ಹಂಪಿ ಝಗಮಗ! ಕಣ್ಮನ ಸೆಳೆಯುತ್ತಿದೆ ಆಕರ್ಷಕ ದೀಪಾಲಂಕಾರ: ವಿಡಿಯೋ - ಹಂಪಿಯ ಬಹುತೇಕ ಸ್ಮಾರಕಗಳಿಗೆ ದೀಪಾಲಂಕಾರ
🎬 Watch Now: Feature Video
ವಿಜಯನಗರ: ವಿಶ್ವವಿಖ್ಯಾತ ಪಾರಂಪರಿಕ ತಾಣ ಹಂಪಿಯಲ್ಲಿ ಗುರುವಾರ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮದುವಣಗಿತ್ತಿಯಂತೆ ಸಿಂಗಾರಗೊಂಡ ಹಂಪಿಯನ್ನು ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿ20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಭಾರತ ನಿನ್ನೆಯಿಂದ ಅಧಿಕೃತವಾಗಿ ವಹಿಸಿಕೊಂಡಿದೆ. ಹೀಗಾಗಿ, ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೂ ಸೇರಿದಂತೆ ದೇಶದ 100 ಸ್ಮಾರಕಗಳು ಡಿಸೆಂಬರ್ 1 ರಿಂದ 7 ರವರೆಗೆ ಝಗಮಗಿಸಲಿವೆ. ಇದರ ಭಾಗವಾಗಿ ಹಂಪಿಯ ಬಹುತೇಕ ಸ್ಮಾರಕಗಳಿಗೆ ದೀಪಾಲಂಕಾರ ಮಾಡಲಾಗಿದೆ.
Last Updated : Feb 3, 2023, 8:34 PM IST