ETV Bharat / sukhibhava

ಎಚ್ಚರ... ಚರ್ಮದ ಊರಿಯೂತದ ವೇಳೆ ಬಳಕೆ ಮಾಡುವ ಸ್ಟಿರಿಯೋಡ್​ ಕ್ರೀಮ್ ನಿಂದ​ ಮೂಳೆಗಳು ಹಾಳಾಗಬಹುದು! - ಸ್ಟಿರಿಯೋಡ್​ ಕ್ರೀಮ್​ಗಳ ಬಳಕೆ ಅನಾನುಕೂಲತೆ

ಕಾರ್ಟಿಕೊಸ್ಟೆರಾಯ್ಡ್​​​ಗಳ ಚಿಕಿತ್ಸೆಯಲ್ಲಿ ಚರ್ಮದ ಪರಿಸ್ಥಿತಿಗಳ ನಿರ್ವಹಣೆಗೆ ಎಚ್ಚರದಿಂದ ನಿರ್ವಹಣೆ ಮಾಡಬೇಕಿದೆ.

Steroid cream used in skin diseases can damage bones

author img

By ETV Bharat Karnataka Team

Published : Dec 21, 2023, 2:03 PM IST

ತೈಪೈ: ಚರ್ಮದ ಊರಿಯುತದಂತಹ ಸಮಸ್ಯೆಗಳಿಗೆ ಸಾಮಾನ್ಯವಾಗಿ ಬಳಕೆ ಮಾಡುವಂತ ಕಾರ್ಟಿಕೊಸ್ಟೆರಾಯ್ಡ್​​ಗಳು ಅತಿ ಹೆಚ್ಚು ಬಳಕೆ ಮಾಡಿದಲ್ಲಿ ಅದು ಅಸ್ಥಿರಂದ್ರತೆ ಮತ್ತು ಮೂಳೆ ಮುರಿತದಂತಹ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಹೊಸ ಸಂಶೋಧನೆ ತಿಳಿಸಿದೆ. ವ್ಯವಸ್ಥಿತ ಕಾರ್ಟಿಕೊಸ್ಟೆರಾಯ್ಡ್‌ಗಳು ಮೂಳೆ ಮರು ರೂಪಿಸುವಿಕೆಗೆ ಅಡ್ಡಿಪಡಿಸುತ್ತವೆ. ಇವು ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತದ ಅಪಾಯ ಹೆಚ್ಚಿಸುತ್ತವೆ ಎಂದು ತಿಳಿದು ಬಂದಿದೆ. ಆದರೂ ಮೂಳೆ ಆರೋಗ್ಯದ ಮೇಲೆ ಟಾಪಿಕಲ್​ ಕಾರ್ಟಿಕೊಸ್ಟೆರಾಯ್ಡ್​​ಗಳ ಅನಿರ್ದಿಷ್ಟವಾಗಿದೆ.

ಈ ಕುರಿತು ಜರ್ನಲ್​ ಆಫ್​ ದಿ ಯುರೋಪಿಯನ್​ ಅಕಾಡಮಿ ಆಫ್​ ಡರ್ಮಟಾಲಾಜಿ ಮತ್ತು ವೆನೆರಿಯಲಾಜಿಯಲ್ಲಿ ಪ್ರಕಟಿಸಲಾಗಿದೆ. ದೀರ್ಘ ಕಾಲದವರೆಗೆ ಕಾರ್ಟಿಕೊಸ್ಟೆರಾಯ್ಡ್​​​ಗೆ ಒಡ್ಡಿಕೊಳ್ಳುವುದರಿಂದ ಅಪಾಯ ಹೆಚ್ಚಿದೆ. ಇದರಲ್ಲಿ ಹಿರಿಯರು ಮತ್ತು ಮಕ್ಕಳು ಅತಿ ಹೆಚ್ಚಿನ ಅಪಾಯ ಹೊಂದಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಅಧ್ಯಯನ ಟಾಪಿಕಲ್​ ಕಾರ್ಟಿಕೊಸ್ಟೆರಾಯ್ಡ್​​​ಗಳ ಚಿಕಿತ್ಸೆಯಲ್ಲಿ ಚರ್ಮದ ಪರಿಸ್ಥಿತಿಗಳ ನಿರ್ವಹಣೆಗೆ ಎಚ್ಚರದಿಂದ ನಿರ್ವಹಣೆ ಮಾಡಬೇಕಿದೆ. ಇದರ ಅಡ್ಡ ಪರಿಣಾಮದ ಬಗ್ಗೆ ಆರೋಗ್ಯ ವೃತ್ತಿಪರರಲ್ಲಿ ಅರಿವು ಮತ್ತು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ನ್ಯಾಷನಲ್​ ತೈವಾನ್​ ಯುನಿವರ್ಸಿಟಿ ಹಾಸ್ಪಿಟಲ್​ ಮತ್ತು ನ್ಯಾಷನಲ್​ ತೈವಾನ್​ ಯುನಿವರ್ಸಿಟಿ ಕಾಲೇಜ್​ ಆಫ್​ ಮಡಿಸಿನ್​ ನ ಚಿಯಾಯು ಚು ತಿಳಿಸಿದ್ದಾರೆ.

ಟಾಪಿಕಲ್​ ಕಾರ್ಟಿಕೊಸ್ಟೆರಾಯ್ಡ್‌ಗಳು ಮತ್ತು ಆಸ್ಟಿಯೊಪೊರೋಸಿಸ್ ಮತ್ತು ಗಂಭೀರ ಆಸ್ಟಿಯೊಪೊರೋಸಿಸ್​​ ಮುರಿತದಂತಹ ದೀರ್ಘಕಾಲೀನ ಬಳಕೆಯ ನಡುವಿನ ಸ್ಪಷ್ಟ ಡೋಸ್-ಪ್ರತಿಕ್ರಿಯೆ ಸಂಬಂಧಗಳಿರುವುದು ಅಧ್ಯಯನದ ವೇಳೆ ಬಯಲಾಗಿದೆ. ಈ ಕುರಿತು ಅಧ್ಯಯನಕ್ಕೆ ತಂಡವು 129,682 ಆಸ್ಟಿಯೊಪೊರೋಸಿಸ್ ಪ್ರಕರಣಗಳನ್ನು ಮತ್ತು 34,999 ಪ್ರಮುಖ ಆಸ್ಟಿಯೊಪೊರೊಟಿಕ್ ಮುರಿತ (ಎಂಒಎಫ್​​) ಪ್ರಕರಣಗಳನ್ನು ಆಯ್ಕೆ ಮಾಡಿಕೊಂಡು ಸಂಶೋಧನೆ ಕೈಗೊಂಡಿತ್ತು.

ಯಾವುದೇ ಡೋಸ್​​ಗಳಿಗೆ ಹೋಲಿಕೆ ಮಾಡಿದಾಗ ಕಡಿಮೆ ಮತ್ತು ಮದ್ಯಮದ ಮತ್ತು ಹೆಚ್ಚಿನ ಪ್ರಮಾಣದ ಡೋಸ್​​ಗಳಿ ಟಾಪಿಕಲ್​ ಕಾರ್ಟಿಕೊಸ್ಟೆರಾಯ್ಡ್​​ಗಳು ಐದು ವರ್ಷದಲ್ಲಿ ಅಸ್ಟಿಯೋಪೊರೋಸಿಸ್​​ ಅಭಿವೃದ್ಧಿ ಪಡಿಸುವ ಸಾಮರ್ಥ್ಯವೂ 1.22- ರಷ್ಟು ಹೆಚ್ಚಿದೆ.

ಈ ಅಡ್ಡ ಪರಿಣಾಮಗಳು ಪುರಷರಿಗಿಂತ ಮಹಿಳೆಯರಲ್ಲಿ ಹೆಚ್ಚಿರುವುದು ಕಂಡು ಬಂದಿದೆ. ಅವರಲ್ಲಿ ಇದು ಅಸ್ಟಿಪೊರೋಸಿಸ್​ ಮತ್ತು ಗಂಭೀರ ಅಸ್ಟಿಯೊಪೊರೋಸಿಸ್​​ ಅಪಾಯವನ್ನು ಹೊಂದಿದೆ. ಹಾಗೆಯೇ 50 ವರ್ಷಕ್ಕಿಂತ ಕೆಳಗಿನ ಎಲ್ಲ ಗುಂಪಿನವರಲ್ಲಿ ಕೂಡ ಈ ಪರಿಣಾಮ ಉಳಿದ ವಯೋಮಾನದ ಗುಂಪಿಗೆ ಹೋಲಿಕೆ ಮಾಡಿದಾಗ ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಟ್ರೆಂಡ್​ ಆಗುತ್ತಿದೆ ಸೈಲೆಂಟ್​ ವಾಕಿಂಗ್​; ಇದರಿಂದ ಆರೋಗ್ಯ ಪ್ರಯೋಜನವೂ ಹೆಚ್ಚು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.