ETV Bharat / sukhibhava

ದಪ್ಪಾಗಿದ್ದೀರಾ?, ಬೊಜ್ಜು ಕರಗಿಸಲು ಯೋಚಿಸುತ್ತಿದ್ದೀರಾ? ಈ ಯೋಗಾಸನಗಳನ್ನು ತಪ್ಪದೆ ಮಾಡಿ.. - ಧನುರಾಸನ ಮಾಡುವ ವಿಧಾನದ ಬಗ್ಗೆ ತಿಳಿಯೋಣಾ

ಆಧುನಿಕ ದಿನಮಾನಗಳಲ್ಲಿ ಯುವಕರಾಗಲಿ ಮತ್ತು ಹಿರಿಯರಾಗಲಿ ತಮ್ಮ ಕೆಲಸ ಮತ್ತು ಆಹಾರ ಪದ್ಧತಿಯಿಂದಾಗಿ ವಿಪರೀತ ಬೊಜ್ಜು ಬೆಳೆಯುತ್ತಿದೆ. ಚಿಕ್ಕ ವಯಸ್ಸಿಗೆ ಯುವಕರು ವಯಸ್ಸಾದಂತೆ ಕಾಣುತ್ತಾರೆ. ಜೆನೆಟಿಕ್ಸ್, ಜಡ ಜೀವನಶೈಲಿ, ಕಳಪೆ ಆಹಾರ ಪದ್ಧತಿ, ನಿಯಮಿತ ವ್ಯಾಯಾಮದ ಕೊರತೆ ಮತ್ತು ಒತ್ತಡದ ಪರಿಣಾಮವೇ ಇದಕ್ಕೆ ಕಾರಣ. ಯೋಗ ಮತ್ತು ಸಮತೋಲಿತ ಆಹಾರದ ಹೊಟ್ಟೆಯ ಕೊಬ್ಬು ಕರಗಿಸಬಹುದು. ಇದಕ್ಕೆ ಸಹಾಯ ಮಾಡಬಹುದಾದ ಕೆಲವು ಯೋಗಾಸನಗಳು ಇಲ್ಲಿವೆ.

Yoga poses to reduce belly fat  how to reduce belly fat  what causes belly fat  yoga to reduce weight  how to lose weight with yoga  fitness tips  ಹೊಟ್ಟೆ ಕರಗಿಸುವ ಯೋಗಾಸನಗಳು  ಜಾನು ಶಿರ್ಸಾಸನ ಮಾಡುವ ವಿಧಾನ  ಹಲಾಸನ ಮಾಡುವ ಪದ್ಧತಿ  ಭುಜಂಗಾಸನ ಮಾಡುವುದು ಹೀಗೆ  ಧನುರಾಸನ ಮಾಡುವ ವಿಧಾನದ ಬಗ್ಗೆ ತಿಳಿಯೋಣಾ  ಬಾಲಾಸನ ಮಾಡುವ ಉಪಯೋಗಗಳೇನು
ಈ ಯೋಗಾಸನಗಳು ನಿಮಗೆ ಶ್ರೇಷ್ಠ
author img

By

Published : May 3, 2022, 10:54 AM IST

ದೇಹದ ತೂಕ ಇಳಿಸಿಕೊಳ್ಳಲು ಯೋಗ ಉತ್ತಮ ಮಾರ್ಗ. ಇದು ಜಿಮ್ ವರ್ಕೌಟ್‌ಗಳಿಗಿಂತಲೂ ಸುರಕ್ಷಿತ. ಯೋಗ ನಿಮ್ಮ ಸ್ನಾಯುಗಳಿಗೆ ಕಡಿಮೆ ಒತ್ತಡ ನೀಡುತ್ತದೆ. ನೈಸರ್ಗಿಕ ರೀತಿಯಲ್ಲಿ ಕೊಬ್ಬು ಕರಗಿಸಲು ಅನುವು ಮಾಡಿಕೊಡುತ್ತದೆ. ಕೆಲವು ಯೋಗಾಸನಗಳನ್ನು ನಿರ್ದಿಷ್ಟವಾಗಿ ಹೊಟ್ಟೆಯ ಕೊಬ್ಬು ಕಡಿಮೆ ಮಾಡಲು ಉಪಯುಕ್ತವಾಗಿವೆ. ನೀವು ಈ ಕೆಳಗಿನ ಯೋಗಾಸನಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಹೊಟ್ಟೆಯ ಫ್ಯಾಟ್​ ಕರಗುವುದು ಪಕ್ಕಾ.

ಜಾನು ಶೀರ್ಸಾಸನ: ಜಾನು ಶೀರ್ಸಾಸನ ಮಾಡುವುದರಿಂದ ಬಿಪಿ(ರಕ್ತದೊತ್ತಡ) ನಿಯಂತ್ರಿಸಲು ಹೆಚ್ಚು ಉಪಯೋಗವಾಗುತ್ತದೆ. ಇದರ ಜೊತೆಗೆ ಹೊಟ್ಟೆ ಕರಗಿಸುವುದಕ್ಕೂ ಅತ್ಯಂತ ಪರಿಣಾಮಕಾರಿ. ನೆಲದ ಮೇಲೆ ಕುಳಿತುಕೊಂಡು ಬಲಗಾಲನ್ನು ಮುಂದಕ್ಕೆ ಚಾಚಿ. ಎಡ ಮೊಣಕಾಲನ್ನು ನಿಮ್ಮ ಬದಿಗೆ ಮಡಚಿಕೊಳ್ಳಿ. ನಿಮ್ಮ ಎಡ ಪಾದವು ನಿಮ್ಮ ಬಲ ತೊಡೆ ಮೇಲಿಟ್ಟುಕೊಳ್ಳಬೇಕು.

Yoga poses to reduce belly fat  how to reduce belly fat  what causes belly fat  yoga to reduce weight  how to lose weight with yoga  fitness tips  ಹೊಟ್ಟೆ ಕರಗಿಸುವ ಯೋಗಾಸನಗಳು  ಜಾನು ಶಿರ್ಸಾಸನ ಮಾಡುವ ವಿಧಾನ  ಹಲಾಸನ ಮಾಡುವ ಪದ್ಧತಿ  ಭುಜಂಗಾಸನ ಮಾಡುವುದು ಹೀಗೆ  ಧನುರಾಸನ ಮಾಡುವ ವಿಧಾನದ ಬಗ್ಗೆ ತಿಳಿಯೋಣಾ  ಬಾಲಾಸನ ಮಾಡುವ ಉಪಯೋಗಗಳೇನು
ಜಾನು ಶೀರ್ಸಾಸನ

ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿ ಮತ್ತು ದೀರ್ಘವಾಗಿ ಉಸಿರಾಡಬೇಕು. ಆಮೇಲೆ ಸೊಂಟವನ್ನು ಮುಂದಕ್ಕೆ ಬಾಗಿಸಿ, ಕೈಗಳನ್ನು ಬಲ ಕಾಲಿನ ಕಡೆಗೆ ಮುಂದಕ್ಕೆ ಚಾಚಬೇಕು. ಬಳಿಕ ತಲೆಯನ್ನು ಮೊಣಕಾಲಿಗೆ ತಾಗಿಸಬೇಕು. ನೀವು ಚಾಚಿದ ಕೈಗಳಿಂದ ಬಲ ಪಾದವನ್ನು ಹಿಡಿದುಕೊಳ್ಳಿ. ಈ ಆಸನವನ್ನು ಕೆಲವು ಸೆಕೆಂಡುಗಳ ಕಾಲ ಮಾಡಿ. ಈ ಸ್ಥಿತಿಯಲ್ಲಿ ಸಹಜ ಉಸಿರಾಟ ಕ್ರಿಯೆ ನಡೆಯಲಿ. ಬಳಿಕ ಕೊಂಚ ವಿಶ್ರಾಂತಿ ಪಡೆಯಿರಿ. ವಿಶ್ರಾಂತಿಯ ಬಳಿಕ ಎಡಗಾಲಿನಿಂದ ಮತ್ತೆ ಪುನರಾವರ್ತಿಸಿ. ಹೀಗೆ ಮಾಡುವುದರಿಂದ ಬಿಪಿ ನಿಯಂತ್ರಿಸಲು ಸಾಧ್ಯವಾಗುತ್ತದೆ.

ಹಾಲಾಸನ: ಈ ಆಸನ ರೈತರ ನೇಗಿಲ ರೀತಿ ಇರುತ್ತದೆ. ಇದರಿಂದಾಗಿ ಹೊಟ್ಟೆ ಕರಗಿಸಲು ಹೆಚ್ಚು ಸಹಾಯವಾಗುತ್ತದೆ. ಮೊದಲು ಸರ್ವಾಂಗಾಸನದ ಸ್ಥಿತಿಗೆ ಬನ್ನಿ. ಕಾಲುಗಳನ್ನು 180 ಡಿಗ್ರಿ ಕೋನದಲ್ಲಿ ತಲೆಯ ದಿಕ್ಕಿನೆಡೆ ಬಾಗಿಸಿ ಕಾಲ್ಬೆರಳುಗಳು ನೆಲಕ್ಕೆ ಸ್ಪರ್ಶಿಸಲು ಪ್ರಯತ್ನಿಸಬೇಕು. ಹೊಟ್ಟೆಯನ್ನು ಒಳಗೆಳೆದು ಪಕ್ಕೆಲುಬಿನ ಭಾಗವನ್ನು ಮೇಲಕ್ಕೆ ಹಿಗ್ಗಿಸುತ್ತ ಬೆನ್ನು ನೇರ ಮಾಡಬೇಕು.

ಹಾಲಾಸನ

ಭುಜದ ನೇರದಲ್ಲಿ ಸೊಂಟದ ಭಾಗ ಬರಬೇಕು. ಗದ್ದ ಮತ್ತು ಎದೆ ಒಂದಕ್ಕೊಂದು ತಾಗಿರಬೇಕು. ಈ ಸ್ಥಿತಿಯಲ್ಲಿ ಸಹಜವಾದ ಉಸಿರಾಟ ಕ್ರಿಯೆ ಇರಲಿ. ನಂತರ ನಿಧಾನವಾಗಿ ಎರಡೂ ಕಾಲುಗಳನ್ನು ಮೇಲಕ್ಕೆ ತೆಗೆದುಕೊಂಡು ಸರ್ವಾಂಗಾಸನದ ಸ್ಥಿತಿಗೆ ಬನ್ನಿ. ಅಲ್ಲಿಂದ ಪುನಃ ಕೆಳಗೆ ಬಂದು ಹಿಂದಕ್ಕೆ ಮಲಗಿ ವಿಶ್ರಾಂತಿ ಪಡೆಯಿರಿ.

ಭುಜಂಗಾಸನ: ದೇಹದ ಬೊಜ್ಜು ಕರಗಿಸಿಕೊಳ್ಳಲು ಭುಜಂಗಾಸನವನ್ನು ಮಾಡುವುದೊಳ್ಳೆಯದು. ಇದು ಒಂದು ರೀತಿ ನಾಗರಹಾವು ಹೆಡೆಯೆತ್ತುವ ರೀತಿಯ ಆಸನ. ನೆಲದ ಮೇಲೆ ನೇರವಾಗಿ ಮಲಗಿಕೊಳ್ಳಬೇಕು. ಕೈಗಳನ್ನು ಭುಜದ ಸಮವಾಗಿ ನೆಲದ ಮೇಲಿರಿಸಿ. ಉಸಿರು ಒಳತೆಗೆದುಕೊಳ್ಳುತ್ತಾ ಕೈಗಳ ಆಧಾರದ ಮೇಲೆ ತಲೆ ಮತ್ತು ಭುಜದ ಸಹಾಯದಿಂದ ತಲೆಯನ್ನು ನಿಧಾನವಾಗಿ ಮೇಲಕ್ಕೆತ್ತಿ.

ಭುಜಂಗಾಸನ

ಈ ಆಸನದಲ್ಲಿ ಸಂಪೂರ್ಣವಾಗಿ ಎದೆಯ ಭಾಗವು ಮೇಲಕ್ಕಿರಬೇಕು. ಒಂದೆರಡು ಬಾರಿ ಉಸಿರಾಡಿದ ನಂತರ ನಿಧಾನವಾಗಿ ಮೊದಲಿನ ಸ್ಥಿತಿಗೆ ಬರಬೇಕು. ಈ ಆಸನವನ್ನು ಸರಿಯಾದ ರೀತಿಯಲ್ಲಿ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಬೊಜ್ಜು ಕರಗಿಸಲು ಸುಲಭ ಆಸನವೇ ಈ ಭುಜಂಗಾಸನ.

ಧನುರಾಸನ: ಈ ಆಸನ ಬಿಲ್ಲಿನ ಆಕಾರವನ್ನು ಹೋಲುತ್ತದೆ. ಹೀಗಾಗಿ ಈ ಧನುರಾಸನ ಎಂಬ ಹೆಸರು ಬಂದಿದೆ. ದೇಹದ ಸರ್ವಾಂಗಗಳ ಉತ್ತಮ ಕಾರ್ಯನಿರ್ವಹಣೆಗೆ ಇದು ಅತ್ಯುತ್ತಮ ಆಸನ. ಧನುರಾಸನದಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮೊದಲು ಹೊಟ್ಟೆಯು ನೆಲಕ್ಕೆ ತಾಗಿಸಬೇಕು. ಬಳಿಕ ಕಾಲು ಮತ್ತು ಕೈ ಗಳನ್ನು ಉದ್ದಕ್ಕೆ ಚಾಚಬೇಕು. ಗಲ್ಲವನ್ನು ನೆಲಕ್ಕೆ ತಾಗಿಸಿ. ಆಮೇಲೆ ನಿಮ್ಮ ಕೈಗಳಿಂದ ಪಾದಗಳನ್ನು ಹಿಡಿದುಕೊಳ್ಳಲು ಯತ್ನಿಸಬೇಕು.

ಧನುರಾಸನ

ಆಳವಾದ ಉಸಿರು ತೆಗೆದುಕೊಳ್ಳಿ. ಕಾಲುಗಳ ಸ್ನಾಯುಗಳನ್ನು ಬಿಗಿಗೊಳಿಸಿ. ನಿಧಾನವಾಗಿ ತಲೆ, ಗಲ್ಲ, ಎದೆ ಮತ್ತು ತೊಡೆಯೊಂದಿಗೆ ಕಾಲುಗಳನ್ನು ಏಕಕಾಲದಲ್ಲಿ ಮೇಲ್ನೋಡಲು ಪ್ರಾರಂಭಿಸಿ. ಈ ಸಂದರ್ಭದಲ್ಲಿ ಹೊಟ್ಟೆಯು ಇಡೀ ದೇಹದ ತೂಕವನ್ನು ಸಂಪೂರ್ಣವಾಗಿ ನೆಲಕ್ಕೆ ತಾಗಬೇಕು. ನೋಡಲು ಬಿಲ್ಲು/ಧನಸ್ಸಿನ ಆಕಾರದಲ್ಲಿ ಕಾಣಬೇಕು. ನೀವು 20 ಸೆಕೆಂಡುಗಳು ಈ ಆಸನದಲ್ಲಿರಿ. ಬಳಿಕ ಸಹಜ ಸ್ಥಿತಿಗೆ ಮರಳಿ ವಿಶ್ರಾಂತಿ ಪಡೆಯಿರಿ.

ಬಾಲಾಸನ: ಬಾಲಾಸನವು ಸುಲಭ ಆಸನವಾಗಿದ್ದು ಆರಂಭಿಕರೂ ಸಹ ನಿರ್ವಹಿಸಬಹುದು. ಈ ಆಸನವನ್ನು ಚೈಲ್ಡ್ ಪೋಸ್ ಎಂದೂ ಕರೆಯುತ್ತಾರೆ. ಇದು ಅನೇಕ ಆಸನಗಳಿಗೆ 'ಕೌಂಟರ್' ಆಸನವಾಗಿದೆ ಮತ್ತು ಇದು ವಿಶ್ರಾಂತಿ ಆಗಿರುವುದರಿಂದ ಶೀರ್ಸಾಸನದ ಮೊದಲು ಮತ್ತು ನಂತರ ನಡೆಸಲಾಗುತ್ತದೆ. ಇದನ್ನು ಅನುಸರಿಸಲು ಸುಲಭ ಮತ್ತು ಹೆಚ್ಚು ಪ್ರಯೋಜನಕಾರಿ. ಎರಡು ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಿ. ಎರಡು ಕಾಲುಗಳನ್ನು ಮಡಚಿ ವಜ್ರಾಸನ ಸ್ಥಿತಿಗೆ ಬನ್ನಿ. ಎರಡು ಮಂಡಿಗಳ ನಡುವೆ ಸ್ವಲ್ಪ ಅಂತರವಿರಲಿ. ದೀರ್ಘವಾಗಿ ಉಸಿರು ತೆಗೆದುಕೊಳ್ಳುತ್ತಾ ಎರಡೂ ಕೈಗಳನ್ನು ತಲೆಯ ನೇರ ಮೇಲಕ್ಕೆತ್ತಿ ಸಂಪೂರ್ಣವಾಗಿ ಉಸಿರನ್ನು ಹೊರಹಾಕಿ ಮುಂದಕ್ಕೆ ಬಾಗಿ.

ಎರಡು ಕೈಗಳನ್ನು ಮತ್ತು ಹಣೆಯನ್ನು ನೆಲದ ಮೇಲಿರಿಸಿ 10 ರಿಂದ 15 ಸೆಕೆಂಡುಗಳ ಕಾಲ ಇದೇ ಸ್ಥಿತಿಯಲ್ಲಿ ಇರಿ. ನಂತರ ಉಸಿರು ತೆಗೆದುಕೊಳ್ಳುತ್ತಾ ಮೇಲಕ್ಕೆ ಬನ್ನಿ. ಇದೇ ರೀತಿಯಾಗಿ ಮತ್ತೆ ಪುನರಾವರ್ತಿಸಿ. ಈ ರೀತಿ ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಆಯಾಸ ನಿವಾರಣೆಯಾಗತ್ತದೆ. ಕೊಬ್ಬಿನಾಂಶ ಕರಗಿಸಲು ಸಹಾಯ ಮಾಡುತ್ತದೆ. ಆದ್ರೆ ಗರ್ಭಿಣಿಯರು ಮತ್ತು ಮಂಡಿ ನೋವಿನಿಂದ ಬಳಲುತ್ತಿರುವವರು ಈ ಆಸನ ಮಾಡಕೂಡದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.