ಉಕ್ರೇನ್‌ನಲ್ಲಿ ಹಾವೇರಿ ವಿದ್ಯಾರ್ಥಿ ಸಾವಿನ ಬಗ್ಗೆ ಪ್ರತಿಕ್ರಿಯಿಸುವಾಗ ಭಾವುಕರಾದ ಸಿಎಂ - ನವೀನ್ ಬಗ್ಗೆ ಮಾಧ್ಯಮದ ಮುಂದೆ ಸಿಎಂ ಪ್ರತಿಕ್ರಿಯೆ

🎬 Watch Now: Feature Video

thumbnail

By

Published : Mar 1, 2022, 6:25 PM IST

Updated : Feb 3, 2023, 8:18 PM IST

ಬೆಂಗಳೂರು: ಉಕ್ರೇನ್ ದೇಶದ ಖಾರ್ಕಿವ್​​ನಲ್ಲಿ ನಡೆದ ಭೀಕರ ದಾಳಿಯಲ್ಲಿ ಕರ್ನಾಟಕದ ಹಾವೇರಿಯ ಮೆಡಿಕಲ್‌ ವಿದ್ಯಾರ್ಥಿ ನವೀನ್​​​ ಶೇಖರಪ್ಪ ಗ್ಯಾನಗೌಡರ್(21)​ ಸಾವನ್ನಪ್ಪಿದ್ದು, ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು. ಒಂದು ವಾರದಿಂದ ಬಂಕರ್​​ನಲ್ಲಿದ್ದ ನವೀನ್ ಹಾಗೂ ಆತನ ಇಬ್ಬರು ಸ್ನೇಹಿತರು ಇಂದು ರೈಲ್ವೇ ಸ್ಟೇಷನ್​ ಮೂಲಕ ಆಚೆ ಬಂದು ಇತರರನ್ನು ಸೇರಿಕೊಳ್ಳಬೇಕು ಎಂಬುವಷ್ಟರಲ್ಲಿ ಶೆಲ್ ದಾಳಿ ನಡೆದಿದೆ. ಈ ವೇಳೆ ನವೀನ್ ಸಾವನ್ನಪ್ಪಿದ್ರೆ, ಅದೇ ಗ್ರಾಮದ ಮತ್ತೋರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಈ ವಿಚಾರವಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಪರ್ಕದಲ್ಲಿರುವುದಾಗಿ ಸಿಎಂ ತಿಳಿಸಿದರು.
Last Updated : Feb 3, 2023, 8:18 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.