ಹೈದರಾಬಾದ್: ಸಸ್ಯಾಹಾರಿ ಜೀವನ ಶೈಲಿಯನ್ನು ಅನುಸರಿಸಲು ಜನರನ್ನು ಪ್ರೋತ್ಸಾಹಿಸಲು ವಿಶ್ವ ಸಸ್ಯಾಹಾರಿ ದಿನವನ್ನು ನವೆಂಬರ್ 1ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ಸಸ್ಯಾಹಾರಿ ತಿಂಗಳ ಆರಂಭವನ್ನೂ ಸೂಚಿಸುತ್ತದೆ. ನವೆಂಬರ್ ತಿಂಗಳನ್ನು ಸಸ್ಯಾಹಾರಿ ತಿಂಗಳು ಎಂದು ಆಚರಿಸಲಾಗುತ್ತದೆ.
ಸಸ್ಯಾಹಾರಿ ಆಹಾರವು ಮಾನವನ ಆರೋಗ್ಯಕ್ಕೆ ಅನೇಕ ಪ್ರಯೋಜನವನ್ನು ನೀಡುತ್ತದೆ. ಪ್ರಾಣಿಗಳ ಯೋಗಕ್ಷೇಮವನ್ನು ರಕ್ಷಿಸುತ್ತದೆ ಮತ್ತು ಪರಿಸರವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಇತಿಹಾಸ ಮತ್ತು ಮಹತ್ವ:
ಡೊನಾಲ್ಡ್ ವ್ಯಾಟ್ಸನ್ ಎಂಬವವರು 1 ನವೆಂಬರ್ 1944ರಂದು 5 ಜನರ ಸಭೆಯನ್ನು ಕರೆದು ಡೈರಿಯೇತರ ಸಸ್ಯಾಹಾರಿ ಆಹಾರ ಪದ್ಧತಿಗಳ ಕುರಿತು ಚರ್ಚಿಸಿದರು.
ಸಸ್ಯಾಹಾರಿಗಳ ಜೀವನಶೈಲಿ ಮತ್ತು ಅವುಗಳ ಪ್ರಾಮುಖ್ಯತೆಯನ್ನು ಕೇಂದ್ರೀಕರಿಸಲು ಮತ್ತು ಉತ್ತೇಜಿಸಲು ಅವರು ಸಸ್ಯಾಹಾರಿ ಜೀವನಶೈಲಿ (vegan lifestyle) ಎಂದು ಕರೆಯಲ್ಪಡುವ ಹೊಸ ಆಂದೋಲನವನ್ನು ಸ್ಥಾಪಿಸಿದರು.
ಬಳಿಕ ಅವರು ತಮ್ಮ ಸಸ್ಯಾಹಾರಿ ಆಹಾರದ ವ್ಯಾಖ್ಯಾನವನ್ನು ಸ್ಪಷ್ಟಪಡಿಸಿದರು. 1979ರಿಂದ ವಿಶ್ವ ಸಸ್ಯಾಹಾರಿ ದಿನವನ್ನು ಆಚರಿಸಲಾಗುತ್ತಿದೆ.
ಸಸ್ಯಾಹಾರಿಯಾಗುವುದರಿಂದ ಆರೋಗ್ಯಕ್ಕೆ ಪ್ರಯೋಜನಗಳು:
- ಸಸ್ಯಾಹಾರಿ ಆಹಾರಗಳು ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಿಂದ ಸಮೃದ್ಧವಾಗಿವೆ
- ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಸಸ್ಯಾಹಾರಿ ಆಹಾರವು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುತ್ತದೆ.
- ಆರೋಗ್ಯಕರ ದೇಹದ ತೂಕದ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡುತ್ತದೆ.
- ಇದು ಟೈಪ್ 2 ಡಯಾಬಿಟಿಸ್ ತಡೆಗಟ್ಟಲು ಸಹಾಯ ಮಾಡುತ್ತದೆ.
- ಸಸ್ಯಾಹಾರ ತಿನ್ನುವುದರಿಂದ ಸಂಧಿವಾತದ ನೋವು ಕಡಿಮೆಯಾಗುತ್ತದೆ.
- ಸಸ್ಯ ಆಧಾರಿತ ಆಹಾರವು ಸಂಪೂರ್ಣ ಪ್ರೋಟೀನನ್ನು ಸುಲಭವಾಗಿ ಒದಗಿಸುತ್ತದೆ.
- ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
- ಸರಾಸರಿ 16% ವೇಗವಾಗಿ ಕ್ಯಾಲೊರಿಗಳನ್ನು ಸುಡುತ್ತದೆ.
ಮನುಷ್ಯರು ಮತ್ತು ಪ್ರಾಣಿಗಳಿಗೆ ಸಸ್ಯಾಹಾರದಿಂದ ಆಗುವ ಪ್ರಯೋಜನಗಳು:
ಪ್ರತಿ ಸಸ್ಯಾಹಾರಿಗಳು ವರ್ಷಕ್ಕೆ ಸರಾಸರಿ 30 ಪ್ರಾಣಿಗಳನ್ನು ಉಳಿಸುತ್ತಾರೆ. ಆಹಾರ ಉದ್ಯಮದಲ್ಲಿ ಪ್ರಾಣಿಗಳ ಹತ್ಯೆಯನ್ನು ಸಸ್ಯಾಹಾರಿಗಳು ಕಡಿತಗೊಳಿಸುತ್ತಾರೆ. ಸಸ್ಯಾಹಾರಿರಿಯಾಗುವ ಮೂಲಕ ನೀವು ಪ್ರಾಣಿಗಳನ್ನು ರಕ್ಷಿಸಬಹುದು.
ಸಸ್ಯಾಹಾರಿಗಳು ಪರಿಸರಕ್ಕೆ ಅದ್ಭುತ ಕೊಡುಗೆ ನೀಡುತ್ತಾರೆ. ಅರಣ್ಯನಾಶ, ಹಸಿರುಮನೆ ಅನಿಲ ಹೊರಸೂಸುವಿಕೆ, ಮಾಲಿನ್ಯ ಮತ್ತು ನೀರಿನ ಕೊರತೆಯಾಗದಂತೆ ತಡೆಯುತ್ತಾರೆ.
ಸಸ್ಯ ಆಧಾರಿತ ಆಹಾರವನ್ನು ಸೇವಿಸುವ ಮೂಲಕ ನೀವು ಹೆಚ್ಚು ಸುಸ್ಥಿರ ಜೀವನವನ್ನು ನಡೆಸಬಹುದಾಗಿದೆ.
ಜಾನುವಾರುಗಳು ಮತ್ತು ಅವುಗಳ ಉಪಉತ್ಪನ್ನಗಳು ವಿಶ್ವಾದ್ಯಂತದ ಎಲ್ಲಾ ಹಸಿರುಮನೆ ಅನಿಲ ಹೊರಸೂಸುವಿಕೆಗಳಲ್ಲಿ 51% ನಷ್ಟಿದೆ. 1 ಪೌಂಡ್ ಗೋಮಾಂಸ ಉತ್ಪಾದಿಸಲು 2,500 ಗ್ಯಾಲನ್ ನೀರು ಅಗತ್ಯವಿದೆ. ಅಮೆಜಾನ್ ಮಳೆಕಾಡು ನಾಶಕ್ಕೆ 91% ವರೆಗೆ ಮಾಂಸಕ್ಕಾಗಿ ಪ್ರಾಣಿಗಳ ಸಾಕಣಿಕೆಯೇ ಕಾರಣ.
ಸಸ್ಯಾಹಾರಿ ಭಾರತೀಯ ಸೆಲೆಬ್ರಿಟಿಗಳು:
- ವಿರಾಟ್ ಕೊಹ್ಲಿ - ಭಾರತೀಯ ಕ್ರಿಕೆಟಿಗ
- ಅನುಷ್ಕಾ ಶರ್ಮಾ - ಬಾಲಿವುಡ್ ನಟಿ
- ಆಲಿಯಾ ಭಟ್ - ಬಾಲಿವುಡ್ ನಟಿ
- ಜಾಕ್ವೆಲಿನ್ ಫರ್ನಾಂಡೀಸ್ - ಬಾಲಿವುಡ್ ನಟಿ
- ಕಂಗನಾ ರಣಾವತ್ - ಬಾಲಿವುಡ್ ನಟಿ
- ಸೋನಮ್ ಕಪೂರ್ - ಬಾಲಿವುಡ್ ನಟಿ
- ಕಿರಣ್ ರಾವ್ - ಭಾರತೀಯ ಚಲನಚಿತ್ರ ನಿರ್ಮಾಪಕಿ
- ಅಮೀರ್ ಖಾನ್ - ಬಾಲಿವುಡ್ ನಟ
- ಸೋನಾಕ್ಷಿ ಸಿನ್ಹಾ - ಬಾಲಿವುಡ್ ನಟಿ
- ನೇಹಾ ಧೂಪಿಯಾ - ಬಾಲಿವುಡ್ ನಟಿ
ಸಸ್ಯಾಹಾರಿ ಗ್ಲೋಬಲ್ ಸೆಲೆಬ್ರಿಟಿಗಳು:
- ಬೆಯೋನ್ಸ್ - ಅಮೆರಿಕನ್ ಗಾಯಕ
- ನಟಾಲಿಯಾ ಪೋರ್ಟ್ಮ್ಯಾನ್ - ನಟಿ
- ಪೀಟರ್ ಡಿಂಕ್ಲೇಜ್ - ಅಮೆರಿಕನ್ ನಟ
- ಎಲ್ಲೆನ್ ಡಿಜೆನೆರೆಸ್ - ಅಮೆರಿಕನ್ ಹಾಸ್ಯನಟ
- ಅಲ್ ಗೋರ್ - ಅಮೆರಿಕದ ಮಾಜಿ ಉಪಾಧ್ಯಕ್ಷ
- ಸಿಯಾ - ಆಸ್ಟ್ರೇಲಿಯಾದ ಗಾಯಕ-ಗೀತರಚನೆಕಾರ
- ಅರಿಯಾನಾ ಗ್ರಾಂಡೆ - ಅಮೆರಿಕನ್ ಗಾಯಕ
- ಪಮೇಲಾ ಆಂಡರ್ಸನ್ - ಅಮೆರಿಕನ್-ಕೆನಡಿಯನ್ ನಟಿ
- ಬಿಲ್ ಕ್ಲಿಂಟನ್ - ಅಮೆರಿಕದ ಮಾಜಿ ಅಧ್ಯಕ್ಷ