ಲಂಡನ್: ದಂಪತಿಗಳಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡ ಇದ್ದರೆ, ಮತ್ತೊಬ್ಬರು ಸಾಕಷ್ಟು ಮುಂಜಾಗ್ರತೆ ವಹಿಸಬೇಕು ಎಂದು ಹೊಸ ಅಧ್ಯಯನಯೊಂದು ತಿಳಿಸಿದೆ. ಜರ್ನಲ್ ಆಫ್ ದ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಈ ಅಧ್ಯಯನ ಪ್ರಕಟಿಸಿದೆ. ಅಧ್ಯಯನದ ಅನುಸಾರ, ಒಂದು ವೇಳೆ ಹೆಂಡತಿಗೆ ಅಧಿಕ ರಕ್ತದೊತ್ತಡ ಇದ್ದಲ್ಲಿ, ಗಂಡನಿಗೂ ಕೂಡ ರಕ್ತದೊತ್ತಡ ಬರುವ ಸಾಧ್ಯತೆ ಇದೆ. ಅಥವಾ ಗಂಡನಿಗೆ ಅಧಿಕ ರಕ್ತದೊತ್ತಡ ಇದ್ದರೆ, ಹೆಂಡತಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಅದರಲ್ಲೂ ಈ ರೀತಿಯ ಸಾಧ್ಯತೆ ಭಾರತೀಯರು ಮತ್ತು ಚೀನಿಯರಲ್ಲಿ ಅಧಿಕವಾಗಿದೆ.
ಮಧ್ಯ ಮತ್ತು ಇಳಿ ವಯಸ್ಸಿನಲ್ಲಿ ರಕ್ತದೊತ್ತಡ ಎಂಬುದು ಸಾಮಾನ್ಯವಾಗಿದೆ. ಜಗತ್ತಿನ ಉಳಿದ ದೇಶಗಳಿಗೆ ಹೋಲಿಕೆ ಮಾಡಿದಾಗ ಭಾರತ, ಚೀನಾ, ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ರಕ್ತದೊತ್ತಡ ಪ್ರಕರಣಗಳು ಹೆಚ್ಚು. ಈ ರಕ್ತದೊತ್ತಡವೂ ವಿಭಿನ್ನ ಲಿಂಗಿಯ ಪಾಲುದಾರರಲ್ಲಿ ಇರುವ ಕುರಿತು ತಂಡವೂ ಅಧ್ಯಯನ ನಡೆಸಿದೆ. ಈ ವೇಳೆ ಫಲಿತಾಂಶವೂ ಅಚ್ಚರಿ ಮೂಡಿದೆ. ಅನೇಕ ದಂಪತಿಗಳಿಬ್ಬರು ಅಧಿಕ ರಕ್ತದೊತ್ತಡ ಹೊಂದಿರುವುದು ತಿಳಿದು ಬಂದಿದೆ. ಭಾರತದಲ್ಲಿ 50ವರ್ಷ ದಾಟಿದ ಶೇ 20ರಷ್ಟು ದಂಪತಿಗಳು ಅಧಿಕ ರಕ್ತದೊತ್ತಡ ಹೊಂದಿರುವುದು ಕಂಡು ಬಂದಿದೆ. ಇದೇ ರೀತಿಯ ಟ್ರೆಂಡ್ ಅಮೆರಿಕ, ಇಂಗ್ಲೆಂಡ್ ಮತ್ತು ಚೀನಾದಲ್ಲಿ ಕಂಡುಬಂದಿದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದಾಗ ನಮ್ಮ ದೇಶದಲ್ಲಿ ಅಧಿಕ ರಕ್ತದೊತ್ತಡ ಇಲ್ಲದ ಪುರುಷನನ್ನು ಮದುವೆಯಾದ ಮಹಿಳೆಯರಿಗೆ ಹೋಲಿಕೆ ಮಾಡಿದಾಗ ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಯನ್ನು ಮದುವೆಯಾದ ಮಹಿಳೆಯರಲ್ಲಿ ಈ ಅಧಿಕ ರಕ್ತದೊತ್ತಡ ಅಭಿವೃದ್ಧಿಯಾಗುವ ಸಾಧ್ಯತೆ ಶೇ 19ರಷ್ಟಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
ಭಾರತೀಯರಲ್ಲಿ ಹೆಚ್ಚು: ಇದೇ ರೀತಿ ಪ್ರಕರಣಗಳು ಪುರುಷರಲ್ಲೂ ಕಂಡು ಬಂದಿದೆ. ಆರೋಗ್ಯದ ವಿಚಾರದಲ್ಲಿ ದಂಪತಿಗಳು ಪರಸ್ಪರ ಪ್ರಭಾವವನ್ನು ಬೀರುತ್ತಾರೆ. ಗಂಡ/ ಹೆಂಡತಿ ಭಾವನಾತ್ಮಕವಾಗಿ, ಆದ್ಯತೆ ಮತ್ತು ಜೀವನಶೈಲಿ ಅಭ್ಯಾಸ ಸೇರಿದಂತೆ ಕೆಲವು ವಿಚಾರದಲ್ಲಿ ಪರಸ್ಪರ ಒಬ್ಬರನ್ನು ಒಬ್ಬರು ಅವಲಂಬಿಸಿರುತ್ತಾರೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ಒಬ್ಬರಿಂದ ಒಬ್ಬರಿಗೆ ರಕ್ತದೊತ್ತಡ ಬರುವ ಸಾಧ್ಯತೆ ಇದ್ದು, ದಂಪತಿಗಳು ಬಿಪಿ ಚಿಕಿತ್ಸೆ, ಪರಿಹಾರವನ್ನು ಪಡೆಯುವ ಅವಶ್ಯತೆ ಇದೆ ಎಂದು ಅಧ್ಯಯನ ಸಲಹೆ ನೀಡುತ್ತದೆ.
ಈ ಅಧ್ಯಯನಕ್ಕಾಗಿ ಅಮರಿಕದ 3,989, ಇಂಗ್ಲೆಂಡ್ನ 1,086, ಚೀನಾದ 6,514 ಮತ್ತು ಭಾರತದ 22,389 ದಂಪತಿಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಭಾರತ ಮತ್ತು ಚೀನಿ ದಂಪತಿಗಳು ದೀರ್ಘಕಾಲ ಒಟ್ಟಿಗೆ ಜೀವಿಸುವ ಹಿನ್ನೆಲೆ ಈ ದಂಪತಿಗಳನ್ನು ಒಬ್ಬರ ಆರೋಗ್ಯದ ವಿಚಾರಗಳು ಮತ್ತೊಬ್ಬರಲ್ಲಿ ಪ್ರೇರೇಪಿಸುತ್ತದೆ. ಚೀನಾ ಮತ್ತು ಭಾರತದ ದಂಪತಿಗಳ ಆರೋಗ್ಯವೂ ನಿಕಟವಾಗಿ ಹೆಣೆದುಕೊಂಡಿರುತ್ತದೆ ಎಂದಿದೆ ಅಧ್ಯಯನ.
ಇದನ್ನೂ ಓದಿ: ಹೈ ಬಿಪಿ ನಿಯಂತ್ರಿಸಿದರೆ ಭಾರತ 2040ರ ಹೊತ್ತಿಗೆ 46 ಲಕ್ಷ ಜನರ ಸಾವು ತಡೆಯಬಹುದಂತೆ!