ETV Bharat / sukhibhava

ಭಾರತದಲ್ಲಿ ಹೆಚ್ಚುತ್ತಿವೆ ಕಪ್ಪು ಶಿಲೀಂಧ್ರ ಸೋಂಕಿನ ಪ್ರಕರಣಗಳು.. ಲಕ್ಷಣಗಳೇನು... ಚಿಕಿತ್ಸೆ ಹೀಗಿದೆ!

ಭಾರತದಲ್ಲಿ ಇತ್ತೀಚೆಗೆ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡಿರುವ ಕೆಲ ಜನರಲ್ಲಿ ಕಪ್ಪು ಶಿಲೀಂಧ್ರಗಳ ಸೋಂಕು ಅಥವಾ ಮ್ಯೂಕಾರ್ಮೈಕೋಸಿಸ್ ಕಾಣಿಸಿಕೊಳ್ಳುತ್ತಿದ್ದು, ಇದು ಕಳವಳ ಉಂಟುಮಾಡುತ್ತಿದೆ. ಐಸಿಎಂಆರ್ ಇತ್ತೀಚೆಗೆ ಇದಕ್ಕೆ ಸಂಬಂಧಿಸಿದ ಸಲಹೆಯನ್ನು ಬಿಡುಗಡೆ ಮಾಡಿದೆ. ಕಪ್ಪು ಶಿಲೀಂಧ್ರಗಳ ಸೋಂಕಿನ ಲಕ್ಷಣಗಳು ಹೀಗಿವೆ.

author img

By

Published : May 13, 2021, 3:42 PM IST

rising-cases-of-the-black-fungal-infection-in-india

ಹೈದರಾಬಾದ್: ಕೊರೊನಾ ವೈರಸ್ ದೇಶಾದ್ಯಂತ ಒತ್ತಡ ಸೃಷ್ಟಿಸುತ್ತಿದ್ದು, ಜನರನ್ನು ಘಾಸಿಗೊಳಿಸಿದೆ. ಆದರೆ ಇದೀಗ ಕೋವಿಡ್-19ನಿಂದ ಚೇತರಿಕೆಯಾದ ನಂತರ ಕಾಣಿಸಕೊಳ್ಳುತ್ತಿರುವ ಮ್ಯೂಕಾರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ (Black Fungus) ಜನರನ್ನು ಚಿಂತೆಗೀಡುಮಾಡುತ್ತಿದೆ. ಏಕೆಂದರೆ ಇದು ದೇಹದಲ್ಲಿ ವೇಗವಾಗಿ ಹರಡುತ್ತದೆ ಮತ್ತು ರೋಗಲಕ್ಷಣಗಳನ್ನು ನಿರ್ಲಕ್ಷಿಸಿದರೆ ಅಥವಾ ಚಿಕಿತ್ಸೆಯು ವಿಳಂಬವಾದರೆ ಇದು ಮಾರಕವಾಗಬಹುದು.

ಕೋವಿಡ್-19 ಚಿಕಿತ್ಸೆಯ ಭಾಗವಾಗಿ ಸ್ಟೀರಾಯ್ಡ್‌ಗಳನ್ನು ತೆಗೆದುಕೊಳ್ಳುವ ರೋಗಿಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಇದು ವಿಶೇಷವಾಗಿ ಮಧುಮೇಹ ರೋಗಿಗಳಲ್ಲಿ, ರಕ್ತದ ಸಕ್ಕರೆ ಮಟ್ಟ ಹೆಚ್ಚಳಕ್ಕೆ ಕಾರಣವಾಗಿದೆ. ಸಮಯಕ್ಕೆ ಸರಿಯಾಗಿ ರೋಗನಿರ್ಣಯ ಮಾಡಿ, ಸರಿಯಾಗಿ ಚಿಕಿತ್ಸೆ ನೀಡಿದರೆ ಅದನ್ನು ತಡೆಯಬಹುದು.

ಮ್ಯೂಕೋರ್ಮೈಕೋಸಿಸ್ ಎಂದರೇನು?

ಇದು ಶಿಲೀಂಧ್ರ ರೋಗ. ಮ್ಯುಕೋರ್‌ವೆುçಕೋಸಿಸ್‌ ಎಂಬ ಶಿಲೀಂಧ್ರದಿಂದ ಬರುತ್ತದೆ. ಈಗಾಗಲೇ ಸೋಂಕಿನಿಂದ ಬಳಲುತ್ತಿರುವ ಮತ್ತು ಇತರ ಕಾಯಿಲೆಗಳ ವಿರುದ್ಧ ಹೋರಾಡಲು ಔಷಧಿಯನ್ನು ತೆಗೆದುಕೊಳ್ಳುವ ಜನರಿಗೆ ಇದು ಹೆಚ್ಚಾಗಿ ದಾಳಿ ಮಾಡುತ್ತದೆ. ಇದು ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಇದರ ಅಪಾಯ ಶಿಲೀಂಧ್ರ ದಾಳಿ ಮಾಡಿದ ಸ್ಥಳದ ಮೇಲೆ ಅವಲಂಬಿಸಿರುತ್ತದೆ

ಪ್ರಮುಖ ಲಕ್ಷಣಗಳು:

  • ಸೈನುಟಿಸ್ - ಮೂಗಿನಲ್ಲಿ ಅಡಚಣೆ ಅಥವಾ ದಟ್ಟಣೆ, ಮೂಗಿನಲ್ಲಿ ಕಪ್ಪು / ರಕ್ತಸಿಕ್ತ ದ್ರವ
  • ಕೆನ್ನೆಯ ಮೂಳೆಯ ಮೇಲೆ ನೋವು
  • ಒಂದು ಬದಿಯ ಮುಖದ ನೋವು ಅಥವಾ ಮರಗಟ್ಟುವಿಕೆ
  • ಮೂಗಿನ ಮೇಲೆ ಕಪ್ಪು ಬಣ್ಣ
  • ಹಲ್ಲುನೋವು, ಹಲ್ಲುಗಳು ಸಡಿಲಗೊಳ್ಳುವುದು, ದವಡೆಯ ಒಳಹೋಗುವುದು
  • ಕಣ್ಣು ನೋವು ಅಥವಾ ಮಸುಕಾಗುವ ದೃಷ್ಟಿ
  • ಜ್ವರ, ಚರ್ಮದ ಗಾಯ
  • ಎದೆ ನೋವು, ಉಸಿರಾಟದ ಸಮಸ್ಯೆ

ಏನು ಮಾಡಬೇಕು?

  • ಹೈಪರ್ಗ್ಲೈಸೀಮಿಯಾವನ್ನು ನಿಯಂತ್ರಿಸಿ
  • ಕೋವಿಡ್-19 ನಂತರ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನೋಡಿ
  • ಸ್ಟೀರಾಯ್ಡ್ ಅನ್ನು ಸರಿಯಾದ ಸಮಯ, ಸರಿಯಾದ ಪ್ರಮಾಣ ಮತ್ತು ಸರಿಯಾದ ಅವಧಿಯಲ್ಲಿ ಬಳಸಿ
  • ಆಮ್ಲಜನಕ ಚಿಕಿತ್ಸೆಯ ಸಮಯದಲ್ಲಿ ಶುದ್ಧ ನೀರನ್ನು ಬಳಸಿ
  • ಪ್ರತಿಜೀವಕಗಳು / ಆಂಟಿಫಂಗಲ್​ಳನ್ನು ಸರಿಯಾದ ರೀತಿಯಲ್ಲಿ ಬಳಸಿ

ಏನು ಮಾಡಬಾರದು?

  • ಎಚ್ಚರಿಕೆ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಗುರುತಿಸಿ
  • ಮೂಗಿನಲ್ಲಿ ಸಮಸ್ಯೆಯಾಗುವ ಎಲ್ಲ ಪ್ರಕರಣಗಳನ್ನು ಬ್ಯಾಕ್ಟೀರಿಯಾದ ಸೈನುಟಿಸ್ ಪ್ರಕರಣಗಳಾಗಿ ಪರಿಗಣಿಸಬೇಡಿ
  • ಶಿಲೀಂಧ್ರ ರೋಗಶಾಸ್ತ್ರವನ್ನು ಪತ್ತೆಹಚ್ಚಲು ಸೂಕ್ತವಾದ ಪರೀಕ್ಷೆಗೆ ಒಳಗಾಗಲು ಹಿಂಜರಿಯಬೇಡಿ
  • ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಯನ್ನು ಪ್ರಾರಂಭಿಸಲು ಹೆಚ್ಚು ಸಮಯ ಕಳೆದುಕೊಳ್ಳಬೇಡಿ

ಕಪ್ಪು ಶಿಲೀಂಧ್ರ ಸೋಂಕಿನ ಯಾವುದೇ ರೋಗಲಕ್ಷಣಗಳನ್ನು ನೀವು ಗಮನಿಸಿದರೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವದನ್ನು ಅರ್ಥಮಾಡಿಕೊಳ್ಳಲು ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.