತೆಯಲ್ಲಿರೋ ನಂದಿ ಲಿಂಕ್ ಗ್ರೌಂಡ್ನಲ್ಲಿ ಡಿವೈನ್ ಸ್ಟಾರ್ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಾವಿರಾರು ಅಭಿಮಾನಿಗಳ ಪ್ರೀತಿಗೆ ಮನಸೋತ ರಿಷಬ್ ಶೆಟ್ಟಿ ಮಾತನಾಡಿ, ''ನನ್ನಂತ ಸಣ್ಣ ಹಳ್ಳಿಯಿಂದ ಬಂದ ಮಧ್ಯಮ ವರ್ಗದ ಕುಟುಂಬದ ಹುಡುಗನ ಸಿನಿಮಾ ಕನಸು ಕಂಡು ನಿಮ್ಮ ಮನದಲ್ಲಿ ಜಾಗ ಮಾಡಿಕೊಳ್ಳಬಹುದೆಂದು ನೀವು ಸಾಬೀತುಪಡಿಸಿದ್ದೀರ. "ಕಾಂತಾರ" ಸಿನಿಮಾಕ್ಕೆ ಕನ್ನಡಿಗರು ತೋರಿಸಿದ ಪ್ರೀತಿಯಿಂದ ಇಂದು ಅದು ಜಗತ್ತಿನ ಸಿನಿಮಾವಾಗಿದೆ. ಹಾಗಾಗಿ ನಿಮ್ಮನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಬೇಕೆಂದು ಬಹಳ ದಿನಗಳಿಂದ ಕಾಯುತ್ತಿದ್ದೆ. ಆ ದಿನ ಇಂದು ನನ್ನ ಹುಟ್ಟುಹಬ್ಬದ ಮೂಲಕ ಒದಗಿ ಬಂದಿದೆ. ಮಳೆ ಬಂದರೂ ತಾವೆಲ್ಲ ಇಲ್ಲಿಗೆ ಬಂದು ತೋರಿಸುತ್ತಿರುವ ಪ್ರೀತಿಯ ಋಣವನ್ನು ನಾನು ಸಾಯುವವರೆಗೂ ನನ್ನ ಸಿನಿಮಾ ಮತ್ತು ಕೆಲಸದ ಮೂಲಕ ತೀರುಸುತ್ತಲೇ ಇರುತ್ತೇನೆ'' ಎಂದು ಹೇಳಿ ರಿಷಬ್ ಶೆಟ್ಟಿ ಭಾವುಕರಾದರು.
ಇದೇ ವೇಳೆ ಪತ್ನಿ ಪ್ರಗತಿ ಶೆಟ್ಟಿ ಮಾತನಾಡಿ, ''ಯಾವುದೇ ಉಡಗೊರೆಯನ್ನು ಇಷ್ಟಪಡದ ರಿಷಬ್ ಅವರಿಗೆ, ಹುಟ್ಟುಹಬ್ಬದ ಉಡುಗೊರೆಯಾಗಿ 'ರಿಷಬ್ ಶೆಟ್ಟಿ ಫೌಂಡೇಶನ್' ಎಂಬ ಶಿಕ್ಷಣ ಕ್ಷೇತ್ರಕ್ಕೆ ಸಹಾಯ ನೀಡುವ ಸಂಸ್ಥೆಯನ್ನು ಅವರ ಹುಟ್ಟುಹಬ್ಬದ ದಿನದಿಂದಲೇ ಆರಂಭಿಸುವುದಾಗಿ'' ತಿಳಿಸಿದರು.