ETV Bharat / sukhibhava

ದೀರ್ಘಕಾಲದ ಕೋವಿಡ್​ನಿಂದಾಗಿ ಮಿದುಳಿಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಾಯ; ಅಧ್ಯಯನದಲ್ಲಿ ಬಯಲು

author img

By

Published : Mar 1, 2023, 1:52 PM IST

ದೀರ್ಘ ಕಾಲದ ಕೋವಿಡ್​ಗಳು ಮಾನವನ ದೇಹದ ಮೇಲೆ ಅನೇಕ ಅನಾರೋಗ್ಯಕರ ಪರಿಣಾಮ ಬೀರುತ್ತಿರುವುದು ಮತ್ತೊಮ್ಮೆ ಈ ಹೊಸ ಸಂಶೋಧನೆ ಮೂಲಕ ತಿಳಿದು ಬಂದಿದೆ.

Variation in oxygen supply to the brain due to chronic covid; Open in study

ಟೊರಂಟೊ: ಕೋವಿಡ್​ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದರೂ ಅವರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ವರದಿಯಾಗುತ್ತಿವೆ. ಇವು ಅನೇಕ ಗಂಭೀರ ಸಮಸ್ಯೆಗಳನ್ನು ಹೊಂದಿದ್ದು, ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಈಗಾಗಲೇ ಅನೇಕ ಸಂಶೋಧನೆಗಳು ತಿಳಿಸಿವೆ. ಇತ್ತೀಚೆಗೆ ನಡೆದ ಹೊಸ ಸಂಶೋಧನೆ ಪ್ರಕಾರ, ದೀರ್ಘಕಾಲದ ಕೋವಿಡ್​ ಮೆದುಳಿನ ಆಮ್ಲಜನಕದ ಮಟ್ಟಗಳು ಕಡಿತ ಮಾಡುವುದರ ಜೊತೆಗೆ, ಅರಿವಿನ ಪರೀಕ್ಷೆಗಳಲ್ಲಿ ಕೆಟ್ಟ ಕಾರ್ಯಕ್ಷಮತೆ ಮತ್ತು ಖಿನ್ನತೆ ಮತ್ತು ಆತಂಕದಂತಹ ಮನೋವೈದ್ಯಕೀಯ ರೋಗಲಕ್ಷಣಗಳನ್ನು ಹೊಂದಿದೆ ಎಂಬ ತಿಳಿಸಿದೆ.

ಸೋಂಕಿಗೆ ಒಳಗಾದವರ ಅರಿವಿನ ಕಾರ್ಯಕ್ಷಮತೆ: ಕೆನಡಾದ ವಟಾರ್​ಲೂ ವಿಶ್ವವಿದ್ಯಾಲಯ ಈ ಸಂಬಂಧ ಪ್ರಯೋಗಾಲಯದ ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ, ಕೋವಿಡ್ ಅನಾರೋಗ್ಯಕ್ಕೆ ತುತ್ತಾಗಿದ್ದ ವ್ಯಕ್ತಿಗಳು ಅರಿವಿನ ಮಟ್ಟ ಪರೀಕ್ಷೆ ನಡೆಸಲಾಗಿದೆ. ಅವರು ಎರಡು ಕಂಪ್ಯೂಟರ್ ಕಾರ್ಯಗಳಲ್ಲಿ ಕೆಟ್ಟದಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಇದು ತಿಳಿಸಿದೆ. ಇದರಲ್ಲಿ ಒಂದು ಪ್ರತಿಬಂಧವನ್ನು ಅಳೆಯುವುದು ಮತ್ತು ಇನ್ನೊಂದು ದೀಢೀರ್​​ ನಿರ್ಧಾರ ತೆಗೆದುಕೊಳ್ಳುವುದು ಆಗಿದೆ ಎಂದು ತಿಳಿಸಿದೆ.

ಅಮ್ಲಜನಕದ ಪೂರೈಕೆಯಲ್ಲಿ ಹಿನ್ನಡೆ: ಸೋಂಕಿಗೆ ತುತ್ತಾದ ವ್ಯಕ್ತಿಗಳಲ್ಲಿ ಆಕ್ಸಿಜನ್​ ಏರಿಳಿತದ ಕಡಿತವಾಗಿರುವುದು ಕಂಡು ಬಂದಿದೆ. ಅದರಲ್ಲೂ ಟಾಸ್ಕ್​ ವೇಳೆ ಸೋಂಕಿತರ ವರ ಮಿದುಳಿನ ಆಮ್ಲಜನಕದಲ್ಲಿ ಸ್ಥಿರತೆಯನ್ನು ಹೊಂದಿಲ್ಲ ಎಂದು ಸಂಶೋಧನೆ ತಿಳಿಸಿದೆ. ಕೋವಿಡ್​ 19 ಸೋಂಕಿನ ಗುಣಲಕ್ಷಣ ಹೊಂದಿದವರಲ್ಲಿ ಅರಿವಿನ ಪರೀಕ್ಷೆ ವೇಳೆ ಆಮ್ಲಜನಕವನ್ನು ಹೀರಿಕೊಳ್ಳುವಿಕೆ ಕಡಿಮೆಯಾಗುತ್ತದೆ ಎಂಬುದನ್ನು ನಾವು ತೋರಿಸಿದ್ದೇವೆ ಎಂದು ಅಧ್ಯಯನ ಪ್ರಮುಖ ಲೇಖಕ ಪೀಟರ್​ ಹಾಲ್​ ತಿಳಿಸಿದ್ದಾರೆ.

ಈ ಸಂಶೋಧನೆಗಾಗಿ ಪ್ರತ್ಯೇಕ ಅಧ್ಯಯನ ತಂಡ, 2000 ಕೆನಡಿಯನ್​ ಜನರನ್ನು ಸಮೀಕ್ಷೆಗೆ ಒಳಪಡಿಸಿದೆ. 18ರಿಂದ 56ವರ್ಷದವರೆಗೆ ಒಳಗಿದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದದೆ. ಕೋವಿಡ್​, ಅರಿವಿನ ಕಾರ್ಯಕ್ಷಮತೆ ಮತ್ತು ಮಾನಸಿಕ ಲಕ್ಷಣಗಳ ನಡುವಿನ ಸಂಬಂಧವನ್ನು ಪರೀಕ್ಷೆ ನಡೆಸಲಾಗಿದೆ.

ಮಾನಸಿಕ ಸಮಸ್ಯೆಗಳು ಕೂಡ ಪತ್ರೆ: ಕೋವಿಡ್​ ಸೋಂಕಿಗೆ ಒಳಗಾದವರು ಏಕಾಗ್ರತೆ ತೊಂದರೆ ಜೊತೆಗೆ ಮಾನಸಿಕ ಸಮಸ್ಯೆಗಳಾದ ಆತಂಕ ಮತ್ತು ಒತ್ತಡವನ್ನು ಅನುಭವಿಸುತ್ತಿರುತ್ತಾರೆ. ಲಸಿಕೆ ಪಡೆಯದ ಮಂದಿಯಲ್ಲಿ ಈ ಸಮಸ್ಯೆಗಳು ಕೊಂಚ ಪ್ರಬಲವಾಗಿ ಕಂಡು ಬರುತ್ತದೆ. ಕೋವಿಡ್​ ಸೋಂಕಿಗೆ ಒಳಗಾಗಿ ದೀರ್ಘಕಾಲದ ಬಳಿಕವೂ ಈ ಲಕ್ಷಣಗಳನ್ನು ಪತ್ತೆ ಹಚ್ಚಬಹುದಾಗಿದೆ.

ಯಾವುದೇ ಲಿಂಗತಾರತಮ್ಯವಿಲ್ಲದೆ, ಪ್ರದೇಶಗಳ ಅಡೆತಡೆಗಳಿಲ್ಲದೆ ದೀರ್ಘ ಕೋವಿಡ್​ಗೆ ಬಳಲಿದವರಲ್ಲಿ ಭಾವನಾತ್ಮಕ ನಿಯಂತ್ರಣದೊಂದಿಗೆ ಹೆಚ್ಚಿದ ಸಮಸ್ಯೆಗಳೊಂದಿಗೆ ಪರಸ್ಪರ ಸಂಬಂಧ ಹೊಂದಿದೆ. ಖಿನ್ನತೆ, ಆತಂಕದಂತಹ ಮಾನಸಿಕ ಸಮಸ್ಯೆಗಳನ್ನು ಕಾಣಬಹುದಾಗಿದೆ. ಸಾಂಕ್ರಾಮಿಕತೆ ವಯಸ್ಕರಲ್ಲಿ ಅನೇಕ ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ಧೀರ್ಘಕಾಲದ ಆರೋಗ್ಯ ಸಮಸ್ಯೆ ಹೊಂದಿರುವವರಲ್ಲಿ ಇದು ಹೆಚ್ಚು ಎಂದು ಲೇಖಕರು ತಿಳಿಸಿದ್ದಾರೆ.ಈ ಹಿಂದೆ ಖಿನ್ನತೆ ಲಕ್ಷಣ ಇಲ್ಲದಿರುವ ರೋಗಿಗಳಲ್ಲಿ ಸಾಂಕ್ರಾಮಿಕತೆ ವೇಳೆ ಈ ಖಿನ್ನತೆ ಲಕ್ಷಣ ಕಂಡು ಬಂದಿರುವುದಾಗಿ ವೈದ್ಯಕೀಯ ತಜ್ಞರು ಕೂಡ ತಿಳಿಸಿದ್ದಾರೆ

ಇದನ್ನೂ ಓದಿ: ಕಡಿಮೆ ಕ್ಯಾಲೋರಿ ಪಾನೀಯ, ಆಹಾರಗಳಿಂದಲೂ ಸಂಭವಿಸಬಹುದು ಹೃದಯಾಘಾತ - ಪಾರ್ಶ್ವವಾಯು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.