ಆಂಬ್ಯುಲೆನ್ಸ್ ಸಿಗದೆ 6 ಕಿ.ಮೀ ಗರ್ಭಿಣಿಯನ್ನು ಹೊತ್ತು ಸಾಗಿದ ಪತಿ, ರಸ್ತೆ ಮಧ್ಯೆ ಗಂಡು ಮಗುವಿಗೆ ಜನ್ಮ! - ತಮಿಳುನಾಡಿನ ಸುದ್ದಿ
🎬 Watch Now: Feature Video
ಚೆನ್ನೈ(ತಮಿಳುನಾಡು): ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಆಂಬುಲೆನ್ಸ್ ಸಂಚಾರಕ್ಕೂ ಸಾಧ್ಯವಿಲ್ಲದ ಕಾರಣ ಗರ್ಭಿಣಿ ಮಹಿಳೆಯನ್ನು ಗಂಡ ಸುಮಾರು 6 ಕಿ.ಮೀ ಹೊತ್ತು ಸಾಗಿರುವ ಘಟನೆ ನಡೆದಿದೆ. ಗಂಡ ಹಾಗೂ ಕೆಲ ಗ್ರಾಮಸ್ಥರು ಸೇರಿ ಆಕೆಯನ್ನು ಹೊತ್ತು ಸಾಗಿದ್ದು ರಸ್ತೆ ಮಧ್ಯದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸುದೈವವಶಾತ್ ತಾಯಿ ಮತ್ತು ಮಗು ಕ್ಷೇಮವಾಗಿದ್ದಾರೆ ಎಂದು ತಿಳಿದು ಬಂದಿದೆ.