ಮಾರುಕಟ್ಟೆ ರೌಂಡಪ್: ಜಾಗತಿಕ ಮಾರುಕಟ್ಟೆ ಪ್ರಭಾವಕ್ಕೆ 540 ಅಂಕ ಕುಸಿದ ಸೆನ್ಸೆಕ್ಸ್
🎬 Watch Now: Feature Video
ಮುಂಬೈ: ಜಾಗತಿಕ ಮಾರುಕಟ್ಟೆಗಳ ಋಣಾತ್ಮಕ ಸೂಚನೆಗಳ ಮಧ್ಯೆ ದೇಶೀಯ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸೋಮವಾರದ ವಹಿವಾಟಿನಂದು 540 ಅಂಕಗಳಷ್ಟು ಕುಸಿತ ಕಂಡಿದೆ. ಸೂಚ್ಯಂಕದ ಟಾಪ್ ಷೇರುಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಭಾರಿ ನಷ್ಟ ಕಂಡಿವೆ. ದಿನದ ವಹಿವಾಟಿನ ಮಧ್ಯಂತರ ಅವಧಿಯಲ್ಲಿ 737 ಅಂಕ ಕುಸಿತದ ಬಿಎಸ್‌ಇ ಸೂಚ್ಯಂಕವು ಅಂತ್ಯದ ವೇಳೆಗೆ 540 ಅಂಕ ಇಳಿಕೆಯಾಗಿ 40,145.50 ಅಂಕಗಳಿದೆ ತಲುಪಿತು. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 162.60 ಅಂಕ ಇಳಿಕೆಯಾಗಿ 11,767.75 ಅಂಕಗಳ ಮಟ್ಟಕ್ಕೆ ತಲುಪಿದೆ.