ನವದೆಹಲಿ: ಆರೋಗ್ಯಯುತ, ಸುಂದರ ಕೂದಲನ್ನು ಪಡೆಯಬೇಕು ಎಂಬುದು ಎಲ್ಲರ ಇಚ್ಛೆ. ಆದರೆ, ಈ ಆರೋಗ್ಯಯುತ ಕೂದಲಿನ ಆರೈಕೆ ಉತ್ತಮ ಜೀನ್ಸ್ ಅಥವಾ ದುಬಾರಿ ಉತ್ಪನ್ನಗಳಿಗಿಂತ ಹೆಚ್ಚಿನದನ್ನು ಬೇಡುತ್ತದೆ. ಇದಕ್ಕೆ ಅತ್ಯುತ್ತಮ ಆರೈಕೆ ಅಗತ್ಯವಾಗಿದೆ. ದೈನಂದಿನ ದಿನಚರಿಯಲ್ಲಿ ಉತ್ತಮ ಆಯ್ಕೆಯನ್ನು ಮಾಡುವ ಮೂಲಕ ಇದನ್ನು ಪಡೆಯಬಹುದು. ಇನ್ನು ಮಳೆಗಾಲದಲ್ಲಿ ಈ ಕೂದಲಿನ ಆರೈಕೆ ಹೇಗಿರಬೇಕು ಎಂಬ ಕುರಿತು ಕೆಲವು ಸಲಹೆಗಳನ್ನು ತಜ್ಞರಾದ ಡಾ ಸಾರು ಸಿಂಗ್ ತಿಳಿಸಿದ್ದಾರೆ.
ಒಳಗಿನಿಂದಲೇ ಪೋಷಣೆ: ಸುಂದರ ಕೂದಲು ಆರಂಭವಾಗುವುದು ಆರೋಗ್ಯಯುತ ದೇಹದಿಂದಲೇ. ಡಾ ಸಿಂಗ್ ಕೂಡ ಇಂತಹ ವಿಟಮಿನ್, ಮಿನರಲ್ಸ್ ಮತ್ತು ಅಗತ್ಯ ಫ್ಯಾಟಿ ಆ್ಯಸಿಡ್ಗಳ ಸಮತೋಲಿತ ಆಹಾರಗಳು ನಿಮ್ಮ ಆಯ್ಕೆಯಾಗಿರಲಿ. ಆಹಾರದಲ್ಲಿ ಸಲ್ಮೊನ್, ಮೊಟ್ಟೆ, ಅವಾಕೊಡ್ಸ್, ಪಾಲಕ್ ಮತ್ತು ನಟ್ಗಳು ಆಹಾರದಲ್ಲಿ ಇರಲಿದೆ. ಜೊತೆಗೆ ದೇಹಕ್ಕೆ ಅಗತ್ಯವಾದ ನೀರನ್ನು ಸೇವನೆ ಮಾಡುವುದು ಅತ್ಯವಶ್ಯಕವಾಗಿದೆ.
ಮೃದು ಶುಚಿ ಮತ್ತು ಆರೈಕೆ: ಕೂದಲಿನ ಆರೈಕೆ ಉತ್ಪಾದನೆಗೆ ಮೃದು ಶಾಂಪೂ ಮತ್ತು ಕಂಡಿಷನರ್ ಬಳಕೆ ಮಾಡಿ. ಕೂದಲಿನ ಬುಡವನ್ನು ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ಕೂದಲಿನ ರಕ್ತದ ಪರಿಚಲನೆಗೆ ಸಹಾಯ ಮಾಡಿ, ಆರೋಗ್ಯಯುತ ಕೂದಲಿನ ಬೆಳವಣಿಗೆ ಸಹಾಯವಾಗುತ್ತದೆ.
ಬಿಸಿ ಹಾನಿ: ಕೂದಲಿನ ಸ್ಟೈಲಿಂಗ್ ಮಾಡುವಲ್ಲಿ ಹೀಟಿಂಗ್ ಪ್ರಮುಖವಾಗಿದೆ. ಇದು ಕೂದಲಿನ ಹಾನಿ ಮಾಡುತ್ತದೆ. ಈ ಹೀಟ್ ಸಾಧನವನ್ನು ಕೂದಲಿನ ಸ್ಟ್ರೈಟಿಂಗ್ ಮಾಡಿ, ಕರ್ಲ್, ಐರನಿಂಗ್ ಮತ್ತು ಡ್ರೈಗಳು ಹೆಚ್ಚಿನ ಬಳಕೆ ಕೂದಲಿಗೆ ಹೆಚ್ಚಿನ ಹಾನಿಯಾಗುತ್ತದೆ. ಈ ಹಿನ್ನಲೆ ಪದೇ ಪದೆ ಈ ರೀತಿ ಕೂದಲ ಹಾನಿಯಾಗುವಂತೆ ಅಂಶಗಳ ಬಳಕೆಯಿಂದ ದೂರ ಇರಿ.
ಯುವಿ ಕಿರಣದಿಂದ ರಕ್ಷಣೆ: ಚರ್ಮದಂತೆ ನಮ್ಮ ಕೂದಲು ಕೂಡ ಸೂರ್ಯನಿಂದ ಹಾನಿಯಾಗುತ್ತದೆ. ಈ ಹಿನ್ನೆಲೆ ಯುವಿ ಕಿರಣದಿಂದ ಕೂದಲು ರಕ್ಷಣೆಗೆ ಟೋಪಿ ಧರಿಸಿ ಅಥವಾ ಯುವಿ ರಕ್ಷಣಾ ಕೂದಲ ಸ್ಪ್ರೈ ಅಥವಾ ಸೆರಂಗಳನ್ನು ಬಳಕೆ ಮಾಡಿ. ಇದು ಕೂದಲ ಬಣ್ಣ ಹಾಳಾಗದಂತೆ ರಕ್ಷಣೆ ಮಾಡುತ್ತದೆ ಜೊತೆಗೆ ಶುಷ್ಕತೆಯಾಗದಂತೆ ಕಾಪಾಡುತ್ತದೆ.
ಹಸಿ ಕೂದಲಿನ ರಕ್ಷಣೆಯಲ್ಲಿ ಎಚ್ಚರಿಕೆ ಇರಲಿ: ಹಸಿ ಕೂದಲು ಕೂಡ ಹೆಚ್ಚು ಹಾನಿಗೆ ಒಳಗಾಗುತ್ತದೆ. ಈ ಹಿನ್ನೆಲೆಯಲ್ಲಿ ಕೂದಲಿನ ನಿರ್ವಹಣೆಯಲ್ಲಿ ಮುನ್ನೆಚ್ಚರಿಕೆವಹಿಸಿ. ಹಸಿ ಕೂದಲನ್ನು ದೊಡ್ಡ ಹಲ್ಲಿನ ಕೂದಲಿನಲ್ಲಿ ಬಾಚಿ. ಜೊತೆಗೆ ಸಿಕ್ಕಗಳನ್ನು ಸರಾಗವಾಗಿ ಬಿಡಿಸಿ. ಮೈಕ್ರೋಫೈಬರ್ನಂತಹ ಟವಲ್ ಅಥವಾ ಹಳೆ ಟೀ ಶರ್ಟ್ಗಳನ್ನು ಬಳಸುವ ಮೂಲಕ ಮಾಶ್ಚರೈಸರ್ ಕಾಪಾಡಿಕೊಳ್ಳಿ
ನಿಯಮಿತವಾಗಿರಲಿ ಟ್ರಿಮ್: ಆರೋಗ್ಯಯುತ ಕೂದಲಿಗೆ ಅದನ್ನು ನಿಯಮಿತವಾಗಿ ಟ್ರಿಮ್ ಮಾಡುವುದು ಉತ್ತಮ. ಸ್ಪಿಲ್ಟ್ ಎಂಡ್ ಅಂದರೆ ಕವಲು ಹೊಡೆದ ಕೂದಲ ತುದಿಯನ್ನು ಆರರಿಂದ ಎಂಟು ವಾರಕ್ಕೆ ಒಮ್ಮೆ ಟ್ರಿಮ್ ಮಾಡಿಸಿ. ಇದರಿಂದ ಕೂದಲು ಉದ್ದ ಬೆಳೆಯಲು ಕೂಡ ಸಾಧ್ಯವಾಗುತ್ತದೆ.
ಒತ್ತಡ ಕಡಿಮೆ ಮಾಡಿ: ಒತ್ತಡ ಕೂಡ ಕೂದಲ ಉದುರುವಿಕೆಗೆ ಕಾರಣವಾಗುತ್ತದೆ. ಈ ಹಿನ್ನೆಲೆ ಒತ್ತಡ ನಿವಾರಣೆ ಮಾಡುವಂತಹ ವ್ಯಾಯಾಮ ಮತ್ತು ಸ್ವಯಂ ಆರೈಕೆ, ವಿಶ್ರಾಂತಿಯ ಕೆಲವು ತಂತ್ರವನ್ನು ಅನುಸರಿಸಿ. ಧ್ಯಾನ, ಯೋಗ ನಿಯಮಿತ ವ್ಯಾಯಮಗಳು ನಿಮ್ಮ ಮನಸು ಮತ್ತು ದೇಹವನ್ನು ಸಕಾರಾತ್ಮಕವಾಗಿ ಇಡುವ ಮೂಲಕ ಕೂದಲ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಮೈಗ್ರೇನ್ನಿಂದ ಬಳಲುತ್ತಿದ್ದೀರಾ? ನೋವು ಕಡಿಮೆ ಮಾಡಲು ಈ ಮುನ್ನೆಚ್ಚರಿಕೆ ವಹಿಸಿ..