ETV Bharat / sukhibhava

ಸ್ತನ ಕ್ಯಾನ್ಸರ್ ಅಪಾಯದ ಕುರಿತು ಅಘಾತಕಾರಿ ಅಂಶ ಕಂಡು ಹಿಡಿದ ಸಂಶೋಧಕರು.. ಏನದು ಅಪಾಯ? - ಆನುವಂಶಿಕ ಬದಲಾವಣೆ

ಇತ್ತೀಚಿನ ಅಧ್ಯಯನವೊಂದರಲ್ಲಿ, ಒಂದು ಸ್ತನದಲ್ಲಿ ಕ್ಯಾನ್ಸರ್ ಇರುವ ಮಹಿಳೆಯರು ನಿರ್ದಿಷ್ಟ ಆನುವಂಶಿಕ ಬದಲಾವಣೆಗಳನ್ನು ಹೊಂದಿದ್ದಲ್ಲಿ ಅವರ ಮತ್ತೊಂದು ಸ್ತನಕ್ಕೂ ಕ್ಯಾನ್ಸರ್ ಹರಡುವ ಸಾಧ್ಯತೆ ಇದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.

breast cancer
ಸ್ತನ ಕ್ಯಾನ್ಸರ್
author img

By

Published : Jan 21, 2023, 1:09 PM IST

ನ್ಯೂಯಾರ್ಕ್(ಅಮೆರಿಕ): ಮಹಿಳೆಯರನ್ನು ಬಾಧಿಸುವ ಹಲವಾರು ಆರೋಗ್ಯ ಸಮಸ್ಯೆಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಸ್ತನದ ಕ್ಯಾನ್ಸರ್ ಸಾಮಾನ್ಯ ಎನ್ನುವಂತಾಗಿದ್ದು, ಸ್ತನದ ಅಂಗಾಂಶಗಳಲ್ಲಿ ಕ್ಯಾನ್ಸರ್ ಜೀವಕೋಶಗಳು ರೂಪಿತವಾಗುತ್ತವೆ. ಇದಕ್ಕೆ ಸಂಬಂಧಿಸಿದಂತೆ ಮೇಯೊ ಕ್ಲಿನಿಕ್ ಸಮಗ್ರ ಕ್ಯಾನ್ಸರ್ ಸೆಂಟರ್ ಅಧ್ಯಯನವೊಂದನ್ನು ನಡೆಸಿದ್ದು, ಅಘಾತಕಾರಿ ಅಂಶವನ್ನು ತಿಳಿಸಿದೆ.

ಮೇಯೊ ಕ್ಲಿನಿಕ್ ಸಮಗ್ರ ಕ್ಯಾನ್ಸರ್ ಸೆಂಟರ್ ನಡೆಸಿದ ಅಧ್ಯಯನದ ಆವಿಷ್ಕಾರಗಳನ್ನು ಜರ್ನಲ್ ಆಫ್ ಕ್ಲಿನಿಕಲ್ ಆಂಕೊಲಾಜಿಯಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ 'ಒಂದು ಸ್ತನದಲ್ಲಿ ಕ್ಯಾನ್ಸರ್ ಹೊಂದಿರುವ ಮಹಿಳೆಯರು ನಿರ್ದಿಷ್ಟ ಆನುವಂಶಿಕ ಬದಲಾವಣೆಗಳನ್ನು ಹೊಂದಿದ್ದಲ್ಲಿ ಅವರ ಇನ್ನೊಂದು ಸ್ತನದಲ್ಲೂ ಕ್ಯಾನ್ಸರ್ ಬರುವ ಸಾಧ್ಯತೆಯಿದೆ' ಎಂದು ತಿಳಿಸಿದೆ.

Cancer Risk Estimates Related to Susceptibility (CARRIERS) ಒಕ್ಕೂಟಕ್ಕೆ ಸಂಬಂಧಿಸಿದ ಸುಮಾರು 15,104 ಮಹಿಳೆಯರ ಡೇಟಾವನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಜರ್ಮ್‌ಲೈನ್ BRCA1, BRCA2 ಅಥವಾ CHEK2 ರೂಪಾಂತರವನ್ನು ಹೊಂದಿರುವ ರೋಗಿಗಳು ಎರಡೂ ಸ್ತನಗಳಲ್ಲಿ ಕ್ಯಾನ್ಸರ್ ಹಬ್ಬಿಸುವ ಅಪಾಯವನ್ನು ಎರಡು ಪಟ್ಟು ಹೆಚ್ಚು ಹೊಂದಿರುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಜೊತೆಗೆ PALB2 ವಾಹಕಗಳಲ್ಲಿ ಈಸ್ಟ್ರೊಜೆನ್ ರಿಸೆಪ್ಟರ್-ನೆಗಿಟಿವ್​ ಕಾಯಿಲೆ ಇರುವವರಲ್ಲಿ ಸಹ ವ್ಯತಿರಿಕ್ತ ಸ್ತನ ಕ್ಯಾನ್ಸರ್ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.

'ಜರ್ಮ್‌ಲೈನ್ ರೂಪಾಂತರಗಳನ್ನು ಹೊಂದಿರುವ ಸ್ತನ ಕ್ಯಾನ್ಸರ್​ಗೆ ಒಳಗಾದ ಹೆಚ್ಚಿನ ರೋಗಿಗಳು, ಅವರ ಮತ್ತೊಂದು ಸ್ತನದಲ್ಲೂ ಕ್ಯಾನ್ಸರ್ ವ್ಯಾಪಿಸಿಕೊಳ್ಳುವ ಹೆಚ್ಚಿನ ಅಪಾಯವಿದೆ' ಎಂದು ಮೇಯೊ ಕ್ಲಿನಿಕ್ ಸಮಗ್ರ ಕ್ಯಾನ್ಸರ್ ಸೆಂಟರ್​ನ ಎಂಡಿ ಸಿದ್ಧಾರ್ಥ ಯಾದವ್ ತಿಳಿಸಿದ್ದಾರೆ.

ಇದನ್ನೂ ಓದಿ: ಸ್ತನ ಕ್ಯಾನ್ಸರ್, ಭಯಬೇಡ.. ತಜ್ಞರಿಂದ ಇದರ ಬಗ್ಗೆ ಒಂದಿಷ್ಟು ಟಿಪ್ಸ್‌..

ಇತರ ಕ್ಯಾನ್ಸರ್‌ಗಳಂತೆ ಸ್ತನದ ಕ್ಯಾನ್ಸರ್ ಸ್ತನದ ಸುತ್ತಲಿನ ಅಂಗಾಂಶಕ್ಕೆ ಆಕ್ರಮಣ ಮಾಡಬಹುದು ಮತ್ತು ಬೆಳೆಯಬಹುದು. ಇದು ದೇಹದ ಇತರ ಭಾಗಗಳಿಗೆ ಹರಡಬಹುದು ಮತ್ತು ಹೊಸ ಗೆಡ್ಡೆಗಳನ್ನು ರೂಪಿಸಬಹುದು. ಇದು ಸಂಭವಿಸಿದಾಗ ಅದನ್ನು ಮೆಟಾಸ್ಟಾಸಿಸ್ ಎಂದು ಕರೆಯಲಾಗುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.

ಸ್ತನ ಕ್ಯಾನ್ಸರ್ ಲಕ್ಷಣ: ಹಾರ್ಮೋನ್, ಜೀವನಶೈಲಿ ಮತ್ತು ಪರಿಸರದ ಅಂಶಗಳು ಸ್ತನ ಕ್ಯಾನ್ಸರ್‌ ಸಾಧ್ಯತೆ ಹೆಚ್ಚಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಸ್ತನ ಕ್ಯಾನ್ಸರ್ ಮೊದಲ ಲಕ್ಷಣ ಎಂದರೆ ಸ್ತನ ಪ್ರದೇಶದ ಸುತ್ತಲೂ ರೂಪುಗೊಂಡ ಒಂದು ಗಡ್ಡೆ. ಇದು ಮಹಿಳೆಯ ಋತು ಚಕ್ರದೊಂದಿಗೆ ಸಂಬಂಧಿಸಿಲ್ಲದಿರಬಹುದು. 5-6 ಪ್ರತಿಶತದಷ್ಟು ಜನರು ಆನುವಂಶೀಯತೆಯಿಂದ ಸ್ತನ ಕ್ಯಾನ್ಸರ್‌‌ಗೆ ಒಳಗಾಗುತ್ತಾರೆ ಎಂದು ವೈದ್ಯರು ಹೇಳುತ್ತಾರೆ. ಮಹಿಳೆಯರಲ್ಲಿ ಹೋಲಿಸಿದರೆ ಪುರುಷರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ.

ಇದನ್ನೂ ಓದಿ: ಸ್ತನ ಕ್ಯಾನ್ಸರ್​ ಅಡ್ಡ ಪರಿಣಾಮಗಳಿಗೆ ಕಡಿವಾಣ​ ಹಾಕುತ್ತೆ ವ್ಯಾಯಾಮ: ಅಧ್ಯಯನ ವರದಿ

ಸ್ತನ ಕ್ಯಾನ್ಸರ್ ಕುರಿತು ಮಹಿಳೆಯರಿಗೆ ಜಾಗೃತಿ: 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಪ್ರತಿವರ್ಷ ಮ್ಯಾಮೋಗ್ರಾಫಿ ಸಹಿತ ಸ್ತನ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಉತ್ತಮ. ಅದೇ ರೀತಿಯಲ್ಲಿ 40 ರಿಂದ 44 ವರ್ಷದವರೆಗಿನ ಮಹಿಳೆಯರು ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಒಂದು ವೇಳೆ, ತಮ್ಮ ಕುಟುಂಬದ ಸದಸ್ಯರಲ್ಲಿ ಸ್ತನ ಕ್ಯಾನ್ಸರ್​​ನಂತಹ ಪ್ರಕರಣಗಳು ಕಂಡು ಬಂದಿದ್ದಲ್ಲಿ ಅಥವಾ ಸ್ತನದಲ್ಲಿ ಗೆಡ್ಡೆ ಇದೆ ಎಂಬ ಅನುಮಾನ ಕಂಡು ಬಂದಲ್ಲಿ ವಯಸ್ಕ ಮಹಿಳೆಯರು ತಪಾಸಣೆ ಮಾಡಿಸಿಕೊಳ್ಳಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.