ಕೋಪನ್ಹೇಗನ್( ಡೆನ್ಮಾರ್ಕ್): ಯುರೋಪ್ನಲ್ಲಿ ಶ್ವಾಸಕೋಶ ರೋಗಗಳ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಕರೆ ನೀಡಿದ್ದಾರೆ.
ಕೋಪನ್ಹೇಗನ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಬ್ಲ್ಯೂಎಚ್ಒನ ಯುರೋಪ್ನ ಪ್ರಾದೇಶಿಕ ನಿರ್ದೇಶಕರಾಗಿರುವ ಹನ್ಸ್ ಹೆನ್ರಿ ಪಿ ಕ್ಲುಗೆ, ಇನ್ಫುಯಂಜಾ ಸೋಂಕು ಮತ್ತು ಆಸ್ಪತ್ರೆ ದಾಖಲೀಕರಣ ಹೆಚ್ಚುತ್ತಿದೆ. ಮುಂಬರುವ ವಾರದಲ್ಲಿ ಮತ್ತಷ್ಟು ಪ್ರಕರಣಗಳ ಸಂಖ್ಯೆಗಳಲ್ಲಿ ಏರಿಕೆ ಕಾಣಬಹುದಾಗಿದ್ದು, ಈ ಸಂಬಂಧ ಆರೋಗ್ಯ ವ್ಯವಸ್ಥೆಗಳನ್ನು ಸಿದ್ಧಗೊಳಿಸುವಂತೆ ಕರೆ ನೀಡಿದ್ದಾರೆ.
ನೆದರ್ಲ್ಯಾಂಡ್ನಲ್ಲಿ ಶ್ವಾಸಕೋಶದ ಸಮಸ್ಯೆಗಳು ಹೆಚ್ಚಳ ಕಂಡು ಬಂದಿದೆ ಎಂದು ನ್ಯಾಷನಲ್ ಇನ್ಸಿಟಿಟ್ಯೂಟ್ ಫಾರ್ ಪಬ್ಲಿಕ್ ಹೆಲ್ತ್ ಅಂಡ್ ದಿ ಎನ್ವಿರಾನ್ಮೆಂಟ್ (ಆರ್ಐವಿಎಂ) ತಿಳಿಸಿದೆ.
ಕೋವಿಡ್ 19 ಸೇರಿದಂತೆ, ಇನ್ಫುಯೆಂಜಾ ಸೋಂಕು ಮತ್ತು ಋತುಮಾನದ ಸೋಂಕುಗಳು ಸಾರ್ವಜನಿಕವಾಗಿ ಹೆಚ್ಚಳ ಕಂಡಿದೆ. ಜ್ವರ ರೀತಿಯ ಲಕ್ಷಣ ಹೊಂದಿರುವ ಸೋಂಕುಗಳು ಕಳೆದ ಒಂದು ವಾರದಿಂದ ಹೆಚ್ಚಳ ಕಂಡಿದೆ. ಕಳೆದ ವಾರದಿಂದ ಈ ಪ್ರಕರಣದಲ್ಲಿ ವೈದ್ಯಕೀಯ ದೂರುಗಳಲ್ಲಿ ತೀವ್ರ ಏರಿಕೆ ಕಂಡು ಬಂದಿದೆ, ಇತ್ತೀಚಿನ ದತ್ತಾಂಶ ವರದಿಯಂತೆ ಇನ್ಫುಯೆಂಜಾ ಸೋಂಕಿನ ಪ್ರಕರಣಗಳಲ್ಲಿ ಶೇ 35ರಷ್ಟು ಏರಿಕೆ ಕಂಡಿದೆ ಎಂದು ಆರ್ಐವಿಎಂ ತಿಳಿಸಿದೆ.
ಇಟಲಿಯ ಆಸ್ಪತ್ರೆಗಳಲ್ಲಿ ಜ್ವರದ ಅಲೆ ಹೆಚ್ಚಾಗಿದ್ದು, ಇದರ ವೈದ್ಯಕೀಯ ಕ್ಷೇತ್ರದಲ್ಲಿ ಒತ್ತಡ ಹೆಚ್ಚಿದೆ. ಕಳೆದ 15 ವರ್ಷದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದೆ ಎಂದು ಇಟಾಲಿಯನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಋತುಮಾನದ ಜ್ವರ ಪ್ರಕರಣಗಳಲ್ಲಿ ತುರ್ತು ಕೊಠಡಿಗಳ ಸಂಖ್ಯೆಯಲ್ಲಿ ಶೇ 20 ರಿಂದ ಶೇ 30ರಷ್ಟು ಏರಿಕೆ ಕಂಡಿದೆ ಎಂದು ಇಟಾಲಿಯನ್ ಫೆಡರೇಷನ್ ಆಫ್ ಹೆಲ್ತ್ ಅಥಾರಿಟಿಸ್ ಮತ್ತು ಆಸ್ಪತ್ರೆ (ಎಫ್ಐಎಎಸ್ಒ) ವರದಿ ಆಗಿದೆ.
ಈ ನಡುವೆ ಸ್ಪಾನಿಷ್ ಸರ್ಕಾರವೂ ಆಸ್ಪತ್ರೆಗಳಲ್ಲಿ ಫೇಸ್ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳಿಸಿದೆ. ಸ್ಪೇನ್ನಲ್ಲಿ ಶ್ವಾಸಕೋಶದ ಅನಾರೋಗ್ಯ ಪ್ರಕರಣದಲ್ಲಿ ಏರಿಕೆ ಕಂಡಿದ್ದು, ಲಕ್ಷದಲ್ಲಿ 952 ಪ್ರಕರಣಗಳು ದಾಖಲಾಗಿದೆ. ಇದು ಸೋಂಕಿನ ತೀವ್ರತೆ ಹೆಚ್ಚಿದೆ ಎಂದು ಆರೋಗ್ಯ ಸಚಿವ ಮೊನಿಕಾ ಗರ್ಸಿಯಾ ಎಚ್ಚರಿಕೆ ಮಾಡಿದೆ.
ಡಬ್ಲೂಎಚ್ಒ ಯುರೋಪ್ ಹೊಸ ಅಧ್ಯಯನದ ಪ್ರಕಾರ ಈ ಪ್ರದೇಶದಲ್ಲಿ, ಕೋವಿಡ್ 19 ಲಸಿಕೆಯ ಪರಿಣಾಮಕಾರಿ ಮತ್ತು ಸುರಕ್ಷತೆಯಿಂದ 1.4 ಮಿಲಿಯನ್ ಜನರ ರಕ್ಷಣೆ ಆಗಿದೆ ಎಂದು ಡಬ್ಲ್ಯೂಎಚ್ಒ ತಿಳಿಸಿದೆ. ಕೋವಿಡ್ 19 ಉಪತಳಿ ಜೆಎನ್.1 ಸೋಂಕು ಪ್ರಾಬಲ್ಯವನ್ನು ಹೊಂದಿ ವೇಗವಾಗಿ ಹರಡುತ್ತಿದೆ. ಹೆಚ್ಚಿದ ತೀವ್ರತೆಯನ್ನು ಸೂಚಿಸುವ ಪುರಾವೆಗಳ ಕೊರತೆಯ ಹೊರತಾಗಿಯೂ, ರೂಪಾಂತರದ ಅನಿರೀಕ್ಷಿತತೆಗೆ ನಿರಂತರ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ಕ್ಲುಗೆ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಕೋವಿಡ್ ಉಲ್ಬಣ: ಜೆಎನ್.1 ತಳಿ ವ್ಯಾಪಿಸುವ ಎಚ್ಚರಿಕೆ