ETV Bharat / sukhibhava

ಮನುಷ್ಯರಿಗೂ ಹರಡಬಹುದು ಝೋಂಬಿ ಡೀರ್​​ ರೋಗ​; ಇದರ ಪತ್ತೆ ಅಸಾಧ್ಯ ಎಂದು ವಿಜ್ಞಾನಿಗಳು - ಹುಚ್ಚು ಹಸುವಿನ ರೋಗ

ಝೋಂಬಿ ಡೀರ್​ ರೋಗವೂ ದೀರ್ಘಕಾಲದ ಕ್ಷೀಣತೆ ರೋಗವಾಗಿದ್ದು, ಇದು ಮಾರಾಣಾಂತಿಕವಾಗಿದೆ.

zombie deer disease detected across America

author img

By ETV Bharat Karnataka Team

Published : Jan 5, 2024, 12:44 PM IST

ವಾಷಿಂಗ್ಟನ್​​​: ಪ್ರಸ್ತುತ ಅಮೆರಿಕದಾದ್ಯಂತ ಝೋಂಬಿ ಡೀರ್​ ರೋಗವೂ ಪತ್ತೆಯಾಗಿದ್ದು, ಇದು ಮಾನವರಿಗೂ ಹರಡುವ ಸಾಧ್ಯತೆ ಇದೆ. ಆದರೆ, ಇದನ್ನು ಪತ್ತೆ ಮಾಡುವುದು ಅಸಾಧ್ಯ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಝೋಂಬಿ ಡೀರ್​ ರೋಗವೂ ದೀರ್ಘಕಾಲದ ಕ್ಷೀಣತೆ ರೋಗವಾಗಿದ್ದು, ಇದು ಮಾರಾಣಾಂತಿಕವಾಗಿದೆ. ಪ್ರಿಯಾನ್​ ಸೋಂಕಿಗೆ ಒಳಗಾದ ಜಿಂಕೆಗಳಲ್ಲಿ ಈ ರೋಗ ಲಕ್ಷಣಗಳು ಕಾಡುತ್ತದೆ. ಈ ರೋಗಕ್ಕೆ ತುತ್ತಾದ ಜಿಂಕಿಗಳ ನರ ಮಂಡಲ ವ್ಯವಸ್ಥೆಯ ಮೇಲೆ ಇದು ಪರಿಣಾಮ ಬೀರುತ್ತದೆ. ಇದು ಜಿಂಕೆ, ಎಲ್ಕ್​​ ಮತ್ತು ಮೂಸ್​ ಪ್ರಾಣಿಗಳ ದೇಹದ ಕಾರ್ಯಾಚರಣೆಗೆ ಅಡ್ಡಿ ಮಾಡುತ್ತದೆ. ಇದು ಸದ್ಯ ಅಮೆರಿಕದ 26 ರಾಜ್ಯದಲ್ಲಿ ಹರಡಿದೆ.

