ಲಕ್ ಅಂದ್ರೆ ಇದು ಕಣ್ರೀ... ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಲಕ್ಷುರಿ ಕಾರ್ ಗೆದ್ದ ರಿಕ್ಷಾವಾಲ! - ಅಸ್ಸಾಂ ಆಟೋ ಚಾಲಕನಿಗೆ ಒಲಿದ ಅದೃಷ್ಟ
🎬 Watch Now: Feature Video
ಬರ್ಪೇಟಾ(ಅಸ್ಸಾಂ): ಅದೃಷ್ಟ ಅಂದ್ರೆ ಹೀಗಿರ್ಬೇಕು. ದಿನನಿತ್ಯ ಆಟೋ ಓಡಿಸಿ ಬದುಕು ಕಟ್ಟಿಕೊಂಡಿದ್ದ ಆಟೋ ಚಾಲಕನೊಬ್ಬ ದಿಢೀರನೆ ಲಕ್ಷುರಿ ಕಾರು ಓಡಿಸುವ ಅದೃಷ್ಟ ಪಡೆದಿದ್ದಾನೆ. ಬರ್ಪೇಟಾ ಜಿಲ್ಲೆಯ ಪಥ್ಶಾಲಾದ ಆಟೋ ಚಾಲಕನೊಬ್ಬ 13 ಪುಟಗಳ ಲಾಟರಿ ಪುಸ್ತಕವನ್ನೇ ಖರೀದಿಸಿದ್ದ. ಅದರಲ್ಲಿ 5 ಲಾಟರಿಗಳನ್ನು ಬೇರೆಯವರಿಗೆ ಮಾರಿದ್ದ ಆತ ಉಳಿದ ಎಂಟನ್ನು ತನ್ನ ಬಳಿಯೇ ಉಳಿಸಿಕೊಂಡಿದ್ದ. ಇದರಲ್ಲಿ ಒಂದು ಲಾಟರಿಗೆ ಅದೃಷ್ಟ ಖುಲಾಯಿಸಿದ್ದು, ಆ ಲಾಟರಿಗೆ ಟಾಟಾ ಹ್ಯಾರಿಯರ್ ಲಕ್ಷುರಿ ಕಾರ್ ಬಂದಿದೆ. ಹೀಗಾಗಿ ಸಾಮಾನ್ಯ ಆಟೋ ಚಾಲಕನೊಬ್ಬ ದಿಢೀರನೆ ಲಕ್ಷಾಂತರ ರೂ. ಮೌಲ್ಯದ ಕಾರಿನ ಮಾಲೀಕನಾಗಿದ್ದಾನೆ.