ETV Bharat / t20-world-cup-2022

ಪಾಕ್​ ವಿರುದ್ಧ ಗೆಲುವು: ಕುಣಿದು ಕುಪ್ಪಳಿಸಿದ ಜಿಂಬಾಬ್ವೆ ಫ್ಯಾನ್ಸ್.. ಮುಂದಿನ ಬಾರಿ, ನಿಜವಾದ ಮಿಸ್ಟರ್ ಬೀನ್ ಕಳಿಸುವೆ ಎಂದ ಎಮ್ಮರ್ಸನ್ - ಪಾಕ್​ ವಿರುದ್ಧ ಗೆಲುವು

ಜಿಂಬಾಬ್ವೆ ಕ್ರಿಕೆಟ್ ಶೇರ್ ಮಾಡಿರುವ ವಿಡಿಯೋದಲ್ಲಿ, ಅಭಿಮಾನಿಗಳು ಕೊನೆಯ ಎಸೆತದವರೆಗೂ ತಮ್ಮ ಟೆಲಿವಿಷನ್ ಮುಂದೆ ಕುಳಿತು ವೀಕ್ಷಿಸುತ್ತಿರುವುದನ್ನು ಕಾಣಬಹುದು. ತಮ್ಮ ತಂಡ ಅಂತಿಮವಾಗಿ ಪಾಕಿಸ್ತಾನವನ್ನು ಕೂದಲೆಳೆಯಿಂದ ಸೋಲಿಸಿದಾಗ ಅವರು ಸಂತೋಷದಿಂದ ಕುಣಿದು ಕುಪ್ಪಳಿಸಿದರು. ಇದಕ್ಕೂ ಮುನ್ನ ಜಿಂಬಾಬ್ವೆ ಅಧ್ಯಕ್ಷ ಎಮ್ಮರ್ಸನ್ ದಂಬುಡ್ಜೊ ಮ್ನಂಗಾಗ್ವಾ ಜಿಂಬಾಬ್ವೆ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ್ದರು. ಟ್ವಿಟರ್​​ನಲ್ಲಿ ಟ್ವೀಟ್​ ಮಾಡುವ ಮೂಲಕ ಅವರು ತಮ್ಮ ತಂಡಕ್ಕೆ ಅಭಿನಂದನೆ ತಿಳಿಸಿದರು.

ಪಾಕಿಸ್ತಾನ ವಿರುದ್ಧ ಗೆಲುವು: ಕುಣಿದು ಕುಪ್ಪಳಿಸಿದ ಜಿಂಬಾಬ್ವೆ ಅಭಿಮಾನಿಗಳು
Watch: Zimbabwe fans erupt in joy after defeating Pakistan
author img

By

Published : Oct 28, 2022, 12:08 PM IST

Updated : Oct 28, 2022, 12:24 PM IST

ಹೈದರಾಬಾದ್: ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದ ಫಲಿತಾಂಶ ತುಂಬಾನೇ ಅನಿರೀಕ್ಷಿತವಾಗಿತ್ತು ಎಂಬುದು ನಿಜ. ಆದರೆ, ಸುದೀರ್ಘ ಆರು ವರ್ಷಗಳ ನಂತರ ವಿಶ್ವಕಪ್​ಗೆ ಮರಳಿದ ಜಿಂಬಾಬ್ವೆ ತಂಡದ ಕಠಿಣ ಪರಿಶ್ರಮವನ್ನು ಮಾತ್ರ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಅತ್ಯಂತ ರೋಚಕ ಹಣಾಹಣಿಯಲ್ಲಿ ಏಷ್ಯಾದ ಬಲಿಷ್ಠ ತಂಡ ಪಾಕಿಸ್ತಾನವನ್ನು ಜಿಂಬಾಬ್ವೆ ಮಣ್ಣುಮುಕ್ಕಿಸಿದ್ದು, ಐಸಿಸಿ ಟಿ20 ಪಂದ್ಯಾವಳಿ ಮತ್ತಷ್ಟು ಕುತೂಹಲಕರವಾಗಿದೆ. ಅಷ್ಟೇ ಅಲ್ಲ.. ಪಾಕಿಸ್ತಾನ ಪಂದ್ಯಾವಳಿಯಿಂದಲೇ ಹೊರಹೋಗುವ ಲಕ್ಷಣಗಳೂ ಕಾಣಿಸುತ್ತಿವೆ.