ಈ ರೋಗವೂ ಮಾನವರಿಗೆ ಹರಡುವ ಸಾಧ್ಯತೆ ಇದೆ. ಇದರ ಸೂಚನೆ ಬಗ್ಗೆ ನಮಗೆ ಗೊತ್ತಿಲ್ಲದೆ ಇರಬಹುದು ಎಂದು ಮಿನ್ನೆಸೊಟಾ ಯುನಿವರ್ಸಿಟಿಯ ಡಾ ಮೈಕೆಲ್​ ಒಸ್ಟರ್ಹೊಲ್ಮ್​ ತಿಳಿಸಿದ್ದಾರೆ. ಮ್ಯಾಡ್​ ಕೌ ರೋಗವೂ (ಹುಚ್ಚು ಹಸುವಿನ ರೋಗ) ಹಸುವಿನಲ್ಲಿ ಕಂಡು ಬಂದ 10 ವರ್ಷದ ಬಳಿಕ ಇದು ತನ್ನ ರೋಗ ಲಕ್ಷಣವನ್ನು ತೋರಿತು. ಈ ಸೋಂಕಿನ ಪತ್ತೆಗೆ 10 ವರ್ಷ ಸಮಯ ಬೇಕಾಯಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ರೋಗವೂ ಮಾರಾಣಾಂತಿಕವಾಗಿದ್ದು, ಉಪಶಮನ ಮಾಡಲಾಗದ ಮತ್ತು ಹೆಚ್ಚಿನ ರೂಪಾಂತರವನ್ನು ಹೊಂದಿದೆ, ಇದನ್ನು ಸೋಂಕಿತ ಪ್ರಾಣಿಗಳಿಂದ ಅಥವಾ ಪರಿಸರದಿಂದ ನಿರ್ಮೂಲನೆ ಮಾಡಲು ಯಾವುದೇ ಪರಿಣಾಮಕಾರಿಯಾದ ಮಾರ್ಗಗಳಿಲ್ಲ ಎಂದು ಮಿನ್ನೆಸೊಟಾ ಯುನಿವರ್ಸಿಟಿಯ ಡಾ ಕೊರೆ ಆಂಡ್ರೆಸನ್​ ತಿಳಿಸಿದ್ದಾರೆ.

ಈ ಝೋಂಬಿ ಡೀರ್​ ರೋಗವೂ ಮಾನವರಿಗೆ ಹರಡಬಹುದಾಗಿದೆ. ಯಾವ ಹಂತದಲ್ಲಿ ಇದು ಹರಡುತ್ತದ. ಒಂದು ವೇಳೆ ಇದು ಹರಡಿದರೂ ಪತ್ತೆ ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ತಿಳಿಸಿದೆ.

ಈ ರೋಗವೂ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿಲ್ಲ ಎಂಬ ಮಾತ್ರಕ್ಕೆ ಅದು ಮತ್ತೆ ಸಂಭವಿಸುವುದಿಲ್ಲ ಎಂದು ಅಲ್ಲ. ಇದು ಮ್ಯಾಡ್​ ಕೌ ರೋಗದಂತೆ ಮಾರಾಣಾಂತಿಕ ನರ ಅಸ್ವಸ್ಥತೆಗೆ ಕಾರಣವಾಗಲಿದೆ.

ಬ್ರಿಟನ್​ನಲ್ಲಿ ಈ ಮ್ಯಾಡ್​ ಕೌ ರೋಗವೂ ರಾತ್ರೋರಾತ್ರಿ ಉಲ್ಬಣಗೊಂಡು ಸಾಕು ಪ್ರಾಣಿಗಳ ನರ ಮಂಡಲ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಿತು. ಇದರಿಂದ ಹಸುಗಳು ಸಾಮರ್ಥ್ಯವೂ ಕ್ಷೀಣಿಸಿತು. ಅಲ್ಲದೇ ಇವು ಹಿಂಸಾತ್ಮಕವಾಗಿ ವರ್ತನೆ ತೋರಿದ್ದವು. ಅದೇ ರೀತಿ ಏನಾದರೂ ಆಗಲಿದೆಯಾ ಎಂಬುದನ್ನು ನಾವು ಮಾತನಾಡುತ್ತಿದ್ದೇವೆ. ಆದರೆ ಇದು ಆಗುತ್ತದೆ ಎಂದು ಯಾರು ಸ್ಪಷ್ಟವಾಗಿ ತಿಳಿಸುತ್ತಿಲ್ಲ. ಆದರೆ, ಜನರು ಇದಕ್ಕೆ ಸಿದ್ದರಾಗಿರಬೇಕು ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಆತಂಕ, ನಿದ್ರೆಯಲ್ಲಿ ತೊಡಕು: ಜೆಎನ್ 1 ಸೋಂಕಿನ ಹೊಸ ಲಕ್ಷಣಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.