ನ್ಯೂಯಾರ್ಕ್: ಬೊಜ್ಜು ವಿರೋಧಿ ಔಷಧ ತಯಾರಕರಾದ ನೊವೊ ನಾರ್ಡಿಸ್ಕ್ ಮತ್ತು ಎಲಿ ಲಿಲ್ಲಿ ಕಂಪನಿ ವಿರುದ್ದ ಅಮೆರಿಕದಲ್ಲಿ ಕಾನೂನು ಮೊಕ್ಕದ್ದಮೆ ಹೂಡಲಾಗಿದೆ. ಇದು ಹೊಟ್ಟೆ ಪಾರ್ಶ್ವವಾಯು ಅಥವಾ ಗ್ಯಾಸ್ಟ್ರೋಪೆರೆಸಿಸ್ಗೆ ಕಾರಣವಾಗಿದೆ ಎಂದು ವಾದ ಮಂಡಿಸಲಾಗಿದೆ. ನೊವೊ ನಾರ್ಡಿಸ್ಕ್ ಮತ್ತು ಎಲಿ ಲಿಲ್ಲಿ ಈ ಔಷಧವು ಮಧುಮೇಹ ಕಡಿಮೆ ಮಾಡುವ ಜೊತೆಗೆ ತೂಕ ನಷ್ಟ ಮಾಡಲು ಸಹಾಯ ಮಾಡುತ್ತದೆ. ವಾರಕ್ಕೆ ಒಮ್ಮೆ ಮಾತ್ರ ಬಳಕೆ ಮಾಡಬಹುದಾದ ಇಂಜೆಕ್ಷನ್ ರೂಪದ ಔಷಧ ಇದಾಗಿದೆ. ಆದರೆ, ಇದು ಗಂಭೀರ ಸ್ವರೂಪದ ಅಡ್ಡ ಪರಿಣಾಮ ಹೊಂದಿದ್ದು, ಇದರಿಂದ ರೋಗಿಗಳು ಗ್ಯಾಸ್ಟ್ರೋಪೆರೆಸಿಸ್ ಪರಿಣಾಮಕ್ಕೆ ಒಳಗಾಗಿಸುತ್ತದೆ ಎಂದು ಎಚ್ಚರಿಕೆ ನೀಡಿಲ್ಲ ಎಂದು 44 ವರ್ಷ ಜಾಕ್ಲಿನ್ ಬ್ಜೋರ್ಕ್‌ಲಂಡ್ ಆರೋಪಿಸಿದ್ದಾರೆ.
ಈ ಎರಡು ಔಷಧಗಳು ಆಯಾಸ, ವಾಂತಿ, ಅತಿಸಾರ, ಹೊಟ್ಟೆ ನೋವು, ಮಲಬದ್ಧತೆಯಂತಹ ಹೊಟ್ಟೆ ಸಮಸ್ಯೆಗಳಿಗೆ ಕಾರಣವಾಗಿದೆ. ಅವರು ಈ ಔಷಧಗಳಲ್ಲಿ ಗ್ಯಾಸ್ಟ್ರೊಪೆರೆಸಿಸ್ ಅಪಾಯದ ಕುರಿತು ಎಚ್ಚರಿಕೆ ನೀಡಿಲ್ಲ. ಓಝೆಂಪಿಕ್ ಮತ್ತು ಮೌಂಜಾರೊ ಔಷಧ ಬಳಕೆಯಿಂದಾಗಿ ಗಂಭೀರ ವಾಂತಿ, ಹೊಟ್ಟೆ ನೋವು ಮತ್ತು ಹೊಟ್ಟೆ ಉರಿ ಮತ್ತು ಹಲ್ಲು ನಷ್ಟಕ್ಕೆ ಕಾರಣವಾಗಿದೆ ಎಂದು ಬ್ಜೋರ್ಕ್‌ಲಂಡ್ ಮೊಕದ್ದಮೆಯಲ್ಲಿ ದಾಖಲಿಸಿದ್ದಾರೆ.
ಹೊಟ್ಟೆ ಸಂಬಂಧಿತ ಸಮಸ್ಯೆ: ಈ ಔಷಧಗಳನ್ನು ಬಳಕೆ ಮಾಡುವುದರಿಂದ ಅನೇಕ ಹೊಟ್ಟೆ ನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವಿರಿ. ಅನೇಕ ಬಾರಿ ಎಮೆರ್ಜೆನ್ಸಿಗೂ ದಾಖಲಾಗುವ ಸಾಧ್ಯತೆ ಇದೆ. ಅಧಿಕ ವಾಂತಿಯಿಂದಾಗಿ ಹಲ್ಲಿನ ನಷ್ಟ ಕೂಡ ಆಗಿದೆ ಎಂದು ಬ್ಜೋರ್ಕ್‌ಲಂಡ್ ಆರೋಪಿಸಿದ್ದಾರೆ. ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ವ್ಯಾಖ್ಯಾನಿಸುವಂತೆ, ಗ್ಯಾಸ್ಟ್ರೊಪೆರೆಸಿಸ್ ಕೂಡ ಗ್ಯಾಸ್ಟ್ರಿಕ್ ಖಾಲಿಯಾವುದನ್ನು ನಿಧಾನಗೊಳಿಸುತ್ತದೆ ಎಂದಿದೆ. ದೊಡ್ಡ ಕರುಳಿನಿಂದ ಸಣ್ಣ ಕರುಳಿಗೆ ಆಹಾರ ಹೋಗುವುದನ್ನು ಯಾವುದೇ ಸಮಸ್ಯೆ ಇಲ್ಲದಿದ್ದರೂ ಇದು ವಿಳಂಬಗೊಳಿಸುತ್ತದೆ ಎಂದು ದೂರಿನಲ್ಲಿ ಹೇಳಲಾಗಿದೆ.
ವಕೀಲರ ವಾದ: ಬ್ಜೋರ್ಕ್‌ಲಂಡ್ ಪ್ರತಿನಿಧಿಸಿರುವ ಕಾನೂನು ಸಲಹೆಗಾರ ಮೊರ್ಗಾನ್ ಅಂಡ್ ಮೊರ್ಗಾನ್ ಹೇಳುವಂತೆ, ಈ ಔಷಧಗಳನ್ನು ಸೇವಿಸಿದ ಬಳಿಕ ಗ್ಯಾಸ್ಟ್ರೊಪೆರೆಸಿಸ್ ಸಮಸ್ಯೆ ಎದುರಿಸಿದಾಗಿ 400 ಮಂದಿ ಸಹಿ ಹಾಕಿದ್ದಾರೆ ಎಂದು ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿದೆ. ಅನೇಕ ಜನರು ಈ ಔಷಧ ಸೇವಿಸಿದ ಬಳಿಕ ಹೆಚ್ಚಿನ ವಾಂತಿ ಅನುಭವ ಹೊಂದಿದ್ದು, ಇದು ಕೇವಲ ಒಂದು ವಾರವಲ್ಲ. ಪ್ರತಿ ದಿನ ಈ ರೀತಿ ಅನುಭವ ಆಗಿದೆ. ಈ ವಾಂತಿಯಿಂದಾಗಿ ಅವರು ತುರ್ತು ಘಟಕಕ್ಕೂ ದಾಖಲಾಗಿದ್ದಾರೆ ಎಂದು ಮೊರ್ಗಾನ್ ವಕೀಲರಾದ ಪೌನ್ ಪೆನ್ನಾಕ್ ತಿಳಿಸಿದ್ದಾರೆ.
ಕಂಪನಿಯ ಹೇಳಿಕೆ ಇನ್ನು ಈ ಕುರಿತು ಪ್ರತಿಕ್ರಿಯಿಸಿ ಹೇಳಿಕೆ ಬಿಡುಗಡೆ ಮಾಡಿರುವ ನೊವೊ, ರೋಗಿಗಳ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ ಆಗಿದೆ. ನಾವು ವೃತ್ತಿಪರ ಆರೋಗ್ಯ ಕಾರ್ಯಕರ್ತರ ಮೇಲ್ವಿಚಾರಣೆಯಲ್ಲಿ ಸೂಚಿಸಿದ ಪ್ರಮಾಣದ ಔಷಧ ಸೇವಿಸುವಂತೆ ಸಲಹೆ ಮಾಡುತ್ತೇವೆ ಎಂದಿದ್ದಾರೆ. ಲಿಲ್ಲಿ ಕೂಡ ತಮ್ಮ ಹೇಳಿಕೆಯಲ್ಲಿ ರೋಗಿಗಳ ಸುರಕ್ಷತೆ ನಮಗೆ ಅತ್ಯಗತ್ಯವಾಗಿದ್ದು, ನಮ್ಮ ಎಲ್ಲಾ ಔಷಧಗಳ ಸುರಕ್ಷತೆ ಮೇಲ್ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಇದನ್ನೂ ಓದಿ: ಯುವ ಜನತೆಯಲ್ಲಿ ಮೂಳೆ ಮುರಿತಕ್ಕೆ ಪ್ರಮುಖ ಕಾರಣವೇ ಅಪಘಾತ