ವಾಷಿಂಗ್ಟನ್: ವಯಸ್ಸಾದವರಲ್ಲಿನ ಹೈಪೋಥೈರಾಯ್ಡಿಸಮ್ ಅನ್ನು ನಿಷ್ಕ್ರಿಯ ಥೈರಾಯ್ಡ್ ಎಂದು ಕರೆಯಲಾಗುವುದು. ಇದು ಅವರಲ್ಲಿ ಬುದ್ಧಿಮಾಂದ್ಯತೆಯ ಅಪಾಯವನ್ನು ಅಭಿವೃದ್ದಿ ಪಡಿಸುವ ಸಾಧ್ಯತೆ ಹೊಂದಿರುತ್ತದೆ ಎಂದು ಅಮೇರಿಕನ್ ಅಕಾಡೆಮಿ ಆಫ್ ನ್ಯೂರಾಲಜಿಯ ವೈದ್ಯಕೀಯ ಜರ್ನಲ್ ಪ್ರಕಟಿಸಿದೆ. ಥೈರಾಯ್ಡ್ ಹಾರ್ಮೋನ್ ಬದಲಿ ಔಷಧದ ಅಗತ್ಯವಿರುವ ಜನರಿಗೆ ಈ ಬುದ್ದಿಮಾಂದ್ಯತೆ ಅಪಾಯ ಹೆಚ್ಚಿರುವ ಸಾಧ್ಯತೆ ಇದೆ.
ಥೈರಾಯ್ಡ್ ಗ್ರಂಥಿ ಅಗತ್ಯವಾದ ಥೈರಾಯ್ಡ್ ಹಾರ್ಮೋನ್ ಅನ್ನು ಬಿಡುಗಡೆ ಮಾಡದೇ ಹೋದಾಗ ಈ ಹೈಪರ್ಥೈರಾಯ್ಡಿಸಮ್ ಸಂಭವಿಸುತ್ತದೆ. ಇದು ಮೆಟಾಬಾಲಿಸಮ್ ಅನ್ನು ಕಡಿಮೆ ಮಾಡುತ್ತದೆ. ಜೊತೆಗೆ ಸುಸ್ತು, ತೂಕ ಹೆಚ್ಚಳ, ಅಧಿಕ ಚಳಿಯಂತಹ ಲಕ್ಷಣಗಳನ್ನು ಮೂಡಿಸುತ್ತದೆ. ಕೆಲವು ಪ್ರಕರಣಗಳಲ್ಲಿ ಥೈರಾಯ್ಡ್ ಸಮಸ್ಯೆ ಬುದ್ದಿಮಾಂದ್ಯತೆ ಲಕ್ಷಣದೊಂದಿಗೆ ಸಂಬಂಧ ಹೊಂದಿದ್ದು, ಇದನ್ನು ಚಿಕಿತ್ಸೆ ಮೂಲಕ ಹಿಂದಿರುಗಿಸಬಹುದು.
ಥೈರಾಯ್ಡ್ ಬಗ್ಗೆ ಹೆಚ್ಚಿನ ಜಾಗೃತಿ ಹೊಂದಿರಬೇಕು: ಈ ಸಂಬಂಧ ಹೆಚ್ಚಿನ ಅಧ್ಯಯನ ನಡೆಯುಬೇಕಿದೆ. ಜನರು ತಮ್ಮ ಥೈರಾಯ್ಡ್ ಸಮಸ್ಯೆ ಬಗ್ಗೆ ಹೆಚ್ಚಿನ ಜಾಗೃತಿ ಹೊಂದಿರಬೇಕು. ಆಗ ಬುದ್ದಿಮಾಂದ್ಯತೆ ಅಂತಹ ಅಪಾಯದಿಂದ ತಡೆಯಬಹುದಾಗಿದೆ ಎಂದು ಲೇಖಕ ಚಿಯೆನ್-ಹಸಿಯಾಂಗ್ ವೆಂಗ್ ಪ್ರತಿಪಾದಿಸಿದ್ದಾರೆ. ಈ ಅಧ್ಯಯನ ಸಂಬಂಧ ಸಂಶೋಧಕರು, ಬುದ್ದಿಮಾಂದ್ಯತೆಯ 7, 843 ಮಂದಿ ಹಾಗೂ ಬುದ್ದಿ ಮಾಂದ್ಯತೆ ಹೊಂದಿಲ್ಲದ ಅಷ್ಟೇ ಪ್ರಮಾಣದ ಆರೋಗ್ಯವಂತರನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಈ ವೇಳೆ, ಅವರ ಹೈಪರ್ಥೈರಾಯ್ಡಿಸಮ್ನ ಇತಿಹಾಸವನ್ನು ಕೂಡ ಪರಿಶೀಲನೆಗೆ ಒಳಪಡಿಸಲಾಗಿದೆ.
ಹಾರ್ಮೋನ್‍ಗಳ ಸಂಖ್ಯೆ ಹೆಚ್ಚಾದರೆ ಏನನ್ನು ಸೂಚಿಸುತ್ತದೆ: ಹೈಪರ್ ಥೈರಾಯ್ಡಿಸಮ್ ಇದ್ದಾಗ ಹಾರ್ಮೋನ್‍ಗಳ ಸಂಖ್ಯೆ ಹೆಚ್ಚಾಗುವುದರಿಂದ ಇದನ್ನು ಅತಿಯಾದ ಥೈರಾಯ್ಡ್ ಎಂದು ಕರೆಯಲಾಗುವುದು. ಇದು ಮೆಟಾಬಾಲಿಸಂ ಅನ್ನು ಹೆಚ್ಚಿಸುತ್ತದೆ. ಅನಿಯಂತ್ರಿತ ಹೃದಯ ಬಡಿತ, ಆತಂಕ ಧೀಡಿರ್ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಒಟ್ಟು 102 ಮಂದಿಗೆ ಹೈಪೋಥೈರಾಯ್ಡಿಸಮ್ ಮತ್ತು 133 ಜನರಿಗೆ ಹೈಪರ್ ಥೈರಾಯ್ಡಿಸಮ್ ಇತ್ತು. ಹೈಪರ್ ಥೈರಾಯ್ಡಿಸಮ್ ಮತ್ತು ಬುದ್ಧಿಮಾಂದ್ಯತೆಯ ನಡುವೆ ಯಾವುದೇ ಸಂಬಂಧ ಇರುವುದನ್ನು ಎಂಬುದನ್ನು ಸಂಶೋಧಕರು ಕಂಡುಕೊಂಡಿಲ್ಲ.
ಬುದ್ದಿಮಾಂದ್ಯತೆ ಹೊಂದಿರುವ ಶೇ 68ರಷ್ಟು ಜನರಲ್ಲಿ ಥೈರಾಯ್ಡ್: ಬುದ್ದಿಮಾಂದ್ಯತೆ ಹೊಂದಿರುವ 34 ಜನರಿಗೆ ಹೋಲಿಕೆ ಮಾಡಿದಾಗ 68 ಪ್ರತಿಶತ ಜನರಲ್ಲಿ ಹೈಪರ್ಥೈರಾಯ್ಡಿಸಮ್ ಇರುವುದು ಪತ್ತೆಯಾಗಿದೆ. ಲಿಂಗ, ವಯಸ್ಸು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಬುದ್ಧಿಮಾಂದ್ಯತೆಯ ಅಪಾಯ ಹೊಂದಿದೆ. ಹೈಪೋಥೈರಾಯ್ಡಿಸಮ್ನ ಇತಿಹಾಸವನ್ನು ಹೊಂದಿರುವವರು ಬುದ್ಧಿಮಾಂದ್ಯತೆಯ ಹೆಚ್ಚಿನ ಅಪಾಯದೊಂದಿಗೆ ಸಂಬಂಧ ಹೊಂದಿಲ್ಲ.
ಥೈರಾಯ್ಡ್ ದೇಹದ ಮೇಲೆ ಯಾವ ಪರಿಣಾಮ ಬೀರುತ್ತೆ?: ದೇಹದ ಬೇರೆ ಅಂಗಗಳಂತೆ, ಥೈರಾಯ್ಡ್ ಕೂಡ ಸರಿಯಾಗಿ ಕಾರ್ಯ ನಿರ್ವಹಿಸುವುದು ಅತ್ಯಂತ ಅಗತ್ಯವಾಗಿದೆ. ಅದು ನಮ್ಮ ಕುತ್ತಿಗೆಯ ಮುಂಭಾಗದಲ್ಲಿರುವ ಚಿಟ್ಟೆಯ ಆಕಾರದ ಅಂಗವಾಗಿದ್ದು, ತೂಕ ನಷ್ಟ, ಚಯಾಪಚಯ, ಚರ್ಮ ಮತ್ತು ಕೂದಲಿನ ಆರೋಗ್ಯ ನಿರ್ವಹಣೆ ಮುಂತಾದ ಅಗತ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಹಾರ್ಮೋನುಗಳ ಉತ್ಪಾದನೆ ಮತ್ತು ನಿಯಂತ್ರಣದ ಕೆಲಸವನ್ನು ಮಾಡುತ್ತದೆ. ಥೈರಾಯ್ಡ್ ಹಾರ್ಮೋನ್‍ಗಳ ಮಟ್ಟದಲ್ಲಿ ಆಗುವ ಏರುಪೇರು ಅನೇಕ ಗಂಭೀರ ಕಾಯಿಲೆಗಳಿಗೂ ಕಾರಣವಾಗುತ್ತದ.
ಇದನ್ನೂ ಓದಿ: ಆಹಾರ ಪದ್ಧತಿಯಿಂದ ಪಾರ್ಶ್ವವಾಯು ನಿಯಂತ್ರಣಕ್ಕೆ ಇಲ್ಲಿದೆ ದಾರಿ..