ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಕೇಸ್: ತಂದೆಯನ್ನು ಭೇಟಿಯಾಗಲು ಹೊರಟಿದ್ದವ ಅಪಘಾತಕ್ಕೆ ಬಲಿ - ETV Bharath Karnataka
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17693176-thumbnail-4x3-dfd.gif)
ಬೆಂಗಳೂರು: ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಿಟ್ ಅಂಡ್ ರನ್ ಘಟನೆ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಅಂಥಹದ್ದೇ ಮತ್ತೊಂದು ಅಪಘಾತಕ್ಕೆ ಸವಾರ ಪ್ರಾಣ ಕಳೆದುಕೊಂಡಿದ್ದಾನೆ. ಪೀಣ್ಯದ ಟಿ.ದಾಸರಹಳ್ಳಿ ಬಳಿ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಸಂಜಯ್ ಬಾಬು ಎಂಬಾತ ಸಾವನ್ನಪ್ಪಿದ್ದು, ಅವರ ಮಗ ವೇದಾಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜನವರಿ 28ರಂದು ಸಂಜಯ್ ಬಾಬು ಮಗನೊಂದಿಗೆ ತಮ್ಮ ತಂದೆಯನ್ನ ಭೇಟಿಯಾಗಲು ಸ್ಕೂಟರಿನಲ್ಲಿ ಹೊರಟಿದ್ದರು. ದಾಸರಹಳ್ಳಿ ಬಳಿ ತೆರಳುತ್ತಿದ್ದಾಗ ವೇಗವಾಗಿ ಬಂದ ಕಾರು ಹಿಂಬದಿಯಿಂದ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ತಂದೆ ಮಗ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಫೆಬ್ರವರಿ 3ರಂದು ಸಂಜಯ್ ಬಾಬು ಸಾವನ್ನಪ್ಪಿದ್ದಾರೆ. ಇತ್ತ ವೇದಾಂತ್ಗೂ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಅಜಾಗರೂಕತೆಯಿಂದ ಕಾರು ಚಲಾಯಿಸಿ ಅವಘಡಕ್ಕೆ ಕಾರಣರಾದ ಶುಭಾ ಎಂಬುವವರನ್ನು ಪೀಣ್ಯಾ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ; ಗಂಡನಿಂದ ಕೊಲೆ ಶಂಕೆ