ಕೋವಿಡ್ ಮಧ್ಯೆ ಮಧುರೈನಲ್ಲಿ 'ಜಲ್ಲಿಕಟ್ಟು'ಪ್ರಾರಂಭ: ಗುದ್ದಾಟಕ್ಕೆ ಸಿದ್ಧವಾದ ಗೂಳಿಗಳು
🎬 Watch Now: Feature Video
ಮಧುರೈ: ಮಕರ ಸಂಕ್ರಾಂತಿ ಹಬ್ಬದಂದು ತಮಿಳುನಾಡಿಲ್ಲಿ ಜಲ್ಲಿಕಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಈ ದಿನ ಮಧುರೈನ ಅವನಿಯಾಪುರಂ ಪ್ರದೇಶದಲ್ಲಿ ಜಲ್ಲಿಕಟ್ಟು ಹಬ್ಬ ಪ್ರಾರಂಭವಾಗಿದ್ದು, 200 ಗೂಳಿಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ಅಲ್ಲದೇ ಜಲ್ಲಿಕಟ್ಟಿನಲ್ಲಿ ಭಾಗವಹಿಸುವ ಮೊದಲು ಗೂಳಿಗಳಿಗೆ ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಟಗಾರರಿಗೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, 150ಕ್ಕಿಂತ ಹೆಚ್ಚಿನ ಆಟಗಾರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಶೇ.50ರಷ್ಟು ಜನರಿಗೆ ಮಾತ್ರ ಜಲ್ಲಕಟ್ಟು ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ.