ETV Bharat / sukhibhava

ಪುರುಷ-ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕಡಿಮೆ ಆಗಲು ವಯಸ್ಸು ಕಾರಣವೇ? ತಜ್ಞರು ಹೇಳುವುದೇನು?

author img

By

Published : Oct 24, 2021, 12:26 PM IST

ಮಹಿಳೆಯರಲ್ಲಿ 20ರಿಂದ 30ರ ನಡುವಿನ ವಯಸ್ಸು ಸಂತಾನೋತ್ಪತ್ತಿಗೆ ಸೂಕ್ತವಾಗಿದೆ. ನಮ್ಮ ಸಮಾಜದಲ್ಲೂ ಕೂಡ ಈ ವಯಸ್ಸನ್ನು ಮದುವೆಗೆ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ವಯಸ್ಸಿನಲ್ಲಿ ಮಹಿಳೆಯರಲ್ಲಿ ಲೈಂಗಿಕ ಬಯಕೆ ಉತ್ತುಂಗದಲ್ಲಿರುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ, ಇದಕ್ಕೆ ವ್ಯತಿರಿಕ್ತ ಎಂಬಂತೆ 30ರಿಂದ 40ರ ವಯಸ್ಸಿನ ಮಹಿಳೆಯರಲ್ಲಿ ಲೈಂಗಿಕ ಬಯಕೆಗಳು ಹೆಚ್ಚಾಗಿರುತ್ತವೆ.

Why Do People Face Loss Of Libido As They Age?
ಪುರುಷ-ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಆಗಲು ವಯಸ್ಸು ಕಾರಣವಲ್ಲ... ಮತ್ತೇನು?

ಸಾಮಾನ್ಯವಾಗಿ ವಯಸ್ಸಾದಂತೆ ದೇಹದಲ್ಲಿನ ಬದಲಾವಣೆಗಳಿಂದಾಗಿ ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕತೆಯ ಬಯಕೆ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಇದು ಸಂಪೂರ್ಣ ನಿಜವಲ್ಲ. ವೈದ್ಯರು ಮತ್ತು ತಜ್ಞರು ಹೇಳುವಂತೆ, ದೈಹಿಕ ಬದಲಾವಣೆಗಳ ಜೊತೆಗೆ ಮಾನಸಿಕ ಸಮಸ್ಯೆಗಳು, ಜವಾಬ್ದಾರಿಗಳು ಮತ್ತು ನಡವಳಿಕೆಯ ಸಮಸ್ಯೆಗಳು ಕೂಡ ಕಾಮಾಸಕ್ತಿಯ ನಷ್ಟಕ್ಕೆ ಕಾರಣವಾಗುತ್ತವೆ.

ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಲು ಲೈಂಗಿಕತೆಯು ಜೀವನದ ಒಂದು ಪ್ರಮುಖ ಭಾಗವಾಗಿದೆ. ಭಾರತದಲ್ಲಿ ಲೈಂಗಿಕತೆಯ ಬಗ್ಗೆ ಇಂದಿಗೂ ಕೂಡ ಜನರು ಮುಕ್ತವಾಗಿ ಮಾತನಾಡುವುದಿಲ್ಲ. ಇದೂ ಕೂಡ ವಯಸ್ಸಾದಂತೆ ಜನರ ಲೈಂಗಿಕ ಬಯಕೆಗಳ ಮೇಲೆ ನೇರ ಅಥವಾ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಅಲ್ಲದೆ, ಈ ಬಗ್ಗೆ ಚರ್ಚಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಜನರು ಹಿಂಜರಿಯುತ್ತಾರೆ.

ವಾಸ್ತವವಾಗಿ, ವಯಸ್ಸಾದಂತೆ ಮಹಿಳೆಯರು ಮತ್ತು ಪುರುಷರ ದೇಹದ ಜೊತೆಗೆ ಅವರ ಸಾಮಾಜಿಕ ಮತ್ತು ಕೌಟುಂಬಿಕ ಜೀವನವೂ ಬದಲಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರ ಲೈಂಗಿಕ ಜೀವನದ ಮೇಲೆ ವಿವಿಧ ಪರಿಣಾಮ ಉಂಟಾಗಲು ಹಲವು ಕಾರಣಗಳಿವೆ.

ವಯಸ್ಸಾಗುವುದು ಪುರುಷರ ಲೈಂಗಿಕ ಬಯಕೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ವೈದ್ಯರು ಮತ್ತು ತಜ್ಞರ ಪ್ರಕಾರ, 20ರ ವಯಸ್ಸಿನ ಪುರುಷರಲ್ಲಿ ಟೆಸ್ಟೋಸ್ಟೆರನ್ ಮಟ್ಟವು ಹೆಚ್ಚಿರುತ್ತದೆ. ಪುರುಷರಲ್ಲಿ ಕಾಮಾಸಕ್ತಿಯು ಹೆಚ್ಚಿರಲು ಈ ಟೆಸ್ಟೋಸ್ಟೆರಾನ್ ಹಾರ್ಮೋನ್​ ಕಾರಣವಾಗಿದೆ. ಅಲ್ಲದೆ, ಈ ವಯಸ್ಸಿನಲ್ಲಿ ಪುರುಷರು ಹೆಚ್ಚು ಸಕ್ರಿಯರಾಗಿರುತ್ತಾರೆ ಎನ್ನಲಾಗುತ್ತದೆ. ಆದರೆ ಅದು ನಿಜವಲ್ಲ. ಸಾಮಾನ್ಯವಾಗಿ ಪುರುಷರು 30ರಿಂದ 40ರ ವಯಸ್ಸಿನಲ್ಲಿ ಲೈಂಗಿಕವಾಗಿ ಹೆಚ್ಚು ಸಕ್ರಿಯರಾಗಿರುತ್ತಾರೆ.

ಎಲ್ಲರೂ ಕಾಮಾಸಕ್ತಿಯ ನಷ್ಟದ ಬಗ್ಗೆ ಮಾತನಾಡುವಾಗ, 35 ವರ್ಷದ ನಂತರ, ಟೆಸ್ಟೋಸ್ಟೆರನ್ ಮಟ್ಟವು ಇಳಿಮುಖದತ್ತ ಸಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ವೃತ್ತಿ ಮತ್ತು ಸಾಮಾಜಿಕ ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿರುವ ವಯಸ್ಸು ಇದಾಗಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಹೆಚ್ಚಿನ ಸಮಯ ಕೆಲಸದಲ್ಲಿ ತೊಡಗಿರುವ ಕಾರಣ ಹಾಗೂ ಉಡುಗೆ, ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆಗಳು ಇತ್ಯಾದಿಗಳಿಂದಾಗಿ ಪುರುಷರಲ್ಲಿ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ. ಆದರೆ ಜನರು ಅಂತಹ ಸ್ಥಿತಿಗೆ ವಯಸ್ಸಾಗುತ್ತಿರುವುದೇ ಕಾರಣ ಎಂದು ತಪ್ಪಾಗಿ ಅಂದುಕೊಳ್ಳುತ್ತಾರೆ.

ಮಹಿಳೆಯರ ಲೈಂಗಿಕ ಬಯಕೆಗಳ ಮೇಲೆ ವಯಸ್ಸಿನ ಪರಿಣಾಮ:

ಮಹಿಳೆಯರಲ್ಲಿ 20ರಿಂದ 30ರ ನಡುವಿನ ವಯಸ್ಸು ಸಂತಾನೋತ್ಪತ್ತಿಗೆ ಸೂಕ್ತ ಸಮಯವಾಗಿದೆ. ನಮ್ಮ ಸಮಾಜದಲ್ಲೂ ಕೂಡ ಈ ವಯಸ್ಸನ್ನು ಮದುವೆಗೆ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ವಯಸ್ಸಿನಲ್ಲಿ ಮಹಿಳೆಯರಲ್ಲಿ ಲೈಂಗಿಕ ಬಯಕೆ ಉತ್ತುಂಗದಲ್ಲಿರುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ, ಇದಕ್ಕೆ ವ್ಯತಿರಿಕ್ತ ಎಂಬಂತೆ 30ರಿಂದ 40ರ ವಯಸ್ಸಿನ ಮಹಿಳೆಯರಲ್ಲಿ ಲೈಂಗಿಕ ಬಯಕೆಗಳು ಹೆಚ್ಚಾಗಿರುತ್ತವೆ.

30ರ ನಂತರ ಮಹಿಳೆಯರಲ್ಲಿ, ಅವರ ಸಂತಾನ ಫಲವತ್ತತೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಮತ್ತು 45ರ ನಂತರ ಅವರು ಋತುಬಂಧದ ಲಕ್ಷಣಗಳನ್ನು ಅನುಭವಿಸುತ್ತಾರೆ. ಆದರೆ ಇವೆರಡಕ್ಕೂ ಕೂಡ ಅವರಲ್ಲಿನ ಲೈಂಗಿಕ ಬಯಕೆಯ ಕೊರತೆಯೇ ಕಾರಣ ಎಂದು ಹೇಳಲಾಗುವುದಿಲ್ಲ. ಋತುಬಂಧದ ಸಮಯದಲ್ಲಿ ದೈಹಿಕ ಬದಲಾವಣೆಗಳಿಂದಾಗಿ ಅವರು ಸ್ವಲ್ಪ ಮಟ್ಟಿಗೆ ಕಡಿಮೆ ಲೈಂಗಿಕತೆ ಅನುಭವಿಸಬಹುದು ಎಂಬುದು ನಿಜ. ಆದರೂ ಕೂಡ ಋತುಬಂಧದ ನಂತರ, ಮಹಿಳೆ ಗರ್ಭಧರಿಸುವ ಬಗ್ಗೆ ಚಿಂತಿಸದಿದ್ದಾಗ, ಅವಳು ಹೆಚ್ಚಿನ ಲೈಂಗಿಕ ಬಯಕೆ ಹೊಂದಲು ಆರಂಭಿಸಬಹುದು. ಹೆರಿಗೆಯ ನಂತರ ದೇಹದಲ್ಲಿನ ಬದಲಾವಣೆಗಳು, ಕುಟುಂಬದ ಜವಾಬ್ದಾರಿಗಳು ಮತ್ತು ಮಾನಸಿಕ ಒತ್ತಡಗಳು ವಯಸ್ಸಾದ ಮಹಿಳೆಯರಲ್ಲಿ ಲೈಂಗಿಕ ಬಯಕೆ ಕಡಿಮೆಯಾಗಲು ಮುಖ್ಯ ಕಾರಣವಾಗಿವೆ.

ತಜ್ಞರು ಹೇಳೋದೇನು?

ಲೈಂಗಿಕ ತಜ್ಞ ಡಾ. ಇಬ್ರಾಹಿಂ ಬೇಗ್ ಹೇಳುವಂತೆ, ಸಾಮಾನ್ಯವಾಗಿ ಪುರುಷರು ಮತ್ತು ಮಹಿಳೆಯರು ವಯಸ್ಸಾದಂತೆ ಕಾಮಾಸಕ್ತಿಯ ನಷ್ಟ ಅಥವಾ ಸಂಭೋಗದ ವೇಳೆ ತೊಂದರೆ ಅನುಭವಿಸಬಹುದು. ಇದಕ್ಕಾಗಿ ದೇಹದಲ್ಲಿನ ದೈಹಿಕ ಬದಲಾವಣೆಗಳಿಗಿಂತ ಆರೋಗ್ಯ ಮತ್ತು ಮಾನಸಿಕ ಸ್ಥಿತಿಗಳು ಹೆಚ್ಚು ಕಾರಣವಾಗಿರುತ್ತವೆ. ಆದರೆ ಇದು ಎಲ್ಲರಲ್ಲೂ ಸಾಮಾನ್ಯವಲ್ಲ. ವಯಸ್ಸಿನ ಹೊರತಾಗಿಯೂ, 40-50ನೇ ಹರೆಯದಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಯಾವುದೇ ದೈಹಿಕ ಅಥವಾ ಮಾನಸಿಕ ಸಮಸ್ಯೆಗಳನ್ನು ಹೊಂದಿರದಿದ್ದರೆ ಆರೋಗ್ಯಕರ ಲೈಂಗಿಕ ಜೀವನ ಅನುಭವಿಸಬಹುದು. ಆದರೆ ಗಮನಿಸಬೇಕಾದ ಒಂದು ಸಂಗತಿಯೆಂದರೆ, ಹೆರಿಗೆಯ ನಂತರ ಮತ್ತು ಋತುಬಂಧದ ಬಳಿಕ ಮಹಿಳೆಯರು ಕಡಿಮೆ ಕಾಮಾಸಕ್ತಿ ಹೊಂದಬಹುದಾಗಿದೆ.

ಇದೇ ವಿಚಾರವಾಗಿ ಸಲಹೆ ನೀಡಿರುವ ಹಿರಿಯ ಮನೋವಿಜ್ಞಾನಿ ಡಾ.ವೀಣಾ ಕೃಷ್ಣನ್, ಲೈಂಗಿಕ ಬಯಕೆ ಕುಂದುವಿಕೆಗೆ ಪ್ರೀತಿ ಮತ್ತು ತಿಳುವಳಿಕೆಯ ಕೊರತೆ, ವಿವಾದ, ಆಯಾಸ, ಒತ್ತಡ, ಆತಂಕ, ಖಿನ್ನತೆ ಮತ್ತು ಸಂವಹನದ ಕೊರತೆಯು ದೈಹಿಕ ಸಮಸ್ಯೆಗಳಿಗಿಂತ ಹೆಚ್ಚು ಕಾರಣವಾಗಿದೆ. ಒಂದು ನಿರ್ದಿಷ್ಟ ವಯಸ್ಸಿನ ನಂತರ, ಜನರು ಸಂಬಂಧಗಳನ್ನು ಉಳಿಸಿಕೊಳ್ಳುವತ್ತ, ಕುಟುಂಬದ ಜವಾಬ್ದಾರಿ ಹೊರುವುದು ಮತ್ತು ಕೆಲವು ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದೆಲ್ಲವೂ ದಂಪತಿಯು ಪರಸ್ಪರ ಲೈಂಗಿಕವಾಗಿ ದೂರವಾಗುವಂತೆ ಮಾಡುತ್ತದೆ, ಹೀಗಾಗಿ ಅವರ ದೈಹಿಕ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದಿದ್ದಾರೆ.

ಇದನ್ನೂ ಓದಿ: ಸಂಭೋಗದ ಸಮಯದಲ್ಲಿ ಕೆಲವು ಮಹಿಳೆಯರು ಏಕೆ ಯೋನಿಯ ನೋವನ್ನು ಅನುಭವಿಸುತ್ತಾರೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.