ETV Bharat / sukhibhava

ನಿಯಮಿತ ದೈಹಿಕ ಚಟುವಟಿಕೆಯಿಂದ ಮಕ್ಕಳಲ್ಲಿನ ಒತ್ತಡ ಕಡಿಮೆ; ಅಧ್ಯಯನ - ವ್ಯಾಯಾಮಗಳು ಸಹಕಾರಿ

ಮಕ್ಕಳಲ್ಲಿನ ಪರೀಕ್ಷಾ ಒತ್ತಡ ಸೇರಿದಂತೆ ಹಲವು ಒತ್ತಡ ನಿವಾರಣೆಗೆ ಪ್ರತಿನಿತ್ಯದ ದೈಹಿಕ ಚಟುವಟಿಕೆಗಳು ಸಹಾಯ ಮಾಡುತ್ತವೆ ಎಂದು ಅಧ್ಯಯನ ತಿಳಿಸಿದೆ.

Reduce stress in children with regular physical activity

author img

By ETV Bharat Karnataka Team

Published : Sep 7, 2023, 1:32 PM IST

ಲಂಡನ್​: ಪ್ರಸ್ತುತ ಒತ್ತಡ ಅನ್ನುವುದು ಬಹುತೇಕರನ್ನು ಕಾಡುತ್ತಿರುವ ಸಮಸ್ಯೆಗಳಲ್ಲೊಂದು. ಶಾಲಾ ಮಕ್ಕಳಲ್ಲಿ ಉಂಟಾಗುವ ಒತ್ತಡವನ್ನು ನಿವಾರಿಸುವಲ್ಲಿ ಪ್ರತಿನಿತ್ಯದ ದೈಹಿಕ ವ್ಯಾಯಾಮಗಳು ಸಹಕಾರಿಯಾಗಿದ್ದು, ಇದರಿಂದ ಅವರು ಉತ್ತಮವಾಗಿ ಚೇತರಿಸಿಕೊಳ್ಳಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಜರ್ನಲ್​ ಆಫ್​ ಸೈನ್ಸ್​ ಆ್ಯಂಡ್​​ ಮೆಡಿಸಿನ್​ ಇನ್​ ಸ್ಪೋಟ್ಸ್​​ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿನಂತೆ ದಿನದಲ್ಲಿ ಒಂದು ಗಂಟೆಗಿಂತ ಹೆಚ್ಚು ವ್ಯಾಯಾಮ ಮಾಡಿದ ಭಾಗಿದಾರರಲ್ಲಿ ಒತ್ತಡದ ಹಾರ್ಮೋನ್ ಕಾರ್ಟಿಸೋಲ ಕಡಿಮೆ ಉತ್ಪಾದನೆ ಆಗಿದೆ. ಕಡಿಮೆ ವ್ಯಾಯಾಮ ಚಟುವಟಿಕೆಯಲ್ಲಿ ಭಾಗಿಯಾದ ಮಕ್ಕಳಲ್ಲಿ ಇದರ ಪ್ರಮಾಣ ಹೆಚ್ಚಿದೆ.

ನಿಯಮಿತ ಕ್ರಿಯಾಶೀಲದಿಂದ ಇರುವ ಮಕ್ಕಳು ಮಾನೋವೈಜ್ಞಾನಿಕ ಒತ್ತಡವನ್ನು ಸಾಮಾನ್ಯಕ್ಕಿಂತ ಕಡಿಮೆ ಮಾಡಿದ್ದಾರೆ ಎಂದು ಸ್ವಿಟ್ಜರ್ಲೆಂಡ್​ನ ಯುನಿವರ್ಸಿಟಿ ಆಫ್​ ಬಸೆಲ್​ನ ಪ್ರಮುಖ ಅಧ್ಯಯನಕಾರ ಮನ್ಯೂಯಲ್​ ಹಂಕೆ ತಿಳಿಸಿದ್ದಾರೆ.

ಮಕ್ಕಳು ನಿಯಮಿತವಾಗಿ ಓಡು, ಈಜು ಮತ್ತು ಏರುವಿಕೆಯಂತಹ ಚಟುವಟಿಕೆಗಳಿಂದ ಮೆದುಳಿನ ಕಲಿಕೆ ಸಕಾರಾತ್ಮಕವಾಗಿ ಕಾರ್ಟಿಸೋಲ್ ಏರಿಕೆಯೊಂದಿಗೆ ಸಂಬಂಧ ತೋರಿಸಿದೆ. ದೇಹವೂ ಅರಿವಿನ ಸಹಯೋಗವೂ ಉತ್ತಮವಾಗಿ ಪ್ರತಿಕ್ರಿಯಿಸಿದೆ. ಈ ಸಕಾರಾತ್ಮಕ ಭಾವನೆಯು ಪರೀಕ್ಷೆ ಸಮಯದಲ್ಲಿ ಏಕಾಗ್ರತೆಯ ಕಾರ್ಟಿಸೋಲಾ ಏರಿಕೆಯನ್ನು ​​ತಡೆಯಲು ಸಹಾಯ ಮಾಡುತ್ತದೆ ಎಂದು ಸೆಬಸ್ಟಿಯನ್​ ಲುಡೆಗ ತಿಳಿಸಿದ್ದಾರೆ.

ಈ ಸಂಬಂಧ 10 ರಿಂದ 13 ವರ್ಷದ 110 ಮಕ್ಕಳನ್ನು ಅಧ್ಯಯನ ನಡೆಸಲಾಗಿದ್ದು, ಅವರ ದೈನಂದಿನ ಚಟುವಟಿಕೆ ಅರಿಯಲು ವಾರಗಳ ಕಾಲ ಸೆನ್ಸಾರ್​ ಟ್ರ್ಯಾಕಿಂಗ್​ ಅನ್ನು ಅಳವಡಿಸಲಾಗಿದೆ. ಬಳಿಕ ಭಾಗಿದಾರರನ್ನು ಪ್ರಯೋಗಾಲಯದ ಪರೀಕ್ಷೆ ನಡೆಸಲಾಗಿದ್ದು, ಇಲ್ಲಿ ಎರಡು ಗುಂಪುಗಳಾಗಿ ಮಾಡಲಾಗಿದೆ. ಒಂದು ಗುಂಪು ಒತ್ತಡದ ಕೆಲಸ ಹೊಂದಿದ್ದು, ಮತ್ತೊಂದು ಒತ್ತಡ ರಹಿತ ನಿಯಂತ್ರಣ ಟಾಸ್ಕ್​​ ಹೊಂದಿದ್ದರು.

ಮಕ್ಕಳ ದೈಹಿಕ ಒತ್ತಡದ ಪ್ರಕ್ರಿಯಿಯೆಯನ್ನು ಲಾಲಾರಸದಲ್ಲಿ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ನ ಸಾಂದ್ರತೆ ಮೂಲಕ ಪರೀಕ್ಷೆ ನಡೆಸಲಾಗಿದೆ.

ಈ ಲಾಲಾರಸದ ಮಾದರಿಗಳ ವಿಶ್ಲೇಷಣೆ ನಡೆಸಿದ್ದು, ಸಂಶೋಧಕರು ಒತ್ತಡದ ಟಾಸ್ಕ್​ನಲ್ಲಿನ ಅರಿವಿನ ಪ್ರತಿಕ್ರಿಯೆಯನ್ನು ಎಲೆಕ್ಟ್ರೊಎನಸೆಫಾಲೊಗ್ರಾಮ್​ ಮೂಲಕ ಬ್ರೈನ್​ ವೇವ್​ ಅನ್ನು ಪರೀಕ್ಷೆ ನಡೆಸಲಾಗಿದೆ.

ಒತ್ತಡವೂ ಚಿಂತನೆಯೊಂದಿಗೆ ಅಡ್ಡಿಪಡಿಸಿದೆ. ಇದರ ಅತಿರೇಕದ ಕ್ರಮವಾದ ಬ್ಲಾಕ್​ ಔಟ್ (ಶೂನ್ಯ)ವಾಗುವುದು ನಮಗೆಲ್ಲರಿಗೂ ತಿಳಿದಿದೆ ಎಂದು ಹನ್ಕೆ ತಿಳಿಸಿದ್ದಾರೆ. ತಂಡವೂ ದೈಹಿಕ ಚಟುವಟಿಕೆಗಳು ಒತ್ತಡದ ಅರಿವಿನ ಪರಿಣಾಮದ ಮೇಲೆ ಪ್ರಭಾವ ಬೀರುತ್ತದೆ ಎಂಬು ನಿಟ್ಟಿನಲ್ಲಿ ನೋಡುವ ಗುರಿಯನ್ನು ಹೊಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಹೈಪರ್​ ಆ್ಯಕ್ಟಿವ್​​ ಸಮಸ್ಯೆ ಗಂಭೀರ ಮಾನಸಿಕ ಆರೋಗ್ಯದೊಂದಿಗೆ ಹೊಂದಿದೆ ಸಂಬಂಧ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.