ETV Bharat / sukhibhava

ವಿಶ್ವ ಹೃದಯ ದಿನ 2021 : ಹೃದಯ ಕಾಳಜಿಯೂ ದಿನಚರಿಯಾಗಲಿ

author img

By

Published : Sep 29, 2021, 7:01 PM IST

ಇತ್ತೀಚೆಗೆ ಯುವ ಜನಾಂಗ ಸಹ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದು ಆತಂಕದ ವಿಚಾರವಾಗಿದೆ. ಹೃದಯ ಆರೋಗ್ಯದ ಕಡೆಯೂ ಜಾಗೃತಿ ಮೂಡಿಸಲು ವಿಶ್ವ ಹೃದಯ ದಿನ ಆಚರಣೆ ಅತಿ ಮುಖ್ಯ ಎನಿಸಿದೆ..

Use Heart To Connect: World Heart Day 2021
ವಿಶ್ವ ಹೃದಯ ದಿನ 2021: ಹೃದಯ ಕಾಳಜಿಯೂ ದಿನಚರಿಯಾಗಲಿ

ಕಳೆದ ಕೆಲ ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಅಚ್ಚರಿಯ ರೀತಿ ಏರಿಕೆಯಾಗುತ್ತಿದೆ. ಈ ನಡುವೆ ಕೋವಿಡ್ ಸಹ ಹೃದಯ ಸಂಬಂಧಿ ಕಾಯಿಲೆಗಳಿಗೆ ಸವಾಲಾಗಿ ಪರಿಣಮಿಸಿದೆ.

ಆದ್ದರಿಂದ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಲು ಮತ್ತು ಅವರ ಹೃದಯದ ಬಗ್ಗೆ ಉತ್ತಮ ಕಾಳಜಿ ವಹಿಸುವಂತೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನ ಆಚರಿಸಲಾಗುತ್ತದೆ.

ಹೃದಯವು ನಮ್ಮ ದೇಹದಲ್ಲಿನ ಪ್ರಮುಖ ಅಂಗ ಮತ್ತು ಅದಕ್ಕೆ ಸಂಬಂಧಿಸಿದ ರೋಗಗಳು ಜೀವಕ್ಕೆ ಮಾರಕವಾಗಬಹುದು. ಕೋವಿಡ್ ಸಮಯದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಹೆಚ್ಚಿನ ಸೋಂಕಿಗೆ ತುತ್ತಾದರು.

ಹೆಚ್ಚು ಅಚ್ಚರಿಯ ಸಂಗತಿ ಎಂದರೆ ಹೃದಯ ಸಂಬಂಧಿ ಕಾಯಿಲೆಗೆ ಇತ್ತೀಚಿಗೆ ಯುವ ಜನಾಂಗವು ಒಳಗಾಗುತ್ತಿದೆ. ಹೃದಯಾಘಾತದಿಂದ ಸಾವು-ನೋವಿನ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ. ಹೃದಯರಕ್ತನಾಳದ ಕಾಯಿಲೆ (ಸಿವಿಡಿ) ಪ್ರಪಂಚದಲ್ಲಿಯೇ ಅತೀ ಹೆಚ್ಚು ಸಾವು ತಂದೊಡ್ಡುವ ಕಾಯಿಲೆ ಎನಿಸಿದೆ.

ಇದರ ಪರಿಣಾಮವಾಗಿ ವರ್ಷಕ್ಕೆ 18.6 ಮಿಲಿಯನ್ ಸಾವು ಸಂಭವಿಸುತ್ತವೆ. ಈ ಸಾವುಗಳಿಗೆ ಪ್ರಮುಖ ಕಾರಣವಾಗಿ ಇವು ಕಂಡು ಬರುತ್ತವೆ. ಧೂಮಪಾನ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜು, ವಾಯು ಮಾಲಿನ್ಯ, ಕಾರ್ಡಿಯಾಕ್ ಅಮಿಲಾಯ್ಡೋಸಿಸ್.

ನಾವು ಸಾಮಾನ್ಯವಾಗಿ ಹೃದಯ ಸಂಬಂಧಿ ಕಾಯಿಲೆಯನ್ನ ನಿರ್ಲಕ್ಷಿಸುತ್ತೇವೆ. ಹೀಗಾಗಿ, ಹೃದಯ ಕಾಳಜಿಯೂ ಪ್ರಮುಖ ದಿನಚರಿಯನ್ನಾಗಿಸುವ ದೃಷ್ಟಿಯಿಂದ ಸೆ.29ರಂದು ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತಿದೆ. 1999ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ ವಿಶ್ವ ಹೃದಯ ಒಕ್ಕೂಟವು ವಿಶ್ವಹೃದಯ ದಿನವನ್ನು ಆಚರಿಸಿತು.

ಈ ವರ್ಷ ಹೃದಯ ಸಂಬಂಧಿ ಆರೋಗ್ಯ ಕಾಪಾಡುವ ಹಾಗೂ ಜಾಗೃತಿ ಮೂಡಿಸುವ ದೃಷ್ಟಿಯಿಂದ ‘ಯೂಸ್ ಹಾರ್ಟ್​ ಟೂ ಕನೆಕ್ಟ್​’ ಎಂಬ ವಾಕ್ಯದೊಂದಿಗೆ ಹೃದಯ ದಿನಾಚರಣೆ ಮಾಡಲಾಗುತ್ತಿದೆ.

ಯಾರಿಗೆಲ್ಲಾ ಹೃದಯ ಸಂಬಂಧಿ ಕಾಯಿಲೆ ಬರುವ ಸಾಧ್ಯತೆ ಇದೆ..?

ವಯಸ್ಸು ಮತ್ತು ಆನುವಂಶಿಕತೆ ಸೇರಿದಂತೆ ಹೃದಯ ಕಾಯಿಲೆಯ ಬೆಳವಣಿಗೆಯ ಸಾಧ್ಯತೆಯು ಹಲವಾರು ಅಂಶಗಳು ವ್ಯಾಖ್ಯಾನಿಸುತ್ತವೆ. ಇತರ ಕೆಲವು ಅಪಾಯಕಾರಿ ಅಂಶಗಳು ಇಲ್ಲಿವೆ:

  • ಧೂಮಪಾನ
  • ಬೊಜ್ಜು
  • ಒತ್ತಡ
  • ತೀವ್ರ ರಕ್ತದೊತ್ತಡ
  • ಅಧಿಕ ಕೊಲೆಸ್ಟ್ರಾಲ್
  • ಮಧುಮೇಹ
  • ಅನುವಂಶಿಯತೆ
  • ಜಡ ಜೀವನಶೈಲಿ
  • ಅತಿಯಾದ ಮದ್ಯ ಸೇವನೆ
  • ಅನಾರೋಗ್ಯಕರ ಆಹಾರ ಪದ್ಧತಿ, ಇತ್ಯಾದಿ..,

ತಡೆಯುವುದು ಹೇಗೆ?

ಉಸಿರಾಟದ ತೊಂದರೆ ಅಥವಾ ಯಾವುದೇ ಅಸಾಮಾನ್ಯ ಲಕ್ಷಣಗಳಿಗೆ ಹಾಗೂ ಉಸಿರಾಟ ಸಮಸ್ಯೆಯ ರೋಗಲಕ್ಷಣಗಳನ್ನು ಅನುಭವಿಸಿದರೆ, ಅವನು/ಅವಳು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕಿದೆ. ಇದಲ್ಲದೇ ನಿಯಮಿತ ಆರೋಗ್ಯ ತಪಾಸಣೆ ಕೂಡ ಬಹಳ ಮುಖ್ಯ. ಯಾಕೆಂದರೆ, ಹೃದ್ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿದರೆ ಅದರ ಚಿಕಿತ್ಸೆ ಮತ್ತು ಚೇತರಿಕೆಗೆ ಹೆಚ್ಚಿನ ಅವಕಾಶಗಳಿರಲಿವೆ.

ಕಾಯಿಲೆ ಬೀಳುವ ಮೊದಲೇ ಎಚ್ಚೆತ್ತುಕೊಳ್ಳಿ

ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ ಮತ್ತು ಸರಿಯಾದ ದಿನಚರಿಯನ್ನು ನಿರ್ವಹಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಯ ದೂರ ಇಡಬಹುದು. ಸಮತೋಲಿತ ಮತ್ತು ಪೌಷ್ಟಿಕ ಆಹಾರ ಸೇವಿಸುವುದು.

ಅಧಿಕ ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ತಪ್ಪಿಸಿ. ಯಾಕೆಂದರೆ, ಅಧಿಕ ಕೊಬ್ಬಿನ ಆಹಾರವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುತ್ತದೆ ಇದು ರಕ್ತ ಸಂಚಾರಕ್ಕೆ ತಡೆಯೊಡ್ಡುತ್ತದೆ.

  • ಬೆಳಗ್ಗೆ ಪ್ರೋಟೀನ್ ಮತ್ತು ಫೈಬರ್ ಭರಿತ ಆಹಾರವನ್ನು ಸೇವಿಸಿ ಮತ್ತು ಸಂಜೆ 6 ಗಂಟೆ ಅಥವಾ 7ರ ನಂತರ ಏನನ್ನೂ ತಿನ್ನದಿರುವುದೇ ಉತ್ತಮ.
  • ಆರೋಗ್ಯಕರ ಹೃದಯ ಹೊಂದಲು ಪ್ರತಿದಿನ ತಾಜಾ, ಕಾಲೋಚಿತ ಹಣ್ಣುಗಳನ್ನು ಸೇವಿಸುವುದು ಮುಖ್ಯ.
  • ಪ್ರತಿದಿನ ವ್ಯಯಾಮ ಮಾಡುವುದು
  • ಪ್ರತಿದಿನ 40 ನಿಮಿಷದ ವೇಗದ ನಡಿಗೆ
  • ಈಜು, ಜಂಪಿಂಗ್, ಓಟ, ಮತ್ತು ಸೈಕ್ಲಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.