ಯುವಕನ ಮೇಲೆ ಮುರಿದುಬಿದ್ದ ಮರದ ಕೊಂಬೆ: ತಪ್ಪಿದ ದುರಂತ - tree branch fell down
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15263102-thumbnail-3x2-fry3efryr.jpg)
ಕಡಬ (ದಕ್ಷಿಣ ಕನ್ನಡ): ಕಡಬದಲ್ಲಿ ಸುನಿಲ್ ಎಂಬ ಯುವಕನ ಮೇಲೆ ಬೃಹತ್ ಮರದ ಕೊಂಬೆಯೊಂದು ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಸ್ತಿಕ್ ಪೈಪ್ ಅಂಗಡಿಯ ಮುಂಭಾಗದಲ್ಲಿ ನಿಂತಿದ್ದ ಲಾರಿಯ ಚಾಲಕನಿಗೆ ಹಿಂಬದಿಗೆ ಬರಲು ಹೇಳುತ್ತಿದ್ದ ವೇಳೆ ಅಲ್ಲೇ ಪಕ್ಕದಲ್ಲಿದ್ದ ಮರದ ಒಣಗಿದ ಕೊಂಬೆಯೊಂದು ಮುರಿದು ಸುನಿಲ್ ಮೇಲೆ ಬಿದ್ದಿದೆ. ಕೊಂಬೆ ಬಿದ್ದ ತಕ್ಷಣ ಸಣ್ಣ ಪ್ರಮಾಣದಲ್ಲಿ ಗಾಯಗೊಂಡ ಸುನಿಲ್ ಅವರನ್ನು ಸ್ಥಳೀಯರು ಉಪಚರಿಸಿ, ನಂತರದಲ್ಲಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
Last Updated : Feb 3, 2023, 8:23 PM IST