ಟ್ವಿಟರ್​​ನಲ್ಲಿ ಸಂದೇಶಗಳ ಮಹಾಪೂರ: ಗುರುವಾರದ ಜಿಂಬಾಬ್ವೆ ಗೆಲುವಿನ ನಂತರ ಟ್ವಿಟರ್​ನಲ್ಲಿ ಸಂದೇಶಗಳ ಪ್ರವಾಹವೇ ಬಂದಿತ್ತು. ಆದರೆ, ಜಿಂಬಾಬ್ವೆ ಅಭಿಮಾನಿಗಳ ವಿಜಯೋತ್ಸವ ಮಾತ್ರ ಎಲ್ಲರ ಗಮನ ಸೆಳೆದಿದ್ದು ಸತ್ಯ. ಜಿಂಬಾಬ್ವೆ ಕ್ರಿಕೆಟ್ ಶೇರ್ ಮಾಡಿರುವ ವಿಡಿಯೋದಲ್ಲಿ, ಅಭಿಮಾನಿಗಳು ಕೊನೆಯ ಎಸೆತದವರೆಗೂ ತಮ್ಮ ಟೆಲಿವಿಷನ್ ಮುಂದೆ ಕುಳಿತು ವೀಕ್ಷಿಸುತ್ತಿರುವುದನ್ನು ಕಾಣಬಹುದು. ತಮ್ಮ ತಂಡ ಅಂತಿಮವಾಗಿ ಪಾಕಿಸ್ತಾನವನ್ನು ಕೂದಲೆಳೆಯಿಂದ ಸೋಲಿಸಿದಾಗ ಅವರು ಸಂತೋಷದಿಂದ ಕುಣಿದು ಕುಪ್ಪಳಿಸಿದರು.

ನಿಜವಾದ ಮಿಸ್ಟರ್ ಬೀನ್ ಕಳಿಸುವೆ: ಇದಕ್ಕೂ ಮುನ್ನ ಜಿಂಬಾಬ್ವೆ ಅಧ್ಯಕ್ಷ ಎಮ್ಮರ್ಸನ್ ದಂಬುಡ್ಜೊ ಮ್ನಂಗಾಗ್ವಾ ಜಿಂಬಾಬ್ವೆ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ್ದರು. ಟ್ವಿಟರ್​​ನಲ್ಲಿ ಟ್ವೀಟ್​ ಮಾಡುವ ಮೂಲಕ ಅವರು ತಮ್ಮ ತಂಡಕ್ಕೆ ಅಭಿನಂದನೆ ತಿಳಿಸಿದರು.

ಜಿಂಬಾಬ್ವೆಯ ಉತ್ತಮ ಗೆಲುವು ! ಚೆವ್ರಾನ್‌ಗಳಿಗೆ ಅಭಿನಂದನೆಗಳು. ಮುಂದಿನ ಬಾರಿ, ನಿಜವಾದ ಮಿಸ್ಟರ್ ಬೀನ್ ಅನ್ನು ಕಳುಹಿಸಿ...#PakvsZim ಎಂದು ಅವರು ಟ್ವೀಟ್ ಮಾಡಿದ್ದಾರೆ.

  • What a win for Zimbabwe! Congratulations to the Chevrons.

    Next time, send the real Mr Bean…#PakvsZim 🇿🇼

    — President of Zimbabwe (@edmnangagwa) October 27, 2022 " class="align-text-top noRightClick twitterSection" data=" ">

ಮಿಸ್ಟರ್ ಬೀನ್ ಅವರನ್ನು ಅನುಕರಣೆ ಮಾಡುವ ಪಾಕಿಸ್ತಾನದ ಕಾಮಿಡಿಯನ್ ಆಸಿಫ್ ಮುಹಮ್ಮದ್ ಅವರನ್ನು ಜಿಂಬಾಬ್ವೆ ಅಧ್ಯಕ್ಷ ಎಮರ್ಸನ್ ವ್ಯಂಗ್ಯ ಮಾಡಿದ್ದಾರೆ. ತಾನೇ ನಿಜವಾದ ಮಿಸ್ಟರ್ ಬೀನ್ ಎನ್ನುವ ರೀತಿಯಲ್ಲಿ ಆಸಿಫ್ ಮುಹಮ್ಮದ್ 2016ರಲ್ಲಿ ಜಿಂಬಾಬ್ವೆಗೆ ಬಂದಿದ್ದರು. ಜಿಂಬಾಬ್ವೆ ಜೊತೆಗಿನ ಪಂದ್ಯಕ್ಕೂ ಮುನ್ನ ತನ್ನ ಆಟಗಾರರು ಅಭ್ಯಾಸ ಮಾಡುತ್ತಿರುವ ವೀಡಿಯೊ ಒಂದನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಟ್ವಿಟರ್ ಬಳಕೆದಾರರೊಬ್ಬರು, ಜಿಂಬಾಬ್ವೆಯವರಾದ ನಾವು ನಿಮ್ಮನ್ನು ಯಾವತ್ತೂ ಕ್ಷಮಿಸಲ್ಲ. ಮಿಸ್ಟರ್ ಬೀನ್ ರೋವನ್ ಬದಲಿಗೆ ನೀವು ಒಂದು ಬಾರಿ ವಂಚಕ ಪಾಕ್ ಬೀನ್ ಅವರನ್ನು ನೀವು ನಮಗೆ ತೋರಿಸಿರುವಿರಿ. ನಾಳೆ ನಿಮ್ಮನ್ನು ನೋಡಿಕೊಳ್ಳುತ್ತೇವೆ. ನೀವು ನಿಮ್ಮ ರಕ್ಷಣೆಗಾಗಿ ಮಳೆ ಬರಲಿ ಎಂದು ಪ್ರಾರ್ಥಿಸಿ ಎಂದು ಬರೆದಿದ್ದರು.

ಬ್ಯಾಟ್ಸ್​​ಮನ್​ಗಳ ಮೇಲಿನ ಅವಲಂಬನೆಯೇ ಮುಳುವಾಯ್ತು; ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ತನ್ನ ಆರಂಭಿಕ ಬ್ಯಾಟ್ಸಮನ್​ಗಳ ಮೇಲೆ ಪಾಕಿಸ್ತಾನದ ವಿಪರೀತ ಅವಲಂಬನೆಯೇ ಅದಕ್ಕೆ ಮುಳುವಾಯಿತು. ಟಿ20 ವಿಶ್ವಕಪ್​ನ ಸುಫರ್-12 ರ ಅತಿ ಕಡಿಮೆ ಸ್ಕೋರ್ ಆಗಿದ್ದ ಪಂದ್ಯದಲ್ಲಿ ಜಿಂಬಾಬ್ವೆ ಪಾಕಿಸ್ತಾನವನ್ನು ಬಗ್ಗು ಬಡಿಯಿತು. ಒಂದು ಕಡೆ ಪಾಕಿಸ್ತಾನದ ಬ್ಯಾಟಿಂಗ್ ವಿಫಲವಾಯಿತು ಹಾಗೂ ಮತ್ತೊಂದು ಕಡೆ ತನ್ನ ಬೌಲರ್​ಗಳು ರನ್ ಚೇಸ್ ಮಾಡಿ ಗೆಲುವು ತಂದು ಕೊಡುವಂತೆ ಪ್ರಯತ್ನ ಮಾಡಿದ್ದು ಕೂಡ ಫಲ ನೀಡಲಿಲ್ಲ. ಆಲ್ ರೌಂಡರ್ ಸಿಕಂದರ್ ರಾಜಾ ಮೂರು ವಿಕೆಟ್ ಪಡೆದರು.

Last Updated : Oct 28, 2022, 12:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.