ಹೈದರಾಬಾದ್: ಲೂಪಸ್ ದೀರ್ಘಕಾಲದ ಸ್ವಯಂ ನಿರೋಧಕ ಕಾಯಿಲೆಯಾಗಿದೆ. ರೋಗ ಪೀಡಿತ ವ್ಯಕ್ತಿಗಳ ಕುರಿತು ಆಳವಾದ ತಿಳಿವಳಿಕೆ ಮತ್ತು ಬೆಂಬಲದ ಅಗತ್ಯವಿರುತ್ತದೆ. ಮಾರಣಾಂತಿಕ ಕಾಯಿಲೆಯಲ್ಲಿ ಸಾಮಾನ್ಯವಾಗಿ ಸೋಂಕಿನ ವಿರುದ್ಧ ಹೋರಾಡುವ ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಆರೋಗ್ಯಕರ ಅಂಗಾಂಶಗಳ ಹಾಗೂ ಅಂಗಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ. ಈ ಸ್ಥಿತಿಯು ಚರ್ಮ, ಮೂತ್ರಪಿಂಡಗಳು, ರಕ್ತ ಕಣಗಳು, ಮೆದುಳು, ಹೃದಯ, ಶ್ವಾಸಕೋಶಗಳು ಮತ್ತು ಕೀಲುಗಳು ಸೇರಿದಂತೆ ದೇಹದ ವಿವಿಧ ಅಂಗಗಳಿಗೆ ಹಾನಿ ಉಂಟು ಮಾಡುತ್ತದೆ.
ಮೇ 10ಕ್ಕೆ ಪ್ರಪಂಚದಾದ್ಯಂತ ವಿಶ್ವ ಲೂಪಸ್ ದಿನವನ್ನು ಆಚರಿಸಲಾಗುತ್ತದೆ. ಏಕೆಂದರೆ ಲೂಪಸ್ ಜನಾಂಗಗಳು, ವಯಸ್ಸು ಮತ್ತು ಲಿಂಗಗಳ ನಡುವೆ ತಾರತಮ್ಯವಿಲ್ಲದೇ ಎಲ್ಲರ ಮೇಲೆ ಪರಿಣಾಮ ಬೀರುತ್ತದೆ. ಈ ಸ್ಥಿತಿಗೆ ಯಾವುದೇ ಗಡಿಗಳಿಲ್ಲದಿದ್ದರೂ ಸಹ, ಅದರ ಬಗ್ಗೆ ಮಾಹಿತಿ ಪಡೆಯುವುದು ಅದರ ಪರಿಣಾಮ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ಬಾಧಿತರಾಗದ ಜನರು ಈ ಅನಿರೀಕ್ಷಿತ ರೋಗದ ವಿರುದ್ಧ ಹೋರಾಡಲು ಏನು ಬೇಕಾದರೂ ಮಾಡುವ ಜವಾಬ್ದಾರಿ ಹೊಂದಿದ್ದಾರೆ. ಇತರ ಸಾಮಾನ್ಯ ಕಾಯಿಲೆಗಳನ್ನು ಅನುಕರಿಸುವ ರೋಗ ಲಕ್ಷಣಗಳಿಂದ ಲೂಪಸ್ ರೋಗನಿರ್ಣಯವು ಸಾಮಾನ್ಯವಾಗಿ ಕಷ್ಟಕರವಾಗಿರುತ್ತದೆ. ಆದರೆ, ಈ ರೋಗದ ಪ್ರಮುಖ ಲಕ್ಷಣವೆಂದರೆ, ಚಿಟ್ಟೆಯ ರೆಕ್ಕೆಗಳನ್ನು ಹೋಲುವ ಮುಖದ ದದ್ದು ಕಂಡುಬರುತ್ತದೆ.
ಲೂಪಸ್ ಕಾಯಿಲೆಯ ಲಕ್ಷಣಗಳು:
- ಉಸಿರಾಟದ ತೊಂದರೆ.
- ನಿರಂತರ ಎದೆ ನೋವು.
- ಕೀಲುಗಳಲ್ಲಿ ಊತ, ಬಿಗಿತ ಮತ್ತು ನೋವು.
- ಆಯಾಸ ಹಾಗೂ ಜ್ವರ.
- ಶೀತಕ್ಕೆ ಒಡ್ಡಿಕೊಳ್ಳುವುದರಿಂದ ನಿಮ್ಮ ಬೆರಳುಗಳು ಮತ್ತು ಕಾಲ್ಬೆರಳುಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ.
- ತಲೆನೋವು, ಗೊಂದಲ ಮತ್ತು ಕೆಲವೊಮ್ಮೆ ಮೆಮೊರಿ ನಷ್ಟ.
ವರ್ಲ್ಡ್ ಲೂಪಸ್ ಫೆಡರೇಶನ್ ನಡೆಸಿದ ಇತ್ತೀಚಿನ ಗ್ಲೋಬಲ್ ಸಮೀಕ್ಷೆಯ ಪ್ರಕಾರ, ಲೂಪಸ್ ಕಾಯಿಲೆ ಹೊಂದಿರುವ ಜನರಲ್ಲಿ ರೋಗ ಲಕ್ಷಣಗಳು 87 ಪ್ರತಿಶತದಷ್ಟು ಕನಿಷ್ಠ ಒಂದೇ ಪ್ರಮುಖ ಅಂಗವನ್ನು ಹೊಂದಿದ್ದಾರೆ. 100ಕ್ಕೂ ಹೆಚ್ಚು ದೇಶಗಳಿಂದ ಲೂಪಸ್ ಹೊಂದಿರುವ 6,700ಕ್ಕೂ ಹೆಚ್ಚು ಜನರಲ್ಲಿ ಸಮೀಕ್ಷೆಯನ್ನು ನಡೆಸಲಾಯಿತು.
ಸುಮಾರು ಮುಕ್ಕಾಲು ಭಾಗದಷ್ಟು ರೋಗಿಗಳಿಗೆ ಬಹು ಅಂಗಗಳ ಮೇಲೆ ಪರಿಣಾಮ ಬೀರಿದೆ. ಸರಾಸರಿ ಮೂರು ಅಂಗಗಳು ಪ್ರಭಾವಿತವಾಗಿವೆ ಎಂದು ವರದಿ ತಿಳಿದಿದೆ. ಲೂಪಸ್‌ನಿಂದ ಚರ್ಮ ಮತ್ತು ಮೂಳೆಗಳು ಸಾಮಾನ್ಯವಾಗಿ ಬಾಧಿತ ಅಂಗಗಳಾಗಿವೆ. ಮೂತ್ರಪಿಂಡಗಳು, ಜೀರ್ಣಾಂಗ ವ್ಯವಸ್ಥೆ, ಕಣ್ಣುಗಳು ಮತ್ತು ಕೇಂದ್ರ ನರಮಂಡಲವು ಇತರ ಪ್ರಮುಖ ಅಂಗಗಳು ಮತ್ತು ಅಂಗ ವ್ಯವಸ್ಥೆಗಳಲ್ಲಿ ಪರಿಣಾಮ ಬೀರಲಿದೆ. ಈ ಸ್ಥಿತಿಯಿಂದ ಬಳಲುತ್ತಿರುವ ಅರ್ಧಕ್ಕಿಂತ ಹೆಚ್ಚು ಜನರು ಅಂಗ ಹಾನಿಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನೇಕರು ಬದಲಾಯಿಸಲಾಗದ ಅಂಗ ಹಾನಿಯನ್ನು ಹೊಂದಿದ್ದಾರೆ ಎಂದು ವರದಿ ತಿಳಿಸುತ್ತದೆ. ಲೂಪಸ್ ದೈಹಿಕ ಲಕ್ಷಣಗಳನ್ನು ಮೀರಿ ಜನರ ದೇಹದ ಮೇಲೆ ಪರಿಣಾಮ ಬೀರುತ್ತದೆ. ಲೂಪಸ್- ಸಂಬಂಧಿತ ಅಂಗ ಹಾನಿಯ ಮೂಲಕ ಪ್ರತಿಕ್ರಿಯಿಸಿದವರು, ಅವರ ಜೀವನದ ಗುಣಮಟ್ಟದಲ್ಲಿ ಕನಿಷ್ಠ ಒಂದು ಮಹತ್ವದ ಸವಾಲುಗಳು ಈ ವರದಿಯಿಂದ ಬಹಿರಂಗವಾಗಿದೆ.
- ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯ ಕೊರತೆ.
- ಮಾನಸಿಕ ಆರೋಗ್ಯ ಸಮಸ್ಯೆಗಳು.
- ಕೆಲಸ ಮಾಡಲು ಅಸಮರ್ಥತೆಯಿಂದಾಗಿ ನಿರುದ್ಯೋಗ ಉಂಟಾಗುತ್ತದೆ.
- ಹಣಕಾಸಿನ ಅಸ್ಥಿರತೆಗಳು.
- ಚಲನಶೀಲತೆ ಅಥವಾ ಸಾರಿಗೆಯಲ್ಲಿನ ಸವಾಲುಗಳು.
ಲೂಪಸ್‌ನಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಅವರು ಅನಾರೋಗ್ಯ ತೋರುತ್ತಿಲ್ಲ ಎಂದು ಹೇಳಲಾಗುತ್ತದೆ. ಆದರೆ, ವಾಸ್ತವದಲ್ಲಿ ಅವರು ಮಾರಣಾಂತಿಕ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ. ಅದು ಅವರ ದೇಹದಲ್ಲಿನ ಯಾವುದೇ ಅಂಗಗಳ ಮೇಲೆ ದಾಳಿ ಮಾಡುತ್ತದೆ. ಲೆಕ್ಕವಿಲ್ಲದಷ್ಟು ರೋಗಲಕ್ಷಣಗಳು ಮತ್ತು ತೀವ್ರ ಆರೋಗ್ಯ ತೊಡಕುಗಳನ್ನು ಉಂಟುಮಾಡುತ್ತದೆ. ವಿಶ್ವ ಲೂಪಸ್ ದಿನವು, ಲೂಪಸ್ ಹೊಂದಿರುವ ಜನರು ಪ್ರತಿದಿನ ಎದುರಿಸುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. ಪ್ರಪಂಚದಾದ್ಯಂತ ಹೆಚ್ಚಿನ ಬೆಂಬಲದ ಅಗತ್ಯವನ್ನು ಗಮನಕ್ಕೆ ತರುತ್ತದೆ. ನಿರ್ಣಾಯಕ ಸಂಶೋಧನೆ, ಶಿಕ್ಷಣ ಮತ್ತು ಬೆಂಬಲ ಸೇವೆಗಳಿಗೆ ಧನಸಹಾಯ ಮಾಡಲು ಜನರು ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳಿಂದ ಬೆಂಬಲವನ್ನು ಸಂಗ್ರಹಿಸಲು ಈ ದಿನಾಚರಣೆಯು ಸಹಾಯ ಮಾಡುತ್ತದೆ. ಇದು ಲೂಪಸ್‌ನಿಂದ ಪೀಡಿತ ಜನರ ಜೀವನದ ಗುಣಮಟ್ಟ ಸುಧಾರಿಸಲು ಸಹಾಯವಾಗುತ್ತದೆ.
ಇದನ್ನೂ ಓದಿ: ಸಂಬಂಧಗಳಲ್ಲಿ ಈ ರೀತಿ ಉಸಿರುಗಟ್ಟುವ ವಾತಾವರಣ ಕಂಡು ಬಂದರೆ, ಮೊದಲು ಅದರಿಂದ ಹೊರ ಬನ್ನಿ