ETV Bharat / sukhibhava

ವಿಶ್ವ ಮೂತ್ರಪಿಂಡ ದಿನ: ಕಿಡ್ನಿಯ ಆರೋಗ್ಯ ಹೇಗೆ ಕಾಪಾಡಿಕೊಳ್ಳಬಹುದು?

ಮೂತ್ರಪಿಂಡಗಳು ಅತ್ಯಗತ್ಯ. ಏಕೆಂದರೆ ಅವು ರಕ್ತದಿಂದ ವಿಷ ಮತ್ತು ಹೆಚ್ಚುವರಿ ದ್ರವಗಳನ್ನು ತೆಗೆದುಹಾಕಲು ಸಹಾಯ ಮಾಡುವುದರ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತವೆ ಮತ್ತು ಕೆಂಪು ರಕ್ತ ಕಣಗಳನ್ನು ಉತ್ಪಾದಿಸುತ್ತದೆ. ಹೀಗಾಗಿ ಮೂತ್ರಪಿಂಡಗಳ ಆರೈಕೆ ಅತ್ಯಗತ್ಯ.

kidney
kidney
author img

By

Published : Mar 11, 2021, 4:07 PM IST

ಹೈದರಾಬಾದ್: ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುವುದರಿಂದ ಹಿಡಿದು, ದೇಹದಲ್ಲಿನ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ನಿಯಂತ್ರಿಸುವವರೆಗೆ, ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವಹಿಸುತ್ತವೆ.

ಆದರೆ, ನಮ್ಮ ಕರುಳಿನ ಆರೋಗ್ಯವನ್ನು ನಾವು ಎಷ್ಟು ನೋಡಿಕೊಳ್ಳುತ್ತೇವೆಯೋ ಹಾಗೆಯೇ ನಮ್ಮ ಮೂತ್ರಪಿಂಡಗಳ ಆರೈಕೆ ಮಾಡುತ್ತೇವೆಯೇ? ಇಂದು ವಿಶ್ವ ಮೂತ್ರಪಿಂಡದ ದಿನದಂದು, ಮೂತ್ರಪಿಂಡಗಳ ಪ್ರಾಮುಖ್ಯತೆ ಮತ್ತು ಅವುಗಳನ್ನು ಹೇಗೆ ನೋಡಿಕೊಳ್ಳಬಹುದು ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

ನಿಮ್ಮ ಮೂತ್ರಪಿಂಡದ ಆರೋಗ್ಯವನ್ನು ಪರೀಕ್ಷಿಸಿ:

ಪ್ರತಿ ವರ್ಷ ಮಾರ್ಚ್ ಎರಡನೇ ಗುರುವಾರ, ನಮ್ಮ ದೇಹದಲ್ಲಿನ ಮೂತ್ರಪಿಂಡಗಳ ಪ್ರಾಮುಖ್ಯತೆ, ಅವುಗಳಿಗೆ ಸಂಬಂಧಿತ ಕಾಯಿಲೆಗಳು ಮತ್ತು ಅದನ್ನು ಹೇಗೆ ನೋಡಿಕೊಳ್ಳಬಹುದು ಎಂಬ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಮೂತ್ರಪಿಂಡ ದಿನವನ್ನು ಆಚರಿಸಲಾಗುತ್ತದೆ.

ಈ ವರ್ಷ, ಮಾರ್ಚ್ 11ರಂದು ಈ ದಿನವನ್ನು ಆಚರಿಸಲಾಗುತ್ತಿದೆ. ಈ ದಿನವನ್ನು ಮೊದಲ ಬಾರಿಗೆ 2006ರಲ್ಲಿ ಇಂಟರನ್ಯಾಷನಲ್ ಸೊಸೈಟಿ ಆಫ್ ನೆಫ್ರಾಲಜಿ (ಐಎಸ್ಎನ್) ಮತ್ತು ಇಂಟರನ್ಯಾಷನಲ್ ಫೆಡರೇಶನ್ ಆಫ್ ಕಿಡ್ನಿ ಫೌಂಡೇಶನ್ಸ್ (ಐಎಫ್‌ಕೆಎಫ್) ವತಿಯಿಂದ ಜಂಟಿಯಾಗಿ ಆಚರಿಸಲಾಯಿತು.

2017ರಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ (ಸಿಕೆಡಿ) ಕುರಿತು ಲ್ಯಾನ್ಸೆಟ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಜಾಗತಿಕವಾಗಿ, 2017ರಲ್ಲಿ 697.5 ಮಿಲಿಯನ್ ಸಿಕೆಡಿ ಪ್ರಕರಣಗಳು ಕಂಡುಬಂದಿದ್ದು, 1.2 ಮಿಲಿಯನ್ ಜನರು ಅದರಿಂದ ಸಾವನ್ನಪ್ಪಿದ್ದಾರೆ. ಸಿಕೆಡಿ ರೋಗಿಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಚೀನಾ ಮತ್ತು ಭಾರತ ದೇಶಗಳಲ್ಲಿ ವಾಸಿಸುತ್ತಿದ್ದರು.

ದಿನದ ಉದ್ದೇಶಗಳು:

ವಿಶ್ವ ಮೂತ್ರಪಿಂಡ ದಿನದ ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ದಿನದ ಮುಖ್ಯ ಉದ್ದೇಶಗಳೆಂದರೆ,

  • ಮೂತ್ರಪಿಂಡದ ಬಗ್ಗೆ ಜಾಗೃತಿ ಮೂಡಿಸಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡಗಳು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ (ಸಿಕೆಡಿ) ಪ್ರಮುಖ ಅಪಾಯಕಾರಿ ಅಂಶಗಳಾಗಿವೆ ಎಂಬುದನ್ನು ತಿಳಿಸುವುದು.
  • ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ಎಲ್ಲಾ ರೋಗಿಗಳಿಗೆ ಸಿಕೆಡಿ ಪರೀಕ್ಷೆಗೆ ಒಳಗಾಗಲು ಪ್ರೋತ್ಸಾಹಿಸುವುದು.
  • ಸಿಕೆಡಿಯನ್ನು ತಡೆಗಟ್ಟುವ ವಿಧಾನಗಳನ್ನು ಪ್ರೋತ್ಸಾಹಿಸುವುದು.
  • ಎಲ್ಲಾ ವೈದ್ಯಕೀಯ ವೃತ್ತಿಪರರಿಗೆ ಸಿಕೆಡಿಯ ಅಪಾಯವನ್ನು ಕಂಡುಹಿಡಿಯುವಲ್ಲಿ ಮತ್ತು ಕಡಿಮೆ ಮಾಡುವಲ್ಲಿ ಅವರ ಪ್ರಮುಖ ಪಾತ್ರದ ಬಗ್ಗೆ ತಿಳಿಸುವುದು.
  • ಸಿಕೆಡಿ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಸ್ಥಳೀಯ ಮತ್ತು ರಾಷ್ಟ್ರೀಯ ಆರೋಗ್ಯ ಅಧಿಕಾರಿಗಳ ಪ್ರಮುಖ ಪಾತ್ರವನ್ನು ಒತ್ತಿ ಹೇಳುವುದು.
  • ಮೂತ್ರಪಿಂಡ ವೈಫಲ್ಯಕ್ಕೆ ಉತ್ತಮ ಆಯ್ಕೆಯಾಗಿ ಕಸಿ ಮಾಡುವಿಕೆಯನ್ನು ಪ್ರೋತ್ಸಾಹಿಸಿ, ಮತ್ತು ಜೀವ ಉಳಿಸುವ ಉಪಕ್ರಮವಾಗಿ ಅಂಗಾಂಗ ದಾನ ಮಾಡುವ ಕ್ರಿಯೆಯನ್ನು ಪ್ರೋತ್ಸಾಹಿಸುವುದು.

ಮೂತ್ರಪಿಂಡಗಳ ಪ್ರಮುಖ ಕಾರ್ಯಗಳು:

ಮೂತ್ರಪಿಂಡಗಳು ಅತ್ಯಗತ್ಯ, ಏಕೆಂದರೆ ಅವು ರಕ್ತದಿಂದ ವಿಷ ಮತ್ತು ಹೆಚ್ಚುವರಿ ದ್ರವಗಳನ್ನು ತೆಗೆದುಹಾಕಲು ಸಹಾಯ ಮಾಡುವುದರ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಕೆಂಪು ರಕ್ತ ಕಣಗಳನ್ನು ಉತ್ಪಾದಿಸುತ್ತವೆ.

ನಮ್ಮ ಮೂಳೆಯ ಆರೋಗ್ಯವೂ ನಮ್ಮ ಮೂತ್ರಪಿಂಡಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ, ತ್ಯಾಜ್ಯವನ್ನು ದೇಹದಿಂದ ಹೊರಹಾಕುವ ಮೂಲಕ, ನಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲಾಗುತ್ತದೆ ಮತ್ತು ಉತ್ಪತ್ತಿಯಾಗುವ ಹಾರ್ಮೋನುಗಳು ನಮ್ಮ ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತವೆ.

ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ):

ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ) ಎಂದರೆ ಮೂತ್ರಪಿಂಡಗಳು ಹಾನಿಗೊಳಗಾದ ಸ್ಥಿತಿ. ಇದರಲ್ಲಿ ರಕ್ತವನ್ನು ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ರಕ್ತದಿಂದ ಹೆಚ್ಚುವರಿ ದ್ರವ ಮತ್ತು ತ್ಯಾಜ್ಯವು ದೇಹದಲ್ಲಿ ಉಳಿಯುತ್ತದೆ ಮತ್ತು ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಮುಂತಾದ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಯಿದೆ.

ಸಿಕೆಡಿಯ ಇತರ ಕೆಲವು ಆರೋಗ್ಯ ಪರಿಣಾಮಗಳು:

  • ರಕ್ತಹೀನತೆ ಅಥವಾ ಕಡಿಮೆ ಸಂಖ್ಯೆಯ ಕೆಂಪು ರಕ್ತ ಕಣಗಳು
  • ಸೋಂಕುಗಳ ಹೆಚ್ಚಳ
  • ಕಡಿಮೆ ಕ್ಯಾಲ್ಸಿಯಂ ಮಟ್ಟ, ಹೆಚ್ಚಿನ ಪೊಟ್ಯಾಸಿಯಮ್ ಮಟ್ಟ ಮತ್ತು ರಕ್ತದಲ್ಲಿ ಹೆಚ್ಚಿನ ರಂಜಕದ ಮಟ್ಟ
  • ಹಸಿವು ಕಡಿಮೆಯಾಗುವುದು ಅಥವಾ ಕಡಿಮೆ ತಿನ್ನುವುದು
  • ಖಿನ್ನತೆ

ಮೂತ್ರಪಿಂಡಗಳು ಕೆಲಸ ಮಾಡುವುದನ್ನು ನಿಲ್ಲಿಸಿದಾಗ, ಡಯಾಲಿಸಿಸ್ ಅಥವಾ ಕಸಿ ಅಗತ್ಯವಿರಬಹುದು.

ಸಿಕೆಡಿಗೆ ಕಾರಣವಾಗುವ 5 ಪ್ರಮುಖ ಅಪಾಯಕಾರಿ ಅಂಶಗಳು:

  • ಮಧುಮೇಹ
  • ತೀವ್ರ ರಕ್ತದೊತ್ತಡ
  • ಹೃದಯರೋಗ
  • ಆನುವಂಶಿಕತೆ
  • ಬೊಜ್ಜು

ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡುವುದು:

"ಹೆಚ್ಚು ಔಷಧಿಗಳನ್ನು ಮತ್ತು ನೋವು ನಿವಾರಕಗಳನ್ನು ಸೇವಿಸುವುದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳಿಗೆ ಒಂದು ಪ್ರಮುಖ ಕಾರಣವಾಗಿದೆ. ಆದ್ದರಿಂದ, ಸಾಧ್ಯವಾದಾಗಲೆಲ್ಲಾ, ನೈಸರ್ಗಿಕ ಚಿಕಿತ್ಸೆ ಪಡೆಯಿರಿ ಮತ್ತು ಸಾಧ್ಯವಾದರೆ, ಆಯುರ್ವೇದ ಪರ್ಯಾಯಗಳನ್ನು ಬಳಸಿ" ಎಂದು ಡಾ. ಎಲ್ ಹೆಚ್ ಹಿರಾನಂದಾನಿ ಆಸ್ಪತ್ರೆಯ ಸಿಇಒ ಸುಜಿತ್ ಚಟರ್ಜಿ ಹೇಳುತ್ತಾರೆ.

ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಅವರು ಸೂಚಿಸುವ ನಿಯಮಗಳು:

  • ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಿ
  • ನೀರು ಕುಡಿಯುತ್ತ ಇರಿ
  • ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ
  • ಅತಿಯಾದ ಮದ್ಯಪಾನವನ್ನು ತಪ್ಪಿಸಿ ಮತ್ತು ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಲು ಪ್ರಯತ್ನಿಸಿ
  • ರಕ್ತದೊತ್ತಡವನ್ನು ಪರೀಕ್ಷಿಸಿ
  • ಆರೋಗ್ಯಕರ ಆಹಾರವನ್ನು ಸೇವಿಸಿ
  • ದಿನವೂ ವ್ಯಾಯಾಮ ಮಾಡಿ
  • ನಿಯಮಿತವಾಗಿ ದೇಹದ ತಪಾಸಣೆ ಮಾಡಿಸಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.