ನವದೆಹಲಿ: ಬ್ಯಾಕ್ಟೀರಿಯಾ ರೋಗಗಳ ಸೋಂಕಿಗೆ ಒಳಗಾಗದವರನ್ನು ಹೋಲಿಕೆ ಮಾಡಿದಾಗ ಟಿಬಿ (ಟ್ಯೂಬರ್ಕ್ಯುಲೋಸಿಸ್) ಹೊಂದಿರುವ ಮಕ್ಕಳಲ್ಲಿ ವಿಟಮಿನ್ ಡಿ ಕೊರತೆ ಸಾಮಾನ್ಯ ಎಂಬುದನ್ನು ಹೊಸ ಅಧ್ಯಯನ ತಿಳಿಸಿದೆ. ತೆಲಂಗಾಣ ರಾಜ್ಯದಲ್ಲಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಕ್ಯೂರೆಸ್ ಜರ್ನಲ್ನಲ್ಲಿ ಅಧ್ಯಯನದ ವರದಿ ಪ್ರಕಟಗೊಂಡಿದೆ. ಟಿಬಿ ಹೊಂದಿರುವ ಮಕ್ಕಳಲ್ಲಿ ವಿಟಮಿನ್ ಡಿ ಕೊರತೆಯ ತೀವ್ರತೆ ಕಂಡುಬಂದಿದೆ. ಇವರಲ್ಲಿ ಪ್ರತಿ ಮಿಲಿ ಲೀಟರ್ಗೆ 10 ನ್ಯೂನೋಗ್ರಾಮ್ಗಿಂತ ಕಡಿಮೆ ವಿಟಮಿನ್ ಡಿ ಇದೆ ಎಂದು ತಿಳಿಸಿದೆ.
ಒಸ್ಮಾನಿಯಾ ಮೆಡಿಕಲ್ ಕಾಲೇಜ್, ಸಿದ್ದಿಪೇಟೆಯ ಸರ್ಕಾರಿ ಮೆಡಿಕಲ್ ಕಾಲೇಜ್, ನಿಲೊಫರ್ ಆಸ್ಪತ್ರೆಗಳಲ್ಲಿ ಅಧ್ಯಯನ ನಡೆಸಲಾಗಿದೆ. ಒಂದು ವರ್ಷ ಐದು ತಿಂಗಳ ಕಾಲ, ಟಿಬಿ ಹೊಂದಿರುವ 70 ಮಕ್ಕಳು, 6 ತಿಂಗಳಿಂದ 12 ವರ್ಷದ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಭಾಗೀದಾರರನ್ನು 1 ರಿಂದ 4 ವರ್ಷ ಮತ್ತು 5ರಿಂದ 8 ವರ್ಷ ಹಾಗೂ 9 ರಿಂದ 12 ವರ್ಷದವರೆಗೆ ಮೂರು ಗುಂಪುಗಳಾಗಿ ವಿಂಗಡಿಸಲಾಗಿತ್ತು.
ಅಧ್ಯಯನದಲ್ಲಿ 10.43 ನ್ಯಾನೋಗ್ರಾಮ್/ಪ್ರತಿ ಮಿಲಿ ಲೀಟರ್ಗೆ ವಿಟಮಿನ್ ಡಿ ಮಟ್ಟವನ್ನು ಪರೀಕ್ಷಿಸಲಾಗಿದೆ. ಇದೇ ವೇಳೆ ನಿಯಂತ್ರಣದಲ್ಲಿ 22.84 ನ್ಯಾನೋಗ್ರಾಮ್/ಪ್ರತಿ ಮಿಲಿ ಲೀಟರ್ ಇದೆ ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಿಯಂತ್ರಣ ಗುಂಪಿಗೆ ಹೋಲಿಕೆ ಮಾಡಿದಾಗ ಟಿಬಿ ಹೊಂದಿರುವ ಮಕ್ಕಳಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಡಿ ಕೊರತೆಯನ್ನು (ವಿಡಿಡಿ) ಪತ್ತೆ ಹಚ್ಚಲಾಗಿದೆ. ಇದರ ಜೊತೆಗೆ ವಿಡಿಡಿಯ ತೀವ್ರತೆ ಟಿಬಿ ಮಕ್ಕಳಲ್ಲಿ ಹೆಚ್ಚಿದೆ.
ಅಪೌಷ್ಠಿಕಾಂಶ ಮತ್ತು ಕಡಿಮೆ ಸಾಮಾಜಿಕ ಆರ್ಥಿಕತೆಯ ಪರಿಸ್ಥಿತಿ ಹೊಂದಿರುವರಲ್ಲಿ ಉಳಿದವರಿಗಿಂತ ವಿಟಮಿನ್ ಡಿ ಅಪಾಯ ಜಾಸ್ತಿ ಎಂಬುದರ ಬಗ್ಗೆ ವೈದ್ಯರು ಕೂಡ ಅರಿವು ಹೊಂದಿರಬೇಕು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ. ಜಗತ್ತಿನಲ್ಲಿರುವ ಮಾರಣಾಂತಿಕ ಮತ್ತು ಹೆಚ್ಚು ಸಾಂಕ್ರಾಮಿಕ ರೋದಲ್ಲಿ ಟಿಬಿ (ಟ್ಯೂಬರ್ಕ್ಯುಲೊಸಿಸ್) ಒಂದು. ಇದು ರೋಗ ಹರಡುವಿಕೆ ಮತ್ತು ಸಾವಿಗೆ ಕಾರಣವಾಗುತ್ತಿದೆ. ಅದರಲ್ಲೂ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಇನ್ನೂ ಹೆಚ್ಚಿದೆ ಎಂದು ಸಂಶೋಧಕರು ಹೇಳುತ್ತಾರೆ.
ಮೈಕೋಬ್ಯಾಕ್ಟೀರಿಯಾ ಟಿಬಿಗೆ ಕಾರಣ. ಮೈಕೋಬ್ಯಾಕ್ಟೀರಿಯಾ ಟ್ಯೂಬರ್ಕ್ಯುಲೋಸಿಸ್ ಅಂಗಾಂಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಸ್ವಲ್ಪ ಮಟ್ಟಿಗೆ M. ಬೋವಿಸ್ ಮತ್ತು M. ಆಫ್ರಿಕಾನಮ್ ಕೂಡ ಕಾಣಿಸುತ್ತದೆ. ಇದರಲ್ಲಿ ಬ್ಯಾಲಸಿಸ್ ನಿಧಾನವಾಗಿ ಹರಡುವ ಪ್ರಕಾರ. ಮೈಕೋಬ್ಯಾಕ್ಟಿರಿಯಲ್ ವಿರುಲೆನ್ಸ್ ಮತ್ತು ರೋಗ ನಿರೋಧಕ ಶಕ್ತಿಯ ಕುಸಿತವೂ ಈ ರೋಗಕ್ಕೆ ಕಾರಣ ಎಂದು ಸಂಶೋಧಕರು ತಿಳಿಸಿದ್ದಾರೆ. ವಾತಾವರಣದ ಮಾಲಿನ್ಯ, ಶ್ವಾಸಕೋಶದ ದೌರ್ಬಲ್ಯ, ಸಾಂಕ್ರಾಮಿಕತೆಯಿಂದಾಗಿ ಇದು ಹರಡಬಲ್ಲದು. ಇದು ದೀರ್ಘಕಾಲದ ಕೆಮ್ಮು ಆಗಿದ್ದು, ಶ್ವಾಸಕೋಶ ಮತ್ತು ಬೆನ್ನು ಹುರಿ ಮೇಲೆ ಬೇಗ ಪರಿಣಾಮ ಬೀರುತ್ತದೆ. ಇದಕ್ಕೀಗ ಸೂಕ್ತ ಚಿಕಿತ್ಸೆ ಲಭ್ಯವಿದ್ದು ಪರಿಹಾರ ಕಂಡುಕೊಳ್ಳಬಹುದು.
ಇದನ್ನೂ ಓದಿ: ಶೇ 13ರಷ್ಟು ಹೃದಯಾಘಾತಗಳು ಸಂಭವಿಸುವುದು ಸೋಮವಾರವೇ; ಕಾರಣ ಏನು?