ETV Bharat / sukhibhava

ಮುಖದ ಸೌಂದರ್ಯ ಹೆಚ್ಚಿಸುವಲ್ಲಿ ಹೈಲುರಾನಿಕ್​ ಆಮ್ಲದ ಪಾತ್ರವೇನು? ಯಾವ ವಯಸ್ಸು ಇದರ ಬಳಕೆಗೆ ಸೂಕ್ತ? - ಹೈಲುರಾನಿಕ್ ಆಮ್ಲದ ಬಗ್ಗೆ ಹೆಚ್ಚಿನ ಗಮನ

ಇಂದು ಮಾಶ್ವರೈಸರ್​ನಿಂದ ಪ್ರತಿಯೊಂದು ಸೌಂದರ್ಯ ವರ್ಧಕದಲ್ಲಿಯೂ ಹೈಲುರಾನಿಕ್​ ಆಮ್ಲವಿದೆ. ಇದರ ಅಗತ್ಯವೇನು ತಿಳಿಯೋಣ.

what is the benefit of hyaluronic acid
what is the benefit of hyaluronic acid
author img

By ETV Bharat Karnataka Team

Published : Oct 23, 2023, 4:39 PM IST

ನವದೆಹಲಿ: ತ್ವಚೆಯ ಆರೈಕೆ ಉತ್ಪನ್ನಗಳನ್ನು ಆಯ್ಕೆ ಮಾಡುವಾಗ ಅದರಲ್ಲಿ ಹೈಲುರಾನಿಕ್ ಆಮ್ಲದ ಬಗ್ಗೆ ಹೆಚ್ಚು ಗಮನ ನೀಡುತ್ತೇವೆ. ಸೆರಂನಿಂದ ಪ್ರತಿ ಸೌಂದರ್ಯ ವರ್ಧಕದಲ್ಲಿಯೂ ಹೈಲುರಾನಿಕ್​ ಆಮ್ಲ ಮ್ಯಾಜಿಕ್​ ಅನುಭವ ನೀಡಬಲ್ಲದು. ಸೌಂದರ್ಯ ವರ್ಧಕದಲ್ಲಿ ಪ್ರಾಮುಖ್ಯತೆ ಹೊಂದಿರುವ ಈ ಹೈಲುರಾನಿಕ್​ ಆಮ್ಲ ಎಂದರೇನು? ಇದರ ಬಳಕೆ ಅವಶ್ಯಕತೆ ಏನು ಎಂಬ ಮಾಹಿತಿ ಇಲ್ಲಿದೆ.

ಒಂದು ವೇಳೆ ನೀವು ಬಿರುಸು ಮತ್ತು ಶುಷ್ಕ ತ್ವಚೆಯಿಂದ ಬಳಲುತ್ತಿದ್ದರೆ, ಮೊಡವೆಗಳು ಹೆಚ್ಚಾಗಿ ಕಾಣಿಸುತ್ತಿದ್ದರೆ, ತ್ವಚೆಗೆ ನೀರಿನ ಅವಶ್ಯಕತೆ ಹೆಚ್ಚಿದೆ ಎಂದು ಅರ್ಥ. ಚರ್ಮ ನಿರ್ಜಲೀಕರಣ ಕೊರತೆಯಿಂದ ಬಳಲುತ್ತಿದ್ದರೆ ಇದು ಅವಧಿ ಪೂರ್ವವಾಗಿ ವಯಸ್ಸಾಗುವಿಕೆ ಮತ್ತು ಮೊಡವೆಗಳಿಗೆ ಕಾರಣವಾಗುತ್ತದೆ. ಈ ವೇಳೆ ಹೈಲುರಾನಿಕ್​ ಆಮ್ಲವನ್ನು ಸೇರಿಸುವುದು ಒಳಿತು. ಇದರಿಂದ ತ್ವಚೆ ಮೃದುವಾಗಿ, ಹೈಡ್ರೇಟ್​ ಆಗುತ್ತದೆ.

ಮಾನವನ ದೇಹದಲ್ಲಿ ನೈಸರ್ಗಿಕವಾಗಿ ಹೈಲುರಾನಿಕ್​ ಆಮ್ಲ ಇರುತ್ತದೆ. ಇದು ತ್ವಚೆಯ ಹೈಡ್ರೇಷನ್​ ಮಟ್ಟ ಸುಧಾರಿಸಿ, ಮಾಶ್ಚರೈಸರ್​ ಆಗಿ ಕಾರ್ಯ ನಿರ್ವಹಿಸುತ್ತದೆ. ರ್ಯಾಡಿಗಲ್​ ಮುಕ್ತವಾಗಿ, ಪರಿಸರದ ವಿಷಕಾರಿ ಅಂಶದಿಂದ ಮುಕ್ತಗೊಳಿಸಿ, ವಯಸ್ಸಾಗುವಿಕೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಹೈಲುರಾನಿಕ್​ ಆಮ್ಲ ತ್ವಚೆಗೆ ಬೇಕಾದ ಪೂರಕ ನೀಡುತ್ತದೆ. ಅಷ್ಟೇ ಅಲ್ಲ, ಇದು ಚರ್ಮದ ಎಲಾಸಿಟಿ, ಮೆಟಾಬಾಲಿಸಮ್​, ಚರ್ಮದ ಪುನರ್​ಯವ್ವನಗೊಳಿಸುವಿಕೆ ಮಾಡಿ, ಹಲವು ಸಮಸ್ಯೆಗಳನ್ನೂ ಉಪಶಮನ ಮಾಡುತ್ತದೆ.

ಹೈಲುರಾನಿಕ್​ ಆಮ್ಲದ ಗುಣಗಳು: ಇತ್ತೀಚಿನ ದಿನಗಳಲ್ಲಿ ಮಾಶ್ಚರೈಸರ್​​, ಸೆರಂ, ಫೇಸ್​ವಾಶ್​, ಲೋಷನ್​ ಮತ್ತು ಮಾಸ್ಕ್​ನಂತಹ ಉತ್ಪನ್ನದಲ್ಲಿ ಹೈಲುರಾನಿಕ್​ ಆಮ್ಲ ಸಾಮಾನ್ಯ. ಡಯಟರಿ ಪೂರಕ ಮತ್ತು ಮಾತ್ರೆಗಳಲ್ಲೂ ಕಂಡುಬರುತ್ತದೆ. ಇದು ದೀರ್ಘಾವಧಿಯ ಪರಿಣಾಮಗಳನ್ನು ಹೊಂದಿದೆ. ಬಯೋ ರೀಮಾಡೆಲಿಂಗ್‌ನಂತಹ ಸೌಂದರ್ಯದ ಕಾರ್ಯವಿಧಾನಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಪ್ರೊಫಿಲೋ ಚಿಕಿತ್ಸೆಗೆ ಪರ್ಯಾಯವಾಗಿ ಈ ಬಯೋ ರೀಮಾಡೆಲಿಂಗ್‌ ಬಳಕೆ ಮಾಡಲಾಗುವುದು. ಇದು ಚರ್ಮದ ಆಳವಾದ ಪದರಗಳಿಗೆ ಪೋಷಣೆ ಮತ್ತು ರಚನಾತ್ಮಕ ಬೆಂಬಲ ನೀಡುತ್ತದೆ. ಅಲ್ಟ್ರಾಪುರ್ ಹೈಲುರಾನಿಕ್ ಆಮ್ಲದ ಅತ್ಯಧಿಕ ಸಾಂದ್ರತೆಯನ್ನು ಇದು ಹೊಂದಿದ್ದು, ದೀರ್ಘಕಾಲೀನ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ.

ಹೈಲುರಾನಿಕ್​ ಆಮ್ಲ ಬಳಕೆ ಯಾವಾಗ?: ಸೌಂದರ್ಯ ವರ್ಧಕದಲ್ಲಿ ಹೈಲುರಾನಿಕ್ ಆಮ್ಲದ ಆಯ್ಕೆ ಅತ್ಯುತ್ತಮ. ಇದು ತ್ವಚೆಯನ್ನು ಪೋಷಿಸುವುದರ ಜತೆಗೆ ಗಾಯಗಳ ಮಾಸುವಿಕೆಗೆ ಪ್ರಯೋಜನ ನೀಡುತ್ತದೆ. ತ್ವಚೆಯ ಕಲೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಮುಚ್ಚಿ ಹಾಕುತ್ತದೆ. ಎಲ್ಲಾ ಬಗೆಯ ತ್ವಚೆಯವರು ಇದನ್ನು ಬಳಕೆ ಮಾಡಬಹುದು. ಸಾಮಾನ್ಯವಾಗಿ 20 ಮತ್ತು 30ರಲ್ಲಿ ಇದರ ಪ್ರಯೋಜನವನ್ನು ಹೆಚ್ಚಾಗಿ ಪಡೆಯಬಹುದು. ಹಾರ್ಮೋನ್​ ಮತ್ತು ಒತ್ತಡದ ಅಂಶದಿಂದ ಈ ವಯಸ್ಸಿನಲ್ಲಿ ತ್ವಚೆಗೆ ಹೆಚ್ಚಿನ ಮಾಶ್ಚರೈಸರ್​ ಮತ್ತು ಹೈಡ್ರೆಷನ್​ ಅಗತ್ಯ. 40 ವರ್ಷ ಮೇಲ್ಪಟ್ಟವರು ಕೂಡ ಇದರ ಬಳಕೆಯಿಂದ ಉತ್ತಮ ಫಲಿತಾಂಶ ಪಡೆಯಬಹುದು. ಇದು ಕಾಲಜನ್​ ಉತ್ಪಾದನೆ ಮಾಡಿ ಚರ್ಮಕ್ಕೆ ಹೆಚ್ಚಿನ ಮಾಶ್ಚರೈಸರ್​ ನೀಡುವುದೇ ಇದಕ್ಕೆ ಕಾರಣ.

ಅವಧಿಪೂರ್ವ ವಯಸ್ಸಾಗುವಿಕೆ ತಡೆಯುವಲ್ಲಿ ಹೈಲುರಾನಿಕ್​ ಆಮ್ಲ ಅತ್ಯುತ್ತಮ ಆಯ್ಕೆ. ಇದನ್ನು ಹೆಚ್ಚಾಗಿ ಶಿಫಾರಸು ಮಾಡುತ್ತಾರೆ. ಫ್ರೊಫಿಲೋನಂತಹ ಚಿಕಿತ್ಸೆಯಲ್ಲಿ ಇದು ಸುರಕ್ಷಿತವಾಗಿದ್ದು, ಯಾವುದೇ ಅಡ್ಡ ಪರಿಣಾಮ ಹೊಂದಿರುವುದಿಲ್ಲ. (ಐಎಎನ್​ಎಸ್​)

(ಮಾಹಿತಿ- ರವಿ ಕೊಟಾರಿ, ಡರ್ಮಾಟಾಲಾಜಿಸ್ಟ್​​, ಸ್ಪರ್ಶ್​ ಸ್ಕಿನ್​ ಹೇರ್​ ಲೇಸರ್​ ಕ್ಲಿನಿಕ್​, ಪುಣೆ)

ಇದನ್ನೂ ಓದಿ: Ghee Benefits: ಅಡುಗೆಯ ಘಮ ಹೆಚ್ಚಿಸುವ ತುಪ್ಪ ಮುಖದ ಸೌಂದರ್ಯ ವೃದ್ಧಿಯಲ್ಲೂ ಸಹಾಯಕ!.. ಅದು ಹೇಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.