ಪಾಟ್ನಾ: ಗಯಾದಲ್ಲಿ ಜನರನ್ನು ಕಾಡುತ್ತಿರುವ ನಿಗೂಢ ಕಾಯಿಲೆಯ ಕುರಿತು ತನಿಖೆಗೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ (WHO) ತಂಡ ಮುಂದಾಗಿದೆ. ಬುಧವಾರ ಇಲ್ಲಿನ ಪ್ರದೇಶಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿತು.
ಕಳೆದ ಕೆಲ ವಾರಗಳಿಂದ ಗಯಾದ ಪಟ್ವಾ ಟೋಲಿ ಗ್ರಾಮದ 300ಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇವರ ಅನಾರೋಗ್ಯಕ್ಕೆ ಕಾರಣವಾದ ಅಂಶವನ್ನು ಪತ್ತೆ ಮಾಡುವಲ್ಲಿ ವೈದ್ಯರು ಕೂಡ ಸೋತಿದ್ದಾರೆ. ಹೀಗಾಗಿ ಈ ರೋಗದ ಹಿಂದಿನ ಕಾರಣ ನಿಗೂಢವಾಗಿಯೇ ಉಳಿದಿದೆ.
ರೋಗಿಗಳಲ್ಲಿ ಜ್ವರ, ಕೀಲು ನೋವು ಕಾಣಿಸಿಕೊಂಡು ಇದು ದೀರ್ಘ ಕಾಲ ಬಳಲುವಂತೆ ಮಾಡಿದೆ. ಸ್ಥಳೀಯರು ಈ ರೋಗಕ್ಕೆ ಲಾಂಗ್ಡಾ ಜ್ವರ ಎಂದು ಹೆಸರಿಟ್ಟಿದ್ದಾರೆ. ಜ್ವರದಿಂದ ಚೇತರಿಕೆ ಕಂಡ ಮಂದಿ ಕೀಲು ನೋವಿನಿಂದ ನಡೆಯಲು ಕೂಡ ಸಾಧ್ಯವಾಗುತ್ತಿಲ್ಲ.
ಈ ಕುರಿತು ತನಿಖೆಗೆ ಡಾ.ರಂಜನ್ ಕುಮಾರ್ ಸಿಂಗ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಆದರೆ, ಈ ತಂಡ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಸಫಲವಾಗಿಲ್ಲ. ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ತಂಡ ವೈರಸ್ ಪತ್ತೆ ಮುಂದಾಗಿದೆ. ಈ ವೈರಸ್ ರೋಗಿಗಳ ರಕ್ತದಲ್ಲಿ ಸೇರುತ್ತಿದ್ಯಾ ಎಂಬ ಕುರಿತು ತನಿಖೆ ನಡೆಸುತ್ತಿದೆ.
ರೋಗದ ಲಕ್ಷಣ ಕುರಿತು ಮಾತನಾಡಿರುವ ಸ್ಥಳೀಯ ವೈದ್ಯರು, ರೋಗದ ಲಕ್ಷಣಗಳು ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ರೀತಿ ಇದೆ. ರಕ್ತದ ಮಾದರಿಯನ್ನು ಪಾಟ್ನಾದ ಸಿಬಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಬಳಿಕ ಈ ಸ್ಥಳೀಯ ರೋಗದ ಕಾರಣ ಪತ್ತೆ ಆಗಲಿದೆ ಎಂದಿದ್ದಾರೆ.
ಹಿಂದೆಯೂ ಕಾಡಿತ್ತು ನಿಗೂಢ ಕಾಯಿಲೆ: ಬಿಹಾರದಲ್ಲಿ ಪ್ರತಿ ವರ್ಷ ಈ ರೀತಿಯ ನಿಗೂಢ ಕಾಯಿಲೆಯೊಂದು ಮುಜಾಫರ್ ನಗರದ ಗ್ರಾಮೀಣ ಭಾಗದಲ್ಲಿ ಕಾಡುತ್ತಿದೆ. 2014ರಿಂದಲೂ ಈ ರೀತಿಯ ಸಮಸ್ಯೆ ಮುಜಾಫರ್ ನಗರದ ಮಕ್ಕಳಿಗೆ ತೊಂದರೆ ನೀಡುತ್ತಿದೆ. ಮಕ್ಕಳಲ್ಲಿ ಅತಿಯಾದ ಜ್ವರ, ಮಾನಸಿಕ ಅಸ್ಥಿರತೆ ಕೋಮಾದ ಸ್ಥಿತಿಗೆ ತಲುಪುವ ಪರಿಸ್ಥಿತಿ ಏರ್ಪಟ್ಟು ಅನೇಕ ಮಕ್ಕಳು ಸಾವಿನ ವರದಿ ಕೂಡ 2019ರಲ್ಲಿ ನಡೆದಿದೆ. ಇದಕ್ಕೆ ಕಾರಣ ಮಿದುಳಿನ ಉರಿಯೂತ ಎನ್ನಲಾಗಿತ್ತು. ಸರ್ಕಾರ ತನಿಖೆ ಕೂಡ ನಡೆಸಿತು. (ಐಎಎನ್ಎಸ್)
ಇದನ್ನೂ ಓದಿ: ವಾಯು ಮಾಲಿನ್ಯ: ಉಸಿರಾಟದ ತೊಂದರೆ ಮಾತ್ರವಲ್ಲ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣ - ತಜ್ಞರು