ಸಕಾಲದ ಸಹಾಯ: ವೃದ್ಧೆಯ ಜೀವ ಉಳಿಸಿದ ಪೊಲೀಸ್​ ಕಾನ್ಸ್​ಟೇಬಲ್ - ವಾರಣಾಸಿ ಎಕ್ಸ್‌ಪ್ರೆಸ್ ರೈಲು

🎬 Watch Now: Feature Video

thumbnail

By

Published : Oct 15, 2021, 12:09 PM IST

ಮಧ್ಯಪ್ರದೇಶ: ಕಾನ್ಸ್​ಟೇಬಲ್​ ಸಮಯ ಪ್ರಜ್ಞೆಯಿಂದ 75 ವರ್ಷದ ವೃದ್ಧೆಯ ಜೀವ ಉಳಿದಿರುವ ಘಟನೆ ಹೋಶಂಗಾಬಾದ್ ಜಿಲ್ಲೆಯ ಪಿಪರಿಯಾ ರೈಲ್ವೆ ನಿಲ್ದಾಣದಲ್ಲಿ ನಡೆಯಿತು. ಜಿಆರ್‌ಪಿ ಕಾನ್ಸ್​ಟೇಬಲ್ ಯೋಗೇಶ್ ಪಚೌರಿ ಮಹಿಳೆಯ ಜೀವ ರಕ್ಷಿಸಿದ್ದಾರೆ. ರೈಲ್ವೆ ಹಳಿ ದಾಟಿದ ಮಹಿಳೆ ಸುಸ್ತಾಗಿ ಪ್ಲಾಟ್‌ಫಾರ್ಮ್‌​ ಅಂಚಿನಲ್ಲಿ ಕುಳಿತಿದ್ದರು. ಇದೇ ವೇಳೆ ವಾರಣಾಸಿ ಎಕ್ಸ್‌ಪ್ರೆಸ್ ರೈಲು ಬರುತ್ತಿರುವುದನ್ನು ಗಮನಿಸಿದ ಯೋಗೇಶ್​, ಓಡಿ ಹೋಗಿ ಪ್ಲಾಟ್‌ಫಾರ್ಮ್‌ ಅಂಚಿನಲ್ಲಿ ಕುಳಿತಿದ್ದ ಮಹಿಳೆಯನ್ನು ಹಿಂದಕ್ಕೆಳೆದುಕೊಂಡು ಬಚಾವ್ ಮಾಡಿದರು. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಾನ್ಸ್​ಟೇಬಲ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.