ಬದ್ರಿನಾಥನಿಗೆ ಹಿಮಾಭಿಷೇಕ: ಪ್ರವಾಸಿಗರಿಗೆ ಸ್ವರ್ಗವೇ ಧರೆಗಿಳಿದು ಬಂದ ಅನುಭವ! - ಉತ್ತರಾಖಂಡನ ಬದ್ರಿನಾಥ್
🎬 Watch Now: Feature Video
ಉತ್ತರಕಾಶಿ: ಮಳೆಗಾಲ ಮುಗಿದು ಚಳಿಗಾಲ ಶುರುವಾಗಿದೆ. ದೇಶದ ಕೆಲ ಭಾಗಗಳಲ್ಲಿ ಜನರಿಗೆ ಈಗಾಗಲೇ ಇದರ ಅನುಭವವಾಗ್ತಿದೆ.ಈ ಮಧ್ಯೆ ಹಿಮದಿಂದಲೇ ಆವರಿಸಿರುವ ಉತ್ತರಾಖಂಡದ ಪ್ರಸಿದ್ಧ ಧಾರ್ಮಿಕ ತಾಣಗಳಾದ ಬದ್ರಿನಾಥ್ ಹಾಗು ಕೇದಾರನಾಥ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಈಗ ಇಲ್ಲಿ ಎಲ್ಲಿ ನೋಡಿದ್ರೂ ಹಿಮದ ಮಳೆ ಸುರಿದಂಗೆ ಭಾಸವಾಗ್ತಿದೆ. ಸಮುದ್ರ ಮಟ್ಟದಿಂದ ಸುಮಾರು 3,000 ಮೀಟರ್ ಎತ್ತರದಲ್ಲಿರುವ ಗಂಗೋತ್ರಿಧಾಮದಲ್ಲಿ ಸ್ವರ್ಗವೇ ಧರೆಗಿಳಿದು ಬಂದಿರುವ ಅನುಭವ ಪ್ರವಾಸಿಗರಿಗೆ ಆಗ್ತಿದೆ!