ಲಿಮ್ಕಾ ಬುಕ್ ಆಫ್ ವರ್ಲ್ಡ್ ರಿಕಾರ್ಡ್ಸ್ಗೆ ಸೇರಿದ ‘ಕನ್ಯಾ ಪೂಜೆ’! - ಮಂಡಿ ಕನ್ಯಾ ಪೂಜೆ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5135599-1090-5135599-1574338745597.jpg)
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಶಿವರಾತ್ರಿ ನಿಮಿತ್ತ ಆಯೋಜಿಸಲಾಗಿದ್ದ ‘ಕನ್ಯಾ ಪೂಜೆ’ ಲಿಮ್ಕಾ ಬುಕ್ ಆಫ್ ವರ್ಲ್ಡ್ ರಿಕಾರ್ಡ್ಸ್ 2020ಗೆ ಸೇರಿದೆ. ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯ ಉದ್ದೇಶಕ್ಕಾಗಿ ಜಿಲ್ಲಾಡಳಿತ 9 ಮಾರ್ಚ್ 2019 ಶಿವರಾತ್ರಿಯಂದು ಒಂದೇ ವೇದಿಕೆಯಲ್ಲಿ 1008 ಕನ್ಯೆಯರಿಗೆ ಸಾಮೂಹಿಕ ಪೂಜೆ ಮಾಡಲಾಗಿತ್ತು. ಈ ‘ಕನ್ಯಾ ಪೂಜೆ’ ಈಗ ಲಿಮ್ಕಾ ಬುಕ್ ಆಫ್ ವರ್ಲ್ಡ್ ರಿಕಾರ್ಡ್ಸ್ 2020ಗೆ ಸೇರಿದೆ. ಲಿಮ್ಕಾ ಬುಕ್ ಆಫ್ ವರ್ಲ್ಡ್ ರಿಕಾರ್ಡ್ಸ್ ಅವರು ಬುಧವಾರದಂದು ಇದರ ಸೂಚನೆಯನ್ನು ಜಿಲ್ಲಾಡಳಿತಕ್ಕೆ ಇ-ಮೇಲ್ ಮೂಲಕ ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಋಗ್ವೇದ್ ಠಾಕೂರ್ ಖಚಿತಪಡಿಸಿದ್ದಾರೆ. ಲಿಮ್ಕಾ ಬುಕ್ ಆಫ್ ವರ್ಲ್ಡ್ ರಿಕಾರ್ಡ್ಸ್ 2020ಯಲ್ಲಿ ಮಂಡಿ ಜಿಲ್ಲೆ ಸೇರಿರುವುದು ಜಿಲ್ಲೆ ಜನತೆಗೆ ಮಾತ್ರವಲ್ಲ ಈಡೀ ರಾಜ್ಯಕ್ಕೆ ಹೆಮ್ಮೆ ಪಡುವ ಸಂಗತಿಯಾಗಿದೆ ಎಂದು ಜಿಲ್ಲಾಧಿಕಾರಿ ಠಾಕೂರ್ ತಿಳಿಸಿದರು.