ಚಂದ್ರು ಅಂತಿಮ ಯಾತ್ರೆ.. ಕಣ್ಣೀರು ಹಾಕಿದ ಶಾಲೆಯ ಮಕ್ಕಳು - ಶಾಸಕ ಎಂ ಪಿ ರೇಣುಕಾಚಾರ್ಯ
🎬 Watch Now: Feature Video
ಚಂದ್ರು ಸಾವು ನಿಗೂಢವಾಗಿದ್ದು ಸಾಕಷ್ಟು ಜನರನ್ನು ಆಶ್ಚರ್ಯಚಕಿತಗೊಳಿಸಿದೆ. ಹೀಗಾಗಿ ಇಡೀ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಜನ ಮರುಗುತ್ತಿದ್ದಾರೆ. ಸದಾ ಜನರ ಮಧ್ಯೆ ಇರುತ್ತಿದ್ದ ಚಂದ್ರುವನ್ನು ಕಳೆದುಕೊಂಡ ಹೊನ್ನಾಳಿ ಜನ ಅನಾಥರಾಗಿದ್ದಾರೆ. ಈಗಾಗಲೇ ಪಾರ್ಥಿವ ಶರೀರವನ್ನು ಸಾವಿರಾರು ಜನರ ಮಧ್ಯೆ ಮೆರವಣಿಗೆ ಮಾಡಲಾಗಿದೆ. ತಾಲೂಕಿನ ತರಗನಹಳ್ಳಿಗೆ ಪಾರ್ಥಿವ ಶರೀರ ತಲುಪಿದ್ದೆ ತಡ ಆ ಗ್ರಾಮದ ಜನ ಅತ್ತಿದ್ದಾರೆ. ಇದೇ ತರಗನಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳು ಶಾಲೆ ಮುಗಿಸಿ ಮನೆಗೆ ಹೆಜ್ಜೆ ಹಾಕುವ ವೇಳೆ ಚಂದ್ರು ಪಾರ್ಥಿವ ಶರೀರವನ್ನು ಗಮನಿಸಿ 'ಚಂದ್ರು ಅಣ್ಣ ಇಲ್ಲ' ಎಂದು ಗೋಳೊ ಎಂದು ಅಳುವ ಮೂಲಕ ಪಾರ್ಥಿವ ಶರೀರದೊಂದಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಶಾಸಕ ಎಂ ಪಿ ರೇಣುಕಾಚಾರ್ಯ ಮಕ್ಕಳೊಂದಿಗೆ ಅತ್ತಿದ್ದಾರೆ.
Last Updated : Feb 3, 2023, 8:31 PM IST