ಟಗರಿನಂತೆ ಎಗರಿ ಟೋಲ್ಗೆ ಗುದ್ದಿದ ಲಾರಿ! ವಿಡಿಯೋ - ಗುಂಟೂರು ಲಾರಿ ಅಪಘಾತ
🎬 Watch Now: Feature Video
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕಾಜಾ ಟೋಲ್ಪ್ಲಾಜಾದ ಸಿಗ್ನಲ್‌ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿದೆ. ಈ ಲಾರಿ ತಮಿಳುನಾಡಿನಿಂದ ಬರುತ್ತಿತ್ತು ಎಂಬ ಮಾಹಿತಿ ದೊರೆತಿದೆ. ಘಟನೆಯಲ್ಲಿ ಚಾಲಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳಗಿರಿಯಿಂದ ಗುಂಟೂರಿಗೆ ಹೋಗುವ ಮಾರ್ಗ ಮಧ್ಯೆ ಇರುವ ಟೋಲ್ ಸೆಂಟರ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